ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ಅಪಪ್ರಚಾರ: ಸೈಬರ್ ಕ್ರೈಮ್ ಮೆಟ್ಟಿಲೇರಿದ ರಶ್ಮಿಕಾ – ವಿಜಯ್ ದೇವರಕೊಂಡ ಲೀಗಲ್ ಟೀಮ್

Rashmika Mandanna

Share this post :

ಚಿತ್ರರಂಗದ ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಸರಣಿ ಟ್ರೋಲ್ ಮತ್ತು ಅಪಪ್ರಚಾರಗಳ ವಿರುದ್ಧೀಗ ಕಾನೂನು ಸಮರ ಆರಂಭವಾಗಿದೆ. ‘ಕಾಫಿ ವಿತ್ ಕರಣ್’ ಕಾರ್ಯಕ್ರಮದ ಬಳಿಕ ಇಬ್ಬರ ವಿರುದ್ಧವೂ ಸಾಮಾಜಿಕ ಜಾಲತಾಣಗಳಲ್ಲಿ ಹರಡಿಸಲಾಗುತ್ತಿರುವ ನಕಲಿ ಸ್ಕ್ರೀನ್‌ಶಾಟ್‌ಗಳು, ಎಡಿಟ್ ಮಾಡಿದ ಫೋಟೋಗಳು ಹಾಗೂ ನಿಂದನಾತ್ಮಕ ಪೋಸ್ಟ್‌ಗಳನ್ನು ಗಂಭೀರವಾಗಿ ಪರಿಗಣಿಸಿರುವ ಅವರ ಕಾನೂನು ನೆರವು ತಂಡವು ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ಅಧಿಕೃತವಾಗಿ ದೂರು ನೀಡಿದೆ. ಚಿತ್ರನಟರ ವ್ಯಕ್ತಿತ್ವ ಹರಣ, ಸೈಬರ್ ಬುಲ್ಲಿಯಿಂಗ್ ಹಾಗೂ ಸುಳ್ಳು ಸುದ್ದಿಗಳನ್ನು ಸೃಷ್ಟಿಸಿ ಹಂಚಿಕೊಳ್ಳುತ್ತಿರುವ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿ, ಅದಕ್ಕೆ ಪೂರಕವಾದ ಹಲವು ಪ್ರಮುಖ ಸಾಮಾಜಿಕ ಜಾಲತಾಣದ ಲಿಂಕ್‌ಗಳು ಹಾಗೂ ಸಾಕ್ಷ್ಯಗಳನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ವಿರೋಶ್ ಲೀಗಲ್ ಟೀಮ್, ಸಾರ್ವಜನಿಕರ ಅಭಿಪ್ರಾಯ ಸ್ವಾತಂತ್ರ್ಯ ಹಾಗೂ ಸಿನಿಮಾಗಳ ಮೇಲಿನ ಆರೋಗ್ಯಕರ ವಿಮರ್ಶೆಯನ್ನು ತಾವು ಎಂದಿಗೂ ಗೌರವಿಸುವುದಾಗಿ ಸ್ಪಷ್ಟಪಡಿಸಿದೆ. ಆದರೆ ವಿಮರ್ಶೆಯ ನೆಪದಲ್ಲಿ ನಕಲಿ ವಿಷಯಗಳನ್ನು ಸೃಷ್ಟಿಸಿ, ಎಡಿಟ್ ಮಾಡಿದ ಸುಳ್ಳು ಮಾಹಿತಿಗಳನ್ನೇ ಸತ್ಯದಂತೆ ಬಿಂಬಿಸುವುದು ಶಿಕ್ಷಾರ್ಹ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಇದರ ಹಿಂದೆ ದುರುದ್ದೇಶಪೂರ್ವಕವಾಗಿ ಹಣ ನೀಡಿ ನಡೆಸಲಾಗುತ್ತಿರುವ ನೆಗೆಟಿವ್ ಕ್ಯಾಂಪೇನ್ ಇದೆಯೇ ಎಂಬ ಕೋನದಲ್ಲೂ ತನಿಖೆ ನಡೆಸುವಂತೆ ಸೈಬರ್ ಪೊಲೀಸರನ್ನು ಕೋರಲಾಗಿದೆ. ಸುಳ್ಳು ಸುದ್ದಿಗಳನ್ನು ರೂಪಿಸುವವರು ಮಾತ್ರವಲ್ಲದೆ, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಅಪಪ್ರಚಾರ ಮಾಡುವ ಪ್ರತಿಯೊಬ್ಬರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿರುವ ತಂಡ, ಸಾರ್ವಜನಿಕರು ಹಾಗೂ ಅಭಿಮಾನಿಗಳು ಯಾವುದೇ ಆಧಾರವಿಲ್ಲದ ಗಾಸಿಪ್‌ಗಳನ್ನು ಹಂಚಿಕೊಳ್ಳಬಾರದು ಎಂದು ಮನವಿ ಮಾಡಿದೆ.

coorg buzz
WhatsApp Image 2026-08-11 at 16.11.22