ಕಿಗ್ಗಾಲುವಿನ ಎಂ.ಎಸ್.‌ ನಿಧಿಗೆ ತ.ರಾ.ಸು. ಪ್ರಶಸ್ತಿ

Share this post :

ಮೂರ್ನಾಡು : ಬೆಂಗಳೂರಿನ ಜನ್ಮ ಭೂಮಿ ಸಾಂಸ್ಕೃತಿಕ ನಾಗರೀಕ ವೇದಿಕೆಯ ವತಿಯಿಂದ ದ್ವಿತೀಯ ಪಿ.ಯು. ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಾಧಕ ವಿದ್ಯಾರ್ಥಿಗಳಿಗೆ ನೀಡುವ ತ.ರಾ.ಸು. ಪ್ರಶಸ್ತಿಯನ್ನು ಕೊಡಗಿನ ನಿಧಿ ಎಂ.ಎಸ್. ಪಡೆದುಕೊಂಡಿದ್ದಾರೆ. ಕಳೆದ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಕಾರಣ ಈ ಪ್ರಶಸ್ತಿಗೆ ಅವರನ್ನು ಆಯ್ಕೆಗೊಳಿಸಲಾಗಿತ್ತು.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಶ್ರೀ ಕಲಾಮಂದಿರದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ನಿಧಿ ಎಂ.ಎಸ್. ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಬೆಂಗಳೂರಿನ ಗಾರ್ಡನ್ ಸಿಟಿ ವಿಶ್ವವಿದ್ಯಾಲಯ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ನಿಧಿ ಎಂ.ಎಸ್. ಕಿಗ್ಗಾಲು ನಿವಾಸಿ ಮೊಟ್ಟೆಮನೆ ಶ್ರೀಧರ್ ಮತ್ತು ರೈನಾ ದಂಪತಿಯ ಪುತ್ರಿ.

coorg buzz
WhatsApp Image 2026-08-11 at 16.11.22