ಕೂಡಲೇ ಅರ್ಜಿ ಸಲ್ಲಿಸಿ: ಅತಿಥಿ ಶಿಕ್ಷಕರು, ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

Guest Teachers

Share this post :

ಪ್ರಸಕ್ತ (2025-26) ಸಾಲಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಾ.ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ/ ಕಾಲೇಜು, ಮೊರಾರ್ಜಿ ದೇಸಾಯಿ ಶಾಲೆ ಹಾಗೂ ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರು / ಅತಿಥಿ ಉಪನ್ಯಾಸಕರ ಹುದ್ದೆಯ ತಾತ್ಕಾಲಿಕ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು https://dom.karnataka.gov.in/ ಅಥವಾ ಜಿಲ್ಲಾ ಅಧಿಕಾರಿಗಳ ಕಚೇರಿ, ಜಿಲ್ಲಾ ಮತ್ತು ತಾಲ್ಲೂಕು ಮಾಹಿತಿ ಕೇಂದ್ರಗಳಿಗೆ ಸಂಬಂಧಪಟ್ಟ ಶಾಲಾ ಕಾಲೇಜುಗಳಿಂದ ಪಡೆದು ದೃಢೀಕೃತ ದಾಖಲೆಗಳೊಂದಿಗೆ ಜಿಲ್ಲಾ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕೊಡಗು ಇಲ್ಲಿಗೆ ಮೇ, 19 ರೊಳಗೆ ಅರ್ಜಿ ಸಲ್ಲಿಸಬಹುದು.

ಡಾ.ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ, ಖ್ಯಾತೆ ಗ್ರಾಮ, ಕೊಡ್ಲಿಪೇಟೆ ಸಂಸ್ಥೆಯ ಕನ್ನಡ, ಇಂಗ್ಲಿಷ್(ಬಿಎ, ಬಿಇಡಿ), ಗಣಿತ, ವಿಜ್ಞಾನ(ಬಿಎಸ್ಸಿ, ಬಿಇಡಿ ವಿದ್ಯಾರ್ಹತೆ), ಕಂಪ್ಯೂಟರ್ ಶಿಕ್ಷಕರು(ಬಿಸಿಎ), ದೈಹಿಕ ಶಿಕ್ಷಕರು(ಬಿಎ, ಎಎಸ್ಸಿ, ಬಿಪಿಇಡಿ) ಒಟ್ಟು 6 ಹುದ್ದೆಗಳು. ವಿರಾಜಪೇಟೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಕಂಪ್ಯೂಟರ್ ಶಿಕ್ಷಕರು(1 ಹುದ್ದೆ) ಬಿಸಿಎ ವಿದ್ಯಾರ್ಹತೆ ಹೊಂದಿರಬೇಕು. ಕುಶಾಲನಗರ ಮೌಲಾನ ಆಜಾದ್ ಮಾದರಿ ಶಾಲೆಗೆ ಇಂಗ್ಲೀಷ್, ಹಿಂದಿ (ಬಿಎ, ಬಿ.ಇಡಿ ವಿದ್ಯಾರ್ಹತೆ) ಮತ್ತು ದೈಹಿಕ ಶಿಕ್ಷಕರು(ಬಿಎ., ಬಿಎಸ್ಸಿ, ಬಿಪಿಇಡಿ) ಒಟ್ಟು 3 ಹುದ್ದೆಗಳು. ಕೊಡ್ಲಿಪೇಟೆ ಖ್ಯಾತೆ ಗ್ರಾಮದ ಡಾ.ಎಪಿಜೆ ಅಬ್ದುಲ್ ಕಲಾಂ ಪದವಿ ಪೂರ್ವ ಕಾಲೇಜಿಗೆ ಕನ್ನಡ, ಇಂಗ್ಲೀಷ್, ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ಶಿಕ್ಷಕರು ಎಂಎ, ಎಂಎಸ್ಸಿ, ಬಿ.ಇಡಿ ವಿದ್ಯಾರ್ಹತೆ ಹೊಂದಿರಬೇಕು. ಒಟ್ಟು 6 ಹುದ್ದೆಗಳು.

ಹೆಚ್ಚಿನ ಮಾಹಿತಿಗೆ ಜಿಲ್ಲಾ ಕಚೇರಿ ಅಲ್ಪಸಂಖ್ಯಾತರ ಕಲ್ಯಾಣ ಮೌಲಾನಾ ಆಜಾದ್ ಭವನ, ಎಫ್.ಎಂ.ಸಿ. ಕಾಲೇಜು ಹತ್ತಿರ, ಮಡಿಕೇರಿ ಕಚೇರಿ ದೂ.ಸಂ.08272–225528, 9686138688 ಹಾಗೂ ಪ್ರಾಂಶುಪಾಲರು, ಡಾ.ಎಪಿಜೆ ಅಬ್ದುಲ್ ಕಲಾಂ ಪದವಿ ಪೂರ್ವ ವಸತಿ ವಿಜ್ಞಾನ ಕಾಲೇಜು, ಖ್ಯಾತೆ ಗ್ರಾಮ,ಕೊಡ್ಲಿಪೇಟೆ, ಸೋಮವಾರಪೇಟೆ ತಾಲ್ಲೂಕು ದೂರವಾಣಿ ಸಂಖ್ಯೆ: 7676473767/ 6361802037 ನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಆರ್.ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ.

coorg buzz
WhatsApp Image 2026-08-11 at 16.11.22