ಕರಡಿಗೋಡು ಬಸವೇಶ್ವರ ದೇವರ ವಾರ್ಷಿಕೋತ್ಸವ

Share this post :

ಸಿದ್ದಾಪುರ : ಕರಡಿಗೋಡು ಗ್ರಾಮದ ಕುಕ್ಕುನೂರು ಕುಟುಂಬದ ಶ್ರೀ ಬಸವೇಶ್ವರ ದೇವರ ವಾರ್ಷಿಕ ಉತ್ಸವ ಮಾರ್ಚ್ 29, 30, 31ರಂದು ನಡೆಯಲಿದೆ.
29ರ ಭಾನುವಾರ ಸಂಜೆ ಗೋ ಪೂಜೆ, ನಿತ್ಯ ಪೂಜೆಯ ನಂತರ 7:30 ಗಂಟೆಗೆ ಭಂಡಾರದ ಮನೆಯಿಂದ ದೇವರ ಭಂಡಾರವನ್ನು ದೇವಸ್ಥಾನಕ್ಕೆ ತರುವುದು. 30ರಂದು ಬೆಳಗ್ಗೆ 8-30 ಕ್ಕೆ ಗಣಪತಿ ಹೋಮ, 10:00 ಕ್ಕೆ ಕಲಶ ಪೂಜೆ, 11:00ಕ್ಕೆ ಗಂಗಾ ಸ್ನಾನ, ಕಾವೇರಿ ನದಿಯಿಂದ ಶ್ರೀ ಬಸವೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆ, ಮಧ್ಯಾಹ್ನ 12:30 ಕ್ಕೆ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ನಂತರ ಅನ್ನ ಸಂತರ್ಪಣೆ. 3:30ಕ್ಕೆ ದೇವರ ಮನೆ ಮೆರವಣಿಗೆ, ಸಂಜೆ 7 ಗಂಟೆಗೆ ಕೊಂಡ ಪೂಜೆ ಜರುಗಲಿದೆ.
31ರ ಮಂಗಳವಾರ ಬೆಳಗ್ಗೆ 8:00ಗಂಟೆಗೆ ರುದ್ರಪಾರಾಯಣ, 10 ಗಂಟೆಗೆ ದೇವತಾ ಪ್ರಾರ್ಥನೆ, ಗಂಗಾ ಪೂಜೆ, ಗಂಗಾ ಸ್ನಾನ, ನಂತರ ಶ್ರೀ ಬಸವೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆ, ಕೊಂಡ ಸೇವೆ, ಮಹಾಪೂಜೆ, ಹರಕೆ ಒಪ್ಪಿಸುವುದು, ತೀರ್ಥ ಪ್ರಸಾದ, ಅನ್ನ ಸಂತರ್ಪಣೆ, ಮಂತ್ರಾಕ್ಷತೆ ನೆರವೇರಲಿದೆ.
ದೇವರ ಉತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕುಕ್ಕುನೂರು ಕುಟುಂಬಸ್ಥರು ಕೋರಿದ್ದಾರೆ.

coorg buzz
WhatsApp Image 2026-08-11 at 16.11.22