ನಕ್ಸಲ್ ನಿಗ್ರಹ ಪಡೆ ವತಿಯಿಂದ ಬುಡಕಟ್ಟು ಜನಾಂಗದವರಿಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

Share this post :

ವಿರಾಜಪೇಟೆ: ವಿರಾಜಪೇಟೆ ತಾಲೂಕಿನ ಆರ್ಜಿ ಗ್ರಾಮದಲ್ಲಿನ ವಾಲ್ಮೀಕಿ ಭವನದಲ್ಲಿ ನಕ್ಸಲ್ ನಿಗ್ರಹ ಪಡೆ ವತಿಯಿಂದ ಅತ್ಯಂತ ವ್ಯವಸ್ಥಿತವಾದ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿತ್ತು. ನಕ್ಸಲ್ ಪೀಡಿತ ಪ್ರದೇಶಗಳ ಬುಡಕಟ್ಟು ಜನಾಂಗದವರ ಆರೋಗ್ಯ ಹಿತದೃಷ್ಟಿಯಿಂದ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮವು ಜನರ ಅಭೂತಪೂರ್ವ ಸ್ಪಂದನೆಯೊAದಿಗೆ ಯಶಸ್ವಿಯಾಯಿತು.

ನಕ್ಸಲ್ ನಿಗ್ರಹ ಪಡೆಯ ಪೊಲೀಸ್ ಅಧೀಕ್ಷಕರಾದ ಹರಿರಾಮ್ ಶಂಕರ್, ಅವರ ಸೂಕ್ತ ಮಾರ್ಗದರ್ಶನದಂತೆ, ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕು.ಬಿಂದು ಮಣಿ ಆರ್.ಎನ್, ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಆರೋಗ್ಯದ ಪ್ರಾಮುಖ್ಯತೆ ಹಾಗೂ ನಕ್ಸಲ್ ಪೀಡಿತ ದುರ್ಗಮ ಪ್ರದೇಶಗಳಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಅವರ ಮನೆಬಾಗಿಲಿಗೆ ತಲುಪಿಸುವ ಮತ್ತು ಅವರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಕೆ. ಅಮರನಾಥ್ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರು ಹಾಗೂ ಎ.ಬಿ ಶೆಟ್ಟಿ ಡೆಂಟಲ್ ಕಾಲೇಜಿನ ಅಸೋಸಿಯೇಟ್ ಡೀನ್ ಆಗಿರುವ ಡಾ. ಅಮರಶ್ರೀ ಅಮರನಾಥ್ ಶೆಟ್ಟಿ ಹಾಗೂ ಇತರೆ ವೈಧ್ಯರ ತಂಡವು ಕಾರ್ಯಕ್ರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಡಾ. ಅಮರಶ್ರೀ ಅಮರನಾಥ್ ಶೆಟ್ಟಿ ಅವರು ಕಾರ್ಯಕ್ರಮದ ಉದ್ದೇಶ ಹಾಗೂ ಶಿಬಿರದಲ್ಲಿ ಯಾವ ಯಾವ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂಬುದರ ಮಾಹಿತಿ ನೀಡಿದರು

ಕಾರ್ಯಕ್ರಮದ ವೇದಿಕೆಯಲ್ಲಿ ನಿಟ್ಟೆಯ ಎ.ಬಿ ಶೆಟ್ಟಿ ಡೆಂಟಲ್ ಕಾಲೇಜಿನ ಡಾ. ಶಿಲ್ಪ, ಮಂಗಳೂರಿನ ದೇರಳಕಟ್ಟೆಯ ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ಡಾ. ಕುಶಾಲ್, ಮಡಿಕೇರಿಯ ಇಕ್ಷ ಕಣ್ಣಿನ ಆಸ್ಪತ್ರೆ, ಡಾ. ಗುರುಪ್ರಸಾದ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಬೃಹತ್ ಶಿಬಿರದಲ್ಲಿ ಮೂಡುಬಿದಿರಿಯ ಕೆ. ಅಮರನಾಥ್ ಶೆಟ್ಟಿ ಚಾರಿಟೇಬಲ್ ಟ್ರಸ್ಟ್(ರಿ), ಮಂಗಳೂರಿನ ಎ.ಬಿ ಶೆಟ್ಟಿ ಮೆಮೋರಿಯಲ್ ಇನ್ಸಿ÷್ಟಟ್ಯೂಟ್ ಆಫ್ ಡೆಂಟಲ್ ಸೈನ್ಸ್ ನಿಟ್ಟೆ(ಡಿ.ಯು), ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ, ದೇರಳಕಟ್ಟೆ, ಮಂಗಳೂರು, ಮಡಿಕೇರಿಯ ಇಕ್ಷ ಕಣ್ಣಿನ ಆಸ್ಪತ್ರೆಯ ಸುಮಾರು ೫೦ ಪರಿಣಿತ ವೈದ್ಯರ ತಂಡ ಭಾಗವಹಿಸಿ ಜನರಿಗೆ ವೈದ್ಯಕೀಯ ಸೇವೆ ನೀಡಿದರು.

ವಿಶೇಷ ಸಾರಿಗೆ ವ್ಯವಸ್ಥೆ:
ಕೊಡಗು ಭಾಗದ ನಕ್ಸಲ್ ಪೀಡಿತ ಪ್ರದೇಶಗಳ ಕಾಡುಕುರುಬ, ಜೇನುಕುರುಬ, ಸೋಲಿಗ, ಎರವ, ಕುಡಿಯಾ ಬುಡಕಟ್ಟು ಜನಾಂಗದ ಒಟ್ಟು ೨೭೫ ಜನರು ಈ ಶಿಬಿರದ ಪ್ರಯೋಜನ ಪಡೆದರು. ವಿಶೇಷವೆಂದರೆ, ದುರ್ಗಮ ಪ್ರದೇಶಗಳಿಂದ ಬರಲು ಸಾಧ್ಯವಾಗದ ಗ್ರಾಮಸ್ಥರನ್ನು ಎಎನ್‌ಎಫ್ ಘಟಕದ ವಾಹನಗಳ ಮೂಲಕವೇ ಅವರ ಗ್ರಾಮಗಳಿಂದ ಕರೆತಂದು, ತಪಾಸಣೆ ಮುಗಿದ ಬಳಿಕ ಗೌರವಯುತವಾಗಿ ಮರಳಿ ಅವರ ಮನೆಗೆ ಬಿಡುವ ವ್ಯವಸ್ಥೆಯನ್ನು ನಕ್ಸಲ್ ನಿಗ್ರಹ ಪಡೆ ಮಾಡಿತ್ತು.

ಚಿಕಿತ್ಸಾ ವಿವರಗಳು:
ಶಿಬಿರದಲ್ಲಿ ಹೃದಯ, ಕಣ್ಣು, ಕಿವಿ, ಮೂಗು, ದಂತ, ಬಿ.ಪಿ, ಶುಗರ್, ಮೂಳೆ ಮತ್ತು ಗಂಟು, ಪ್ರಸೂತಿ ಮತ್ತು ಸ್ತಿçÃರೋಗ ಹಾಗೂ ಚರ್ಮರೋಗಕ್ಕೆ ಸಂಬAಧಿಸಿದAತೆ ಸಮಗ್ರ ತಪಾಸಣೆ ನಡೆಸಲಾಯಿತು.

ನೇತ್ರ ಚಿಕಿತ್ಸೆ: ಒಟ್ಟು ೧೮೦ ಜನರನ್ನು ತಪಾಸಣೆ ನಡೆಸಲಾಗಿದ್ದು, ೬೯ ಜನರಿಗೆ ಉಚಿತವಾಗಿ ಕನ್ನಡಕ ವಿತರಿಸಲು ಹಾಗೂ ೦೫ ಜನರಿಗೆ ಕಣ್ಣಿನ ಶಸ್ತçಚಿಕಿತ್ಸೆಯ ಅಗತ್ಯವಿದ್ದು, ಅವರಿಗೆ ಉಡುಪಿಯ ಪ್ರಸಾದ್ ನೇತ್ರಾಲಯದಲ್ಲಿ ಉಚಿತವಾಗಿ ಕನ್ನಡಕ ವಿತರಣೆ ಮಾಡುವ ಬಗ್ಗೆ ಹಾಗೂ ಶಸ್ತç ಚಿಕಿತ್ಸೆಯನ್ನು ಮಡಿಕೇರಿಯ ಇಕ್ಷ ಕಣ್ಣಿನ ಆಸ್ಪತ್ರೆಯಲ್ಲಿ ನೀಡಲು ಕ್ರಮ ಕೈಗೊಳ್ಳಲಾಗಿದೆ.

ದಂತ ಚಿಕಿತ್ಸೆ:
೯೩ ಜನರು ತಪಾಸಣೆಗೆ ಒಳಪಟ್ಟಿದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ೦೮ ಜನರನ್ನು ಎ.ಬಿ ಶೆಟ್ಟಿ ಡೆಂಟಲ್ ಕಾಲೇಜಿಗೆ ಉಲ್ಲೇಖಿಸಲಾಯಿತು.

ಜನರಲ್ ಮೆಡಿಸಿನ್:
೨೭೫ ಜನರ ತಪಾಸಣೆಯನ್ನು ನಡೆಸಿದ್ದು, ಎಲ್ಲಾರಿಗೂ ಸಹ ಉಚಿತವಾಗಿ ಔಷಧಿ ಮತ್ತು ಮಾತ್ರೆಗಳನ್ನು ವಿತರಣೆ ಮಾಡಲಾಗಿದೆ.
ಶಿಬಿರದಲ್ಲಿ ಪಾಲ್ಗೊಂಡ ಎಲ್ಲಾ ಗ್ರಾಮಸ್ಥರು ಹಾಗೂ ವೈದ್ಯಕೀಯ ತಂಡಕ್ಕೆ ಎಎನ್‌ಎಫ್ ವತಿಯಿಂದ ಊಟ ಮತ್ತು ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಸಂದರ್ಭದಲ್ಲಿ ನಕ್ಸಲ್ ನಿಗ್ರಹ ಪಡೆಯ ಎಲ್ಲಾ ಸಿಬ್ಬಂದಿಗಳು ಹಾಜರಿದ್ದು ಶಿಬಿರದ ನಿರ್ವಹಣೆ ಮಾಡಿದರು.

coorg buzz
coorg buzz