ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ – ಗಾಯನ ಸ್ಪರ್ಧೆಯ ಪಲಿತಾಂಶ ಪ್ರಕಟ

Share this post :

ಮಡಿಕೇರಿ : ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾ ಘಟಕದ ವತಿಯಿಂದ ಜಿಲ್ಲೆಯ ಎಲ್ಲಾ ತಾಲೂಕು ವ್ಯಾಪ್ತಿಯಲ್ಲಿ ನಡೆದ ಗೀತಗಾಯನ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ.
ವೀರಾಜಪೇಟೆ ತಾಲೂಕಿನಲ್ಲಿ ನಡೆದ ಪ್ರಾಥಮಿಕ ಶಾಲಾ ವಿಭಾಗದ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಟನಿಷ ಕೆ.ಕೆ. 7ನೇ ತರಗತಿ, ಎಸ್ ಎಂ ಎಸ್ ಅರಮೇರಿ ಪ್ರಥಮ, ಆಯಿಷಾ ನಜೀರ್ ಟಿ.ಎ. 1ನೇ ತರಗತಿ ವಿನಾಯಕ ಶಾಲೆ ದ್ವಿತೀಯ, ತ್ರಿಶಾಲ್ 6ನೇ ತರಗತಿ, ವಿನಾಯಕ ಶಾಲೆ ತೃತೀಯ ಸ್ಥಾನ. ಪೊನ್ನಂಪೇಟೆ ತಾಲೂಕು ಪ್ರೌಢಶಾಲಾ ವಿಭಾಗದ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಇಶಾನಿ ಬಿ. ರೈ, 9ನೇ ತರಗತಿ ಕಾಲ್ಸ್ ಶಾಲೆ ಪ್ರಥಮ, ಚೈತ್ರಾ ಚಿನ್ನಮ್ಮ ಬಿ.ಯು. 9ನೇ ತರಗತಿ, ರೂಟ್ಸ್ ಶಾಲೆ ದ್ವಿತೀಯ, ದೀಪ್ತಿ ದೇಚಮ್ಮ, 9ನೆ ತರಗತಿ ಲಯನ್ಸ್ ಶಾಲೆ ತೃತೀಯ. ಸೋಮವಾರಪೇಟೆ ತಾಲೂಕು ಪ್ರಾಥಮಿಕ ಶಾಲಾ ವಿಭಾಗದ ಜಾನಪದ ಗೀತೆ ಸ್ಪರ್ಧೆಯಲ್ಲಿ ಹಿತೈಷಿ ಕೆ.ಜಿ. 7ನೆ ತರಗತಿ ಸಾಂದೀಪನಿ ಆಂಗ್ಲ ಮಾಧ್ಯಮ ಶಾಲೆ ಪ್ರಥಮ, ವಿಶಾಖ 3ನೇ ತರಗತಿ, ವಿಶ್ವ ಮಾನವ ಕುವೆಂಪು ಶಾಲೆ ದ್ವಿತೀಯ, ಮಯೂರ್ ಜಿಎಂಪಿ ಶಾಲೆ, ಬೆಟ್ಟದಳ್ಳಿ ತೃತೀಯ. ಮಡಿಕೇರಿ ತಾಲೂಕು ಪದವಿಪೂರ್ವ ಕಾಲೇಜು ವಿಭಾಗದ ಜಾನಪದ ಗೀತೆ ಸ್ಪರ್ಧೆಯಲ್ಲಿ ಮೋನಿಶಾ ಡಿ. ದ್ವಿತೀಯ ಪಿಯುಸಿ, ಶ್ರೀ ರಾಜರಾಜೇಶ್ವರಿ ಪದವಿಪೂರ್ವ ಕಾಲೇಜು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಸ್ಪರ್ಧೆಯಲ್ಲಿ ನಿತ್ಯಾ ಕೆ.ಟಿ , ಫಾತಿಮಾ ಉಜ್ಮಾ, ಅನ್ವಿತಾ, ಅಸ್ಮಿತಾ, ತಸ್ಮಿತಾ, ಶ್ರೇಯಾ ಬೋಜಮ್ಮ, ಮಂತ್ರಾ ಮುತ್ತಮ್ಮ, ಶಾಕ್ಯ ಬಿ. ರೈ, ಶ್ರೀನಿತ್, ಗ್ಯಾನ ಬಿ.ವಿ, ಶೆಯಾನ ಕೆ, ವೈಷ್ಣವಿ ಎಸ್.ಎಂ, ಹಶ್ಮಿತಾ ಟಿ.ಎಂ, ಸಜನ್, ತಸ್ಮಿ ಬೋಜಮ್ಮ, ಕೀರ್ತನಾ ಪಿ.ಎಸ್, ಲವಿತಾ ಕೆ.ಪಿ, ದೃಶ್ಯ ಸಿ.ಡಿ, ಅಶ್ವಿನ್ ಪಿ.ಎಂ, ಸ್ಪಂದನಾ ಕಾವೇರಮ್ಮ, ಪ್ರಣಿತಾ ಕೆ.ಎಸ್, ಲಿಖಿತ, ದ್ವೆತಾ ಬೊಳ್ಳಮ್ಮ, ಇಂಪನ ಕೆ ಜಿ, ಶೃತಿ, ಮೊನಿಶಾ ಬಿ.ಪಿ, ಅನ್ವಿತ್ ಗೌಡ ಹೆಚ್.ವಿ, ನವಮಿಕ ಕೆ.ಆರ್, ರುಚಿ, ಲಕ್ಷ ಜಿ ನವೀನ್, ನಿಶಾಸುಭೊಧ್, ಶಿವಾನಿ, ಕುಶಾನಿ, ಬಿಂಬ ಅವರುಗಳು ಪಾಲ್ಗೊಂಡಿದ್ದರು.
ತೀರ್ಪುಗಾರರಾಗಿ ಮುಕ್ಕಾಟಿರ ಕಾವೇರಮ್ಮ, ಪುತ್ತಾಮನೆ ವಿದ್ಯಾ ಜಗದೀಶ್, ಪಿ.ಕೆ. ಮಂದಣ್ಣ ಹಾಗೂ ಹಿತಾ ಶೆಟ್ಟಿ ಕಾರ್ಯನಿರ್ವಹಿಸಿದರು. ವಿಜೇತರು ಮತ್ತು ಭಾಗವಹಿಸಿದ ಎಲ್ಲರಿಗೂ ಡಿಜಿಟಲ್ ಸರ್ಟಿಫಿಕೇಟ್ ನೀಡಲಾಗುವುದು ಎಂದು ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಕರಿನೆರವಂಡ ಡ್ಯಾನಿ ಕುಶಾಲಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

coorg buzz
WhatsApp Image 2026-08-11 at 16.11.22