ಬದುಕನ್ನು ಬರ್ಬರಗೊಳಿಸಿ ಕಸ್ತೂರಿರಂಗನ್ ವರದಿ ಜಾರಿ ಬೇಡ: ಕೆ.ಎಂ.ಎ

ಪೊನ್ನಂಪೇಟೆ: ಕಸ್ತೂರಿರಂಗನ್ ವರದಿ ಜಾರಿಯಾದರೆ ವಿಶೇಷವಾಗಿ ಗ್ರಾಮೀಣ ಜನರ ಬದುಕು ಬಯಲು ಜೈಲಿನಂತಾಗುತ್ತದೆ. ಕೊಡಗಿನ ಬಹುಪಾಲು ಜನರ ಭಾವನೆಗೆ ವಿರುದ್ಧವಾಗಿರುವ ಕಸ್ತೂರಿರಂಗನ್ ವರದಿಯನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಬಾರದು. ಜನರ ಬದುಕನ್ನು ಬರ್ಬರಗೊಳಿಸುವ ಮತ್ತು ಮಾನವ ಹಕ್ಕನ್ನೇ ಉಲ್ಲಂಘಿಸುವ ಯಾವ ಯೋಜನೆಯ ಅನುಷ್ಠಾನವೂ ಜಿಲ್ಲೆಗೆ ಅಗತ್ಯವಿಲ್ಲ ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ತನ್ನ ಸ್ಪಷ್ಟ ನಿಲುವು ವ್ಯಕ್ತಪಡಿಸಿದೆ. ಈ ಕುರಿತು ಸೋಮವಾರದಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆ.ಎಂ.ಎ. ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ, ಕೇಂದ್ರ ಸರ್ಕಾರವು […]

ಮಣ್ಣಿನ ಫಲವತ್ತತೆಗೆ ಜೀವಾಮೃತ ಸಹಕಾರಿ: ಬೇಟೋಳಿಯಲ್ಲಿ ರೈತರಿಗೆ ಪ್ರಾತ್ಯಕ್ಷಿಕೆ

ಪೊನ್ನಂಪೇಟೆ: ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಗ್ರಾಮೀಣ ಕಾರ್ಯಾನುಭವ ಶಿಬಿರದ ವತಿಯಿಂದ ಸಮೀಪದ ಬೇಟೋಳಿ ಗ್ರಾಮದ ಪ್ರಗತಿಪರ ರೈತ ವೇದಾತ್ಮ ಅವರ ಭತ್ತದ ಗದ್ದೆಯಲ್ಲಿ ಸ್ಥಳೀಯ ರೈತರಿಗಾಗಿ ಜೀವಾಮೃತ ತಯಾರಿಕೆಯ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಬುಧವಾರ ಯಶಸ್ವಿಯಾಗಿ ನೆರವೇರಿತು. ಶಿಬಿರಾರ್ಥಿ ವಿದ್ಯಾರ್ಥಿಗಳು 20 ಕೆ.ಜಿ. ಹಸುವಿನ ಸಗಣಿ, 15ರಿಂದ 20 ಲೀಟರ್ ಗೋಮೂತ್ರ, 2 ಕೆ.ಜಿ. ಬೆಲ್ಲ, 2 ಕೆ.ಜಿ. ದ್ವಿದಳ ಧಾನ್ಯದ ಹಿಟ್ಟು ಹಾಗೂ ಗದ್ದೆಯ ಜೀವರಸಯುಕ್ತ ಮಣ್ಣನ್ನು ನಿಗದಿತ ಪ್ರಮಾಣದಲ್ಲಿ ಮಿಶ್ರಣ ಮಾಡಿ, ವೈಜ್ಞಾನಿಕ ಹಾಗೂ ಪ್ರಾಯೋಗಿಕ […]

ವಿರಾಜಪೇಟೆ ಸರ್ಕಾರಿ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ

ವಿರಾಜಪೇಟೆ: ಯುವಶಕ್ತಿಯು ದೇಶದ ಭವಿಷ್ಯವಾಗಿದ್ದು, ವಿದ್ಯಾರ್ಥಿಗಳು ಶಿಸ್ತು ಮತ್ತು ಆತ್ಮವಿಶ್ವಾಸವನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದು ನಿವೃತ್ತ ಪ್ರಾಂಶುಪಾಲ ತಾತಂಡ ಜ್ಯೋತಿ ಪ್ರಕಾಶ್ ಕರೆ ನೀಡಿದರು. ವಿರಾಜಪೇಟೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ 2026-27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಸಂಘವು ನಾಯಕತ್ವದ ಮನೋಭಾವನೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವ ಅತ್ಯುತ್ತಮ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಕಾಲೇಜಿನ ಎಲ್ಲಾ ಶೈಕ್ಷಣಿಕ ಮತ್ತು ಪಠ್ಯೇತರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕಿವಿಮಾತು ಹೇಳಿದರು. […]

ವಿದ್ಯಾರ್ಥಿಗಳಿಗೆ ಶಿಸ್ತು, ನಾಯಕತ್ವ ಹಾಗೂ ಪರಿಶ್ರಮವೇ ಯಶಸ್ಸಿನ ಮೆಟ್ಟಿಲು: ಅನೂಪ್ ಮಾದಪ್ಪ

ವಿರಾಜಪೇಟೆಯ ಕಾವೇರಿ ಪದವಿ ಕಾಲೇಜಿನ ಸಭಾಂಗಣದಲ್ಲಿ 2026-27ನೇ ಸಾಲಿನ ವಿದ್ಯಾರ್ಥಿ ಕ್ಷೇಮಪಾಲನ ಸಂಘದ ಉದ್ಘಾಟನಾ ಸಮಾರಂಭವು ಮಂಗಳವಾರ ಜರುಗಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು, ನೂತನ ವಿದ್ಯಾರ್ಥಿ ನಾಯಕರು ಹಾಗೂ ತರಗತಿ ಪ್ರತಿನಿಧಿಗಳಿಗೆ ಪ್ರಮಾಣವಚನ ಬೋಧಿಸಿ ಮಾತನಾಡಿದ ವಿರಾಜಪೇಟೆ ವೃತ್ತ ನಿರೀಕ್ಷಕರಾದ ಅನೂಪ್ ಮಾದಪ್ಪ ಅವರು, ಸಮಾಜಕ್ಕೆ ಉತ್ತಮ ಪ್ರಜೆಯಾಗಲು ಶಿಸ್ತು, ಅನ್ಯೋನ್ಯತೆ ಹಾಗೂ ನಾಯಕತ್ವದ ಗುಣಗಳು ಅತ್ಯಂತ ಮುಖ್ಯ ಎಂದು ಅಭಿಪ್ರಾಯಪಟ್ಟರು. ಪದವಿ ಹಂತದ ಶಿಕ್ಷಣವು ಬದುಕಿನ ಮಹತ್ವದ ಘಟ್ಟವಾಗಿದ್ದು, ವಿದ್ಯಾರ್ಥಿಗಳು ಮಾದಕ ವಸ್ತುಗಳ ಚಟ ಹಾಗೂ ಸಾಮಾಜಿಕ […]

ನೀರುಕೊಲ್ಲಿ ಗಣೇಶೋತ್ಸವ – ಲೋಗೋ ಬಿಡುಗಡೆ – ಹಲವು ಕಾರ್ಯಕ್ರಮಗಳ ಆಕರ್ಷಣೆ

ಮಡಿಕೇರಿ : ನೀರುಕೊಲ್ಲಿಯ ಸಾರ್ವಜನಿಕ ವಿಘ್ನೇಶ್ವರ ಮಿತ್ರ ಮಂಡಳಿ ವತಿಯಿಂದ ಈ ಬಾರಿ 36ನೇ ವರ್ಷದ ಗೌರಿ ಗಣೇಶೋತ್ಸವ ಆಚರಿಸಲಾಗುತ್ತಿದ್ದು, ಅದರ ಲೋಗೋವನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ನೀರುಕೊಲ್ಲಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಮಿತಿಯ ಪದಾಧಿಕಾರಿಗಳು ಲೋಗೋ ಬಿಡುಗಡೆ ಮಾಡಿದರು. 36ನೇ ವರ್ಷದ ಉತ್ಸವದ ಅಂಗವಾಗಿ 14ರಂದು ಮೂರ್ತಿ ಪ್ರತಿಷ್ಠಾಪನೆ, ಬಳಿಕ ಗ್ರಾಮದ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆ ಏರ್ಪಡಿಸಲಾಗಿದೆ. ಹಗ್ಗಜಗ್ಗಾಟ, ರಸ್ತೆ ಓಟ, ಸಂಗೀತ ಕುರ್ಚಿ, ನಿಂಬೆ ಚಮಚ ಓಟ, ಕಣ್ಣಿಗೆ ಬಟ್ಟೆ […]

ಕುಶಾಲನಗರದ ಪೂರ್ಣಶ್ರೀ ಫರ್ನಿಚರ್ಸ್‌ ಹೊಸ ರೂಪದಲ್ಲಿ – 20 ಸಾವಿರ ಚ.ಅಡಿ ವಿಸ್ತೀರ್ಣದ RAIZO ಶೋರೂಂ ಉದ್ಘಾಟನೆ

ಕುಶಾಲನಗರ : ಪಿಠೋಪಕರಣಗಳ ತಯಾರಿ ಮತ್ತು ಮಾರಾಟ ಕ್ಷೇತ್ರದಲ್ಲಿ ಮೂರು ದಶಕದಿಂದ ಜನರ ವಿಶ್ವಾಸ ಗಳಿಸಿರುವ ಕುಶಾಲನಗರದ ಪೂರ್ಣಶ್ರೀ ಫರ್ನಿಚರ್ಸ್‌ನ ಅತ್ಯಾಧುನಿಕ ಪೀಠೋಪಕರಣಗಳುಳ್ಳ ಮಳಿಗೆ RAIZO ಇದೀಗ ಗ್ರಾಹಕರ ಸೇವೆಗೆ ತೆರೆದುಕೊಂಡಿದೆ. ರವೀಂದ್ರ ರೈ ಮಾಲೀಕತ್ವದ ನೂತನ ಮಳಿಗೆಯನ್ನು ಶಾಸಕ ಡಾ. ಮಂತರ್‌ ಗೌಡ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಳಿಗೆಯೊಳಗೆ ಪ್ರವೇಶಿಸಿದಾಗ ವಿದೇಶದ ಮಾಲ್‌ಗೆ ಹೋದ ಅನುಭವ ಆಗುತ್ತದೆ. ಗುಣಮಟ್ಟದ ಉತ್ಪನ್ನಗಳಿಗೆ ಹೊರ ಜಿಲ್ಲೆಗೆ ಹೋಗಿ ಖರೀದಿಸುವ ಬದಲು, ಜಿಲ್ಲೆಯಲ್ಲೇ ಸಿಗುವ ಮಳಿಗೆಗಳಿಂದ ಖರೀದಿಸಿದರೆ ಹಣಕಾಸಿನ […]

ದುದ್ದಿಯಂಡ ಕುಟುಂಬಸ್ಥರಿಂದ ಹುಟ್ಟೂರಿನಲ್ಲಿ ಸೂಫಿ ಹಾಜಿಗೆ ಸನ್ಮಾನ

ಪೊನ್ನಂಪೇಟೆ: ರಾಷ್ಟ್ರೀಯ ಮಾನವ ಶ್ರೇಷ್ಠತಾ ಪ್ರಶಸ್ತಿ 2026ಕ್ಕೆ ಭಾಜನರಾದ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ಡಿ. ಹೆಚ್. ಸೂಫಿ ಹಾಜಿ ಅವರನ್ನು ದುದ್ದಿಯಂಡ ಕುಟುಂಬಸ್ಥರ ಪರವಾಗಿ ಹುಟ್ಟೂರಿನಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು. ವಿರಾಜಪೇಟೆ ಸಮೀಪದ ನಲ್ವತ್ತೋಕ್ಲೀನಲ್ಲಿ ಸೋಮವಾರದಂದು ಕುಟುಂಬದ ತಕ್ಕ ಮುಖ್ಯಸ್ಥರಾದ ಡಿ.ಎ. ಫಕ್ರುದ್ದೀನ್, ಮಾಹಿನ್ ಹಾಜಿ ಮತ್ತು ಅಬ್ದುಲ್ಲಾ ಅವರ ಸಮ್ಮುಖದಲ್ಲಿ ನಡೆದ ದುದ್ದಿಯಂಡ ‘ಕುಟುಂಬ ಸಂಗಮ’ದಲ್ಲಿ ದುದ್ದಿಯಂಡ ಕುಟುಂಬ ಸಂಘದ ಅಧ್ಯಕ್ಷರೂ ಆಗಿರುವ ಸೂಫಿಯವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ತಕ್ಕ ಮುಖ್ಯಸ್ಥರು, ಸಮಾಜ ಸೇವ […]

ಬಡತನ-ಹಸಿವಿನ ಅರಿವು ಮಕ್ಕಳಿಗಿರಬೇಕು- ಪೂಜಾ ಸಜೇಶ್

ಪೊನ್ನಂಪೇಟೆ: ಬಡತನ ಮತ್ತು ಹಸಿವಿನ ಮಹತ್ವ ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ತಿಳಿಯುವಂತಾಗಬೇಕು. ಜೊತೆಗೆ ಅನ್ನದ ಬೆಲೆಯನ್ನು (ಮೌಲ್ಯವನ್ನು) ಅರಿತಿರಬೇಕು. ಮಕ್ಕಳಿಗೆ ಬಡತನ ಮತ್ತು ಹಸಿವಿನ ಅರಿವು ಮೂಡಿಸುವುದು ಅವರಲ್ಲಿ ಕೃತಜ್ಞತೆ, ಸಹಾನುಭೂತಿ ಮತ್ತು ಜವಾಬ್ದಾರಿಯುತ ನಡವಳಿಕೆಯನ್ನು ಬೆಳೆಸಲು ಪೂರಕವಾಗುತ್ತದೆ ಎಂದು ವಿರಾಜಪೇಟೆಯ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥರಾದ ಪೂಜಾ ಸಜೇಶ್ ಹೇಳಿದ್ದಾರೆ. ವಿರಾಜಪೇಟೆಯ ಆರ್ಜಿಯಲ್ಲಿರುವ ಅನ್ವಾರುಲ್ ಹುದಾ ಶಿಕ್ಷಣ ಸಂಸ್ಥೆಗೆ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ವತಿಯಿಂದ ಈದ್ ಮಿಲಾದ್ ಅಂಗವಾಗಿ ಆಹಾರ ಸಾಮಗ್ರಿ ಮತ್ತು ಕ್ರೀಡಾ ಪರಿಕರಗಳನ್ನು ವಿತರಿಸಿದ […]

ಜನಪರ ಕೆಲಸ ಮಾಡುತ್ತಿದ್ದರೂ ನನ್ನ ವಿರುದ್ಧ ವಿಪಕ್ಷದಿಂದ ಕ್ಷುಲ್ಲಕ ಆರೋಪ – ಎ.ಎಸ್.‌ ಪೊನ್ನಣ್ಣ ಬೇಸರ

ಮಡಿಕೇರಿ : ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆ ದುರಸ್ತಿ ವಿಚಾರದಲ್ಲಿ ನಿರಂತರ ಕಾಮಗಾರಿ ಆಗುತ್ತಿದೆ. ಅನೇಕ ಕಡೆ ಉತ್ತಮ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ವಿಪಕ್ಷಗಳು ಹಾಗೂ ಕೆಲವವರು ಕೈಯ್ಯಲ್ಲಿ ಮೊಬೈಲ್‌ ಇದೆ ಎಂಬ ಕಾರಣಕ್ಕೆ ಸಣ್ಣ ಗುಂಡಿಗಳನ್ನು ದೊಡ್ಡದಾಗಿ ವೈಭವೀಕರಿಸಿ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವೀರಾಜಪೇಟೆ ವಿಧಾಸಭಾ ಕ್ಷೇತ್ರದ ಶಾಸಕ ಎ.ಎಸ್.‌ ಪೊನ್ನಣ್ಣ ಹೇಳಿದರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಡಿಕೇರಿಯ ಪತ್ರಿಕಾ ಭವನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ […]

ಮಂಗಳೂರು ವಿವಿ ಬಿಕಾಂ ಪಠ್ಯದಲ್ಲಿ ರಮ್ಯಾ ಮೂರ್ನಾಡು ಅವರ ಕವನ

ಮಡಿಕೇರಿ : 2026ರ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಥಮ ಬಿಕಾಂ ವಾಣಿಜ್ಯ ಸಿರಿ ಪಠ್ಯ ಪುಸ್ತಕಕ್ಕೆ ಕೊಡಗಿನ ರಮ್ಯ ಮೂರ್ನಾಡು ಅವರು ಬರೆದಿರುವ ಕವಿತೆ ಆಯ್ಕೆಯಾಗಿದೆ. ಮಡಿಕೇರಿ ತಾಲೂಕಿನ ಮೂರ್ನಾಡು ನಿವಾಸಿಯಾದ ರಮ್ಯಾ, ಪ್ರಸ್ತುತ ಎಮ್ಮೆಮಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಬರೆದಿರುವ ʼಹೇಳಲು ನನಗೂ ಒಂದು ಕತೆಯಿದೆʼ ಕವನವನ್ನು ವಾಣಿಜ್ಯ ಸಿರಿ ಪಠ್ಯ ಪುಸ್ತಕದಲ್ಲಿ ಅಳವಡಿಸಲಾಗಿದೆ. ಓದು, ಬರಹ, ಚಾರಣ ಹವ್ಯಾಸವಿರುವ ಇವರು ಈಗ ಯುವ ಕವಯತ್ರಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಇವರ […]