ರಾಷ್ಟ್ರಮಟ್ಟದ ಫುಟ್ಬಾಲ್ ಪಂದ್ಯಾಟ: ದ್ವಿತೀಯ ಸ್ಥಾನ ಮುಡಿಗೇರಿಸಿಕೊಂಡ ಕೊಡಗು ಸೈನಿಕ ಶಾಲೆ

football tournament

Share this post :

ಒಡಿಶಾದ (Odisha)ಭುವನೇಶ್ವರದಲ್ಲಿ ನಡೆದ ರಾಷ್ಟ್ರಮಟ್ಟದ ಅಂತರ ಸೈನಿಕ ಶಾಲೆಗಳ ಫುಟ್ಬಾಲ್ ಪಂದ್ಯಾವಳಿಯಲ್ಲಿ(National Inter-Sainik Schools Football Tournament)ಕೊಡಗು ಸೈನಿಕ ಶಾಲೆಯ ಜೂನಿಯರ್ ತಂಡವು ಪ್ರಥಮ ಬಾರಿಗೆ ದ್ವಿತೀಯ ಸ್ಥಾನವನ್ನು ಪಡೆದು ಪ್ರಶಸ್ತಿ ಹಾಗೂ ಟ್ರೋಫಿಯನ್ನು ಗಳಿಸಿದೆ. ಈ ಸಾಧನೆಯೊಂದಿಗೆ ಶಾಲೆಯು ಜಿಲ್ಲೆಗೆ ಕೀರ್ತಿ ತಂದಿದೆ.

ಕ್ರೀಡಾಕೂಟದಿಂದ ಮರಳಿದ ವಿದ್ಯಾರ್ಥಿಗಳನ್ನು ಕೂಡಿಗೆ ಅಂಜಲಾ ವಿದ್ಯಾನಿಕೇತನ ಶಾಲೆಯಿಂದ ಅಲಂಕಾರಗೊಂಡ ವಾಹನದಲ್ಲಿ ಮೆರವಣಿಗೆಯ ಮೂಲಕ ಸೈನಿಕ ಶಾಲೆಗೆ ಕರೆತರಲಾಯಿತು. ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್ ಮಲ್ಲಾರ್ಪಣೆ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಈ ಪಂದ್ಯಾವಳಿಯಲ್ಲಿ ಶಾಲೆಯ ಜೂನಿಯರ್, ಸಬ್ ಜೂನಿಯರ್ ಹಾಗೂ ಬಾಲಕಿಯರ ತಂಡಗಳಾಗಿ ಒಟ್ಟು 48 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಾಲಕರ ಜೂನಿಯರ್ ತಂಡವು ಉತ್ತಮ ಪ್ರದರ್ಶನ ನೀಡಿ ದ್ವಿತೀಯ ಸ್ಥಾನ ಗಳಿಸಿತು. ಶೇಖ್ ಅಜೀಜ್ ಅವರು ತರಬೇತಿದಾರರಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು.

ವಿಜಯೋತ್ಸವ ಮೆರವಣಿಗೆಯಲ್ಲಿ 600 ವಿದ್ಯಾರ್ಥಿಗಳು, ಉಪಪ್ರಾಂಶುಪಾಲರು, ಉಪನ್ಯಾಸಕ ವೃಂದ ಹಾಗೂ ಬೋಧಕ ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಡೊಳ್ಳು ಕುಣಿತ, ತಮಟೆ ವರಸೆ ಮತ್ತು ಕೊಡವ ವೇಷಧಾರಿ ವಿದ್ಯಾರ್ಥಿಗಳಿಂದ ಮೆರವಣಿಗೆ ಉತ್ಸವ

ಸಾರ್ವಜನಿಕರು ಹಾಗೂ ಸ್ಥಳೀಯ ಮಾಲೀಕರು ವಿದ್ಯಾರ್ಥಿಗಳ ಸಾಧನೆಯನ್ನು ಮೆಚ್ಚಿ, ಅವರನ್ನು ಹೂಮಾಲೆಗಳಿಂದ ಸನ್ಮಾನಿಸಿ ಗೌರವಿಸಿದರು.

coorg buzz
WhatsApp Image 2026-08-11 at 16.11.22