‘CET’ ಸೀಟು ಹಂಚಿಕೆ ಕುರಿತು ಮಾರ್ಗದರ್ಶನ ಕಾರ್ಯಗಾರ ಜೂ.28ಕ್ಕೆ

Share this post :

ಮಡಿಕೇರಿ : ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ಕುಶಾಲನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ವತಿಯಿಂದ ಜೂನ್ ೨೮ ರಂದು ಬೆಳಗ್ಗೆ ೯.೩೦ ರಿಂದ ಮಧ್ಯಾಹ್ನ ೧.೩೦ ಗಂಟೆವರೆಗೆ ಕುಶಾಲನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ‘ಸಿಇಟಿ’ ಸೀಟು ಹಂಚಿಕೆ ಕುರಿತು ಮಾರ್ಗದರ್ಶನ (ನ್ಯೂ ಸೀಟ್ ಸೆಲೆಕ್ಷನ್ ಪ್ರೋಸೆಸ್) ಕಾರ್ಯಗಾರ ನಡೆಯಲಿದೆ.
ಆದ್ದರಿಂದ ಎಲ್ಲಾ ಯುಜಿ ಸಿಇಟಿ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಹಾಜರಾಗಿ ಸೀಟು ಹಂಚಿಕೆಯ ಮಾರ್ಗದರ್ಶನದ ಕಾರ್ಯಗಾರ ಸದುಪಯೋಗ ಪಡೆಯಲು ಕೋರಿದೆ.
ಜಿಲ್ಲೆಯ ಮತ್ತು ನೆರೆ ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ವಿವಿಧ ಕಾಲೇಜುಗಳಲ್ಲಿ ಪಿಯುಸಿ, ವಿಜ್ಞಾನ ವಿಭಾಗದಲ್ಲಿ ಅಭ್ಯಾಸ ಮಾಡಿದ್ದು, ಸಿಇಟಿ ಪರೀಕ್ಷೆ ಬರೆದಿರುವ ತಮ್ಮ ಕಾಲೇಜಿನ ವಿದ್ಯಾರ್ಥಿಗಳ ಗಮನಕ್ಕೆ ತರಲು ಪಿಯು ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಸಹಕರಿಸುವಂತೆ ಕುಶಾಲನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಕೆ.ಐ.ಪರಶಿವಮೂರ್ತಿ ತಿಳಿಸಿದ್ದಾರೆ.

coorg buzz
WhatsApp Image 2026-08-11 at 16.11.22