ಪ್ರಸಕ್ತ (2026-27) ಸಾಲಿನ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದ ವಿಜೇತ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳಿಗೆ ಹಾಗೂ ಜಿಲ್ಲಾ ಮಟ್ಟದ ನೇರ ಸ್ಪರ್ಧೆಗಳಿಗಾಗಿ ಸೆಪ್ಟೆಂಬರ್ 24 ರಂದು ಕೊಡಗು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಲಾಗಿದೆ.
1. ಕ್ರೀಡಾಂಗಣ ಮತ್ತು ಸ್ಪರ್ಧೆಗಳ ವಿವರ:
ಕೂಡಿಗೆ ಕ್ರೀಡಾ ಶಾಲೆ ಮೈದಾನ:
ಕ್ರೀಡೆಗಳು: ಅಥ್ಲೆಟಿಕ್ಸ್, ವಾಲಿಬಾಲ್, ಫುಟ್ಬಾಲ್ (ಪುರುಷರಿಗೆ ಮಾತ್ರ), ಖೋ-ಖೋ, ಕಬಡ್ಡಿ, ಬಾಸ್ಕಟ್ಬಾಲ್, ಕುಸ್ತಿ, ಹಾಕಿ, ಹ್ಯಾಂಡ್ಬಾಲ್, ಥ್ರೋಬಾಲ್, ಬಾಲ್ ಬ್ಯಾಡ್ಮಿಂಟನ್, ಯೋಗಾಸನ.
ಆಯ್ಕೆ ಕ್ರೀಡೆಗಳು: ಟೆನ್ನಿಸ್, ನೆಟ್ಬಾಲ್, ಟೇಕ್ವಾಂಡೋ, ಜುಡೋ, ವುಷು ಮತ್ತು ಕರಾಟೆ.
ಯೋಗಾಸನ ಸ್ಪರ್ಧೆಗೆ ಕಡ್ಡಾಯ ಆಸನಗಳು: ಪಾದ ಹಸ್ತಾಸನ, ಆಕರ್ಣ ಧನುರಾಸನ, ಊರ್ಧ್ವ ಧನುರಾಸನ ಮತ್ತು ಅರ್ಧ ಮತ್ಸೇಂದ್ರಾಸನ.
ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ:
ಕ್ರೀಡೆಗಳು: ಷಟಲ್ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್.
ಈಜು ಸ್ಪರ್ಧೆಗಳು (ಮುಕ್ತ ಪಂದ್ಯಾವಳಿ – ಪುರುಷರು & ಮಹಿಳೆಯರಿಗೆ):
50, 100, 200, 400 ಮೀ. ಫ್ರೀಸ್ಟೈಲ್
50, 100, 200 ಮೀ. ಬ್ಯಾಕ್ಸ್ಟ್ರೋಕ್
50, 100, 200 ಮೀ. ಬ್ರೆಸ್ಟ್ಸ್ಟ್ರೋಕ್
50, 100 ಮೀ. ಬಟರ್ಫ್ಲೈ
4100 ಮೀ. ಫ್ರೀಸ್ಟೈಲ್ ರಿಲೇ, 4100 ಮೀ. ಮೆಡ್ಲೆ ರಿಲೇ
450 ಮೀ. ಮಿಕ್ಸಡ್ ಫ್ರೀಸ್ಟೈಲ್ ರಿಲೇ, 450 ಮೀ. ಮಿಕ್ಸಡ್ ಮೆಡ್ಲೆ ರಿಲೇ.
2. ಭಾಗವಹಿಸುವಿಕೆ ಮತ್ತು ಕಡ್ಡಾಯ ನಿಯಮಗಳು:
ಅರ್ಹತೆ: ತಾಲ್ಲೂಕು ಮಟ್ಟದ ಅಥ್ಲೆಟಿಕ್ಸ್ (ವೈಯಕ್ತಿಕ ಸ್ಪರ್ಧೆ) ಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರು ಮತ್ತು ಗುಂಪು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ತಂಡಗಳಿಗೆ ಮಾತ್ರ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.
ಅಗತ್ಯ ದಾಖಲೆಗಳು: ಭಾಗವಹಿಸುವ ಕ್ರೀಡಾಪಟುಗಳು ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಬುಕ್ ಪ್ರತಿ ಹಾಗೂ 2 ಭಾವಚಿತ್ರಗಳನ್ನು ಕಡ್ಡಾಯವಾಗಿ ತರಬೇಕು.
ನೋಂದಣಿ: ಆನ್ಲೈನ್ ನೋಂದಣಿ ಕಡ್ಡಾಯವಾಗಿದ್ದು, ಪೋರ್ಟಲ್ dasaracmcut.in ಮೂಲಕ ನೋಂದಾಯಿಸಬಹುದು. ಪಂದ್ಯಾವಳಿಯ ದಿನ ಬೆಳಿಗ್ಗೆ 9:30 ರ ಒಳಗೆ ಸ್ಥಳದಲ್ಲೇ ಹೆಸರು ನೋಂದಾಯಿಸಿಕೊಳ್ಳುವುದು ಕಡ್ಡಾಯ.
ನಿಯಮ: ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಟಿ. ವಿಸ್ಮಯಿ ಅವರು ತಿಳಿಸಿದ್ದಾರೆ.
3. ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು:
ಆಸಕ್ತ ಕ್ರೀಡಾಪಟುಗಳು ಹೆಚ್ಚಿನ ಮಾಹಿತಿಗಾಗಿ ಹಾಗೂ ಭಾಗವಹಿಸಲು ಕೆಳಗಿನ ತಾಲ್ಲೂಕು ಪ್ರತಿನಿಧಿಗಳನ್ನು ಸಂಪರ್ಕಿಸಬಹುದು:
ಮಡಿಕೇರಿ ತಾಲ್ಲೂಕು:
ಮಹಾಬಲ: 9980887499
ಮನು: 9480032712
ಸೋಮವಾರಪೇಟೆ ಮತ್ತು ಕುಶಾಲನಗರ ತಾಲ್ಲೂಕು:
ಸುರೇಶ್: 8892272972
ಪ್ರದೀಪ್: 9342563014
ಪೊನ್ನಂಪೇಟೆ ಮತ್ತು ವಿರಾಜಪೇಟೆ ತಾಲ್ಲೂಕು:
ಸುಬ್ಬಯ್ಯ: 8197790350
ಗಣಪತಿ: 8951287301



