ಸಂಪಾಜೆಯಲ್ಲಿ ಭೀಕರ ಅಪಘಾತ – ಆಟೋ ರಿಕ್ಷಾ ಚಾಲಕ ದುರ್ಮರಣ..! ಕಾರು ಚಾಲಕ ಎಸ್ಕೇಪ್…

Share this post :

ಹಿಂಬದಿಯಿಂದ ಕಾರು ಡಿಕ್ಕಿಯಾಗಿ ಪಲ್ಟಿಯಾದ ಆಟೋ ರಿಕ್ಷಾ ಮೇಲೆ ಟಿಪ್ಪರ್‌ ವಾಹನ ಹರಿದ ಪರಿಣಾಮ ಆಟೋ ಸವಾರ ಸ್ಥಳದಲ್ಲೇ ಕೊನೆಯುಸಿರೆಳೆದ ಘಟನೆ ಸಂಪಾಜೆಯಲ್ಲಿ ಸಂಭವಿಸಿದೆ.
ಇಲ್ಲಿನ ಪೆಟ್ರೋಲ್ ಬಂಕ್‌ ಬಳಿ ಆಟೋ ರಿಕ್ಷಾಗೆ ಹಿಂದಿನಿಂದ ಕಾರೊಂದು ವೇಗವಾಗಿ ಬಂದು ಡಿಕ್ಕಿಯಾಗಿದೆ. ಆ ಋಭಸಕ್ಕೆ ಆಟೋ ರಿಕ್ಷಾ ಪಲ್ಟಿಯಾಗಿದ್ದು, ಇದೇ ಸಂದರ್ಭ ಎದುರಿನಿಂದ ಬಂದ ಟಿಪ್ಪರ್‌ ವಾಹನ ಆಟೋ ರಿಕ್ಷಾ ಮೇಲೆ ಹರಿದಿದೆ. ರಸ್ತೆಗೆ ಎಸೆಯಲ್ಪಟ್ಟ ಚಾಲಕನ ಮೇಲೂ ಟಿಪ್ಪರ್‌ ಹರಿದಿದ್ದು, ಚಾಲಕ ಸುಂದರ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅದರಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ಮಹಿಳೆಗೂ ಗಂಭೀರ ಗಾಯವಾಗಿದ್ದು, ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.


ಡಿಕ್ಕಿಪಡಿಸಿದ ಕಾರು ಚಾಲಕ ವಾಹನವನ್ನು ನಿಲ್ಲಿಸದೇ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಚಿತ್ರಣ ಅಲ್ಲೇ ಪಕ್ಕದಲ್ಲಿದ್ದ ಮನೆಯೊಂದರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಸಂಪಾಜೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾರು ಚಾಲಕನ ಪತ್ತೆಗೆ ಕ್ರಮ ವಹಿಸಿದ್ದಾರೆ.‌

ವಿಡಿಯೋ ನೋಡಿ…

https://www.instagram.com/coorg_buzz/reels/

coorg buzz
WhatsApp Image 2026-08-11 at 16.11.22