ನಾಳೆ(ಅ.30) ಜಿಲ್ಲೆಯ ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ..!

Share this post :

ಮಡಿಕೇರಿ : ವಿರಾಜಪೇಟೆ ೬೬/೩೩/೧೧ ಕೆ.ವಿ ವಿದ್ಯುತ್ ವಿತರಣಾ ಉಪಕೇಂದ್ರದ ವಿರಾಜಪೇಟೆ ಶಾಖಾ ವ್ಯಾಪ್ತಿಯ ವಿಎಫ್-೩ ಪಂಜರ್‌ಪೇಟೆ ಫೀಡರ್‌ನಲ್ಲಿ ಅಕ್ಟೋಬರ್ ೩೦ ರಂದು ಬೆಳಗ್ಗೆ ೯ ರಿಂದ ಸಂಜೆ ೬ ಗಂಟೆಯವರೆಗೆ ವಿದ್ಯುತ್ ಜಾಲದ ಬಲವರ್ಧನೆ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವುದರಿಂದ ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ವಿರಾಜಪೇಟೆ ಪಟ್ಟಣದ ವಿದ್ಯಾನಗರ, ಕೆಎಸ್‌ಆರ್‌ಟಿಸಿ, ಶಾಂತಿನಗರ, ಗೋಣಿಕೊಪ್ಪ ರಸ್ತೆ, ನೆಹರುನಗರ, ಪಂಜರ್‌ಪೇಟೆ, ಸಿಲ್ವನಗರ, ವಿಜಯನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.

coorg buzz
WhatsApp Image 2026-08-11 at 16.11.22