ಕೊಡಗಿನಲ್ಲಿ ಸೆಪ್ಟೆಂಬರ್ 16 ರಿಂದ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ: ಆನ್‌ಲೈನ್ ನೋಂದಣಿ ಕಡ್ಡಾಯ

kodagu dasara

Share this post :

ಮಡಿಕೇರಿ: ಪ್ರಸಕ್ತ ಸಾಲಿನ ಪುರುಷ ಮತ್ತು ಮಹಿಳೆಯರ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವು ಸೆಪ್ಟೆಂಬರ್ 16 ರಿಂದ 24 ರವರೆಗೆ ಕೊಡಗು ಜಿಲ್ಲೆಯಾದ್ಯಂತ ನಡೆಯಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ. ವಿಸ್ಮಯಿ ತಿಳಿಸಿದ್ದಾರೆ.

ತಾಲ್ಲೂಕು ಮಟ್ಟದ ಸ್ಪರ್ಧೆಗಳ ವೇಳಾಪಟ್ಟಿ:

  • ಮಡಿಕೇರಿ: ಸೆಪ್ಟೆಂಬರ್ 16 – ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ.

  • ಕುಶಾಲನಗರ: ಸೆಪ್ಟೆಂಬರ್ 17 – ಕೂಡಿಗೆ ಸೈನಿಕ ಶಾಲೆ ಹಾಗೂ ಕ್ರೀಡಾ ಶಾಲಾ ಮೈದಾನ.

  • ಸೋಮವಾರಪೇಟೆ: ಸೆಪ್ಟೆಂಬರ್ 18 – ಕೂಡಿಗೆ ಕ್ರೀಡಾ ಶಾಲೆ ಹಾಗೂ ಸೈನಿಕ ಶಾಲೆ ಮೈದಾನ.

  • ಪೊನ್ನಂಪೇಟೆ: ಸೆಪ್ಟೆಂಬರ್ 19 – ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ (ಫುಟ್‌ಬಾಲ್) ಹಾಗೂ ಜೂನಿಯರ್ ಕಾಲೇಜು ಮೈದಾನ.

  • ವಿರಾಜಪೇಟೆ: ಸೆಪ್ಟೆಂಬರ್ 20 – ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ (ಫುಟ್‌ಬಾಲ್) ಹಾಗೂ ಜೂನಿಯರ್ ಕಾಲೇಜು ಮೈದಾನ.

ಜಿಲ್ಲಾ ಮಟ್ಟದ ಕ್ರೀಡಾಕೂಟ: ಸೆಪ್ಟೆಂಬರ್ 24 ರಂದು ಕೂಡಿಗೆ ಕ್ರೀಡಾ ಶಾಲೆ, ಸೈನಿಕ ಶಾಲೆ ಹಾಗೂ ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆಗಳು ನಡೆಯಲಿವೆ. ಜಿಲ್ಲೆಯ ಆಸಕ್ತ ಹಾಕಿಪಟುಗಳು ಸೇರಿದಂತೆ ಎಲ್ಲಾ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಲಾಗಿದೆ.

ಕ್ರೀಡಾಪಟುಗಳಿಗೆ ಮುಖ್ಯ ಸೂಚನೆಗಳು:

  • ಆನ್‌ಲೈನ್ ನೋಂದಣಿ: dasaracmcup.in ವೆಬ್‌ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ.

  • ಸ್ಥಳೀಯರಿಗೆ ಮಾತ್ರ ಅವಕಾಶ: ಕ್ರೀಡಾಪಟುಗಳು ತಮ್ಮ ಸ್ವಂತ ತಾಲ್ಲೂಕಿನಲ್ಲಿ ಮಾತ್ರ ಭಾಗವಹಿಸಬೇಕು. ಒಂದಕ್ಕಿಂತ ಹೆಚ್ಚು ತಾಲ್ಲೂಕಿನಲ್ಲಿ ಭಾಗವಹಿಸಿದರೆ ಅನರ್ಹಗೊಳಿಸಲಾಗುವುದು.

  • ದಾಖಲೆಗಳು: ಸ್ಪರ್ಧೆಯ ದಿನದಂದು ಆಧಾರ್ ಕಾರ್ಡ್ ಪ್ರತಿಯನ್ನು ಕಡ್ಡಾಯವಾಗಿ ತರಬೇಕು.

  • ಸಮಯ: ಬೆಳಿಗ್ಗೆ 9:30 ರ ಒಳಗೆ ಸ್ಪರ್ಧಾ ಸ್ಥಳದಲ್ಲಿ ಹಾಜರಿದ್ದು ನೋಂದಾಯಿಸಿಕೊಳ್ಳಬೇಕು. ತೀರ್ಪುಗಾರರ ತೀರ್ಮಾನವೇ ಅಂತಿಮ.

ಸಂಪರ್ಕಿಸಬೇಕಾದ ಅಧಿಕಾರಿಗಳು/ಸಂಘಟಕರು:

  • ಮಡಿಕೇರಿ: ಮಹಾಬಲ (9980887499), ಮನು (9480032712)

  • ಸೋಮವಾರಪೇಟೆ / ಕುಶಾಲನಗರ: ವೆಂಕಟೇಶ್ (9844326007), ಸುರೇಶ್ (8892272972), ಪ್ರದೀಪ್ (9342563014)

  • ಪೊನ್ನಂಪೇಟೆ / ವಿರಾಜಪೇಟೆ: ಸುಬ್ಬಯ್ಯ (8197790350), ಗಣಪತಿ (8951287301)

coorg buzz
WhatsApp Image 2026-08-11 at 16.11.22