ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ರೈನ್ ಕೋಟ್ ವಿತರಣೆ

Share this post :

ವಿರಾಜಪೇಟೆ: ಸಮೀಪದ ಹೆಗ್ಗಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ಮಕ್ಕಳಿಗೆ ದೇವಾಂಕ್ ಎಂಟರ್ಪ್ರೈಸಸ್ ಹಾಗೂ ದೇವಾಂಕ್ ಪ್ರಾವಿಷನ್ ಸ್ಟೋರ್ ನ ಮಾಲೀಕರಾದ ಗಣೇಶ್ ರವರು ರೈನ್ ಕೋಟ್ ಗಳನ್ನು ವಿತರಿಸಿದರು. ಮಳೆಯಲ್ಲಿ ವಿದ್ಯಾರ್ಥಿಗಳು ಶಾಲೆಗೆ ಬರುವಾಗ ಎದುರಾಗುವ ತೊಂದರೆಗಳನ್ನು ಮನಗಂಡು ಗಣೇಶ್ ರವರು ಸುಮಾರು ಹದಿನೈದು ಸಾವಿರ ವೆಚ್ಚದಷ್ಟು 25 ರೈನ್ ಕೋಟ್‌ಗಳನ್ನು ಶಾಲಾ ವಿದ್ಯಾರ್ಥಿಗಳಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹೆಗ್ಗಳದ ಮುಖ್ಯೋಪಾಧ್ಯಾಯರಾದ ಕಮಲಮ್ಮ ಕೆ ಎನ್, ಸಹ ಶಿಕ್ಷಕಿ ಕಮರುನ್ನಿಸ. ಡಿ., ಎಸ್ ಡಿ ಎಮ್ ಸಿ ಘಟಕ ದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

coorg buzz
WhatsApp Image 2026-08-11 at 16.11.22