ಉಪನ್ಯಾಸಕಿ ದಮಯಂತಿ ತಿಮ್ಮಯ್ಯಗೆ ‘ಕನ್ನಡ ಪಯಶ್ವಿನಿ ಶಿಕ್ಷಣ ರತ್ನ’ ಪ್ರಶಸ್ತಿ ಪ್ರಧಾನ

Damayanthi Thimmaiah

Share this post :

ಕಾಸರಗೋಡಿನ ನುಳ್ಳಿಪ್ಪಾಡಿಯ ಕನ್ನಡ ಭವನದಲ್ಲಿ ದಿನಾಂಕ 26.07.2026 ರಂದು ನಡೆದ “ಕನ್ನಡ ಗಡಿನಾಡು ಸಮ್ಮೇಳನ-2026” ಹಾಗೂ ಕನ್ನಡ ಭವನ ಮತ್ತು ಗ್ರಂಥಾಲಯದ ರಜತ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ವಿರಾಜಪೇಟೆಯ ಕಾವೇರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಶ್ರೀಮತಿ ಕಾಳೆಂಗಡ ದಮಯಂತಿ ತಿಮ್ಮಯ್ಯ ಅವರಿಗೆ ಪ್ರತಿಷ್ಠಿತ “ಕನ್ನಡ ಪಯಶ್ವಿನಿ ಶಿಕ್ಷಣ ರತ್ನ ಅಚೀವ್ ಮೆಂಟ್ ಅವಾರ್ಡ್-2026” ನೀಡಿ ಗೌರವಿಸಲಾಯಿತು. ಶಿಕ್ಷಣ, ಬರಹ ಹಾಗೂ ಕನ್ನಡ ಕ್ಷೇತ್ರಕ್ಕೆ ಸಲ್ಲಿಸಿದ 30 ವರ್ಷಗಳ ಗಣನೀಯ ಸೇವೆಯನ್ನು ಪರಿಗಣಿಸಿ ನೀಡಲಾದ ಈ ಪ್ರಶಸ್ತಿಯನ್ನು ಶ್ರೀಮದೇಡನೀರು ಶ್ರೀ ಶ್ರೀಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ದಿವ್ಯಹಸ್ತದಿಂದ ಪ್ರದಾನ ಮಾಡಿದರು.

coorg buzz
coorg buzz