ಹುಲುಗುಂದ ಸಹಿಪ್ರಾ ಶಾಲೆಯಲ್ಲಿ ಗಣರಾಜ್ಯೋತ್ಸವ – L.K.G ದಾಖಲಾತಿಗೆ ಚಾಲನೆ

Share this post :

ಹಾರಂಗಿ : ಕೂಡುಮಂಗಳೂರು ಪಂಚಾಯತಿ ವ್ಯಾಪ್ತಿಯ (ಹಾರಂಗಿ)ಹುಲುಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 77ನೇ
ಗಣರಾಜ್ಯೋತ್ಸವ ಮತ್ತು ಶಾಲೆ ವಾರ್ಷಿಕೋತ್ಸವ ಕಾರ್ಯಕ್ರಮ ಜರುಗಿತು.
ಆ ಪ್ರಯುಕ್ತ ಗ್ರಾಮಸ್ಥರಿಗೆ ವಿವಿಧ ಆಟೋಟ ಸ್ಪರ್ಧೆ ಏರ್ಪಡಿಸಲಾಗಿತ್ತು. ಬಳಿಕ ವೇದಿಕೆ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಉದ್ಘಾಟಿಸಿದರು. 2026-27ನೇ ಶೈಕ್ಷಣಿಕ ಸಾಲಿನಿಂದ L.K.G TO 1st STANDARD English Medium ಪ್ರಾರಂಭ ಮಾಡುವ ಸಲುವಾಗಿ ದಾಖಲಾತಿ ಪ್ರಕ್ರಿಯೆಗೆ ಅತಿಥಿಗಳು ಚಾಲನೆ ನೀಡಿದರು.
ಶಾಲೆ ಮುಖ್ಯ ಶಿಕ್ಷಕ ರಾಜಣ್ಣ, ಪಂಚಾಯಿತಿ ಸದಸ್ಯ ಮಣಿಕಂಠ, SDMC ಅಧ್ಯಕ್ಷ ಗಿರೀಶ್ ಮತ್ತು ಪದಾಧಿಕಾರಿಗಳು, ಸಹಶಿಕ್ಷಕರು, ಗ್ರಾಮಸ್ಥರು ಈ ಸಂದರ್ಭ ಇದ್ದರು.

coorg buzz
WhatsApp Image 2026-08-11 at 16.11.22