Power Cut: ನಾಳೆ ಕೊಡಗಿನ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ!

Power cut kodagu

Share this post :

ಮಡಿಕೇರಿ: ದಸರಾ ಹಬ್ಬದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಅಕ್ಟೋಬರ್ 08 (ಮಂಗಳವಾರ) ರಂದು ಮಡಿಕೇರಿ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.ಹೀಗಾಗಿ, ಅಂದು ಬೆಳಗ್ಗೆ 10:00 ಗಂಟೆಯಿಂದ ಸಂಜೆ 05:00 ಗಂಟೆಯವರೆಗೆ ವಿದ್ಯುತ್ ಕಡಿತಗೊಳ್ಳಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಚೆಸ್ಕಾಂ (CESC) ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:

ಕಾಲೇಜು ರಸ್ತೆ, ಪ್ರಕೃತಿ ಬಡಾವಣೆ, ಜಯನಗರ, ಅಶೋಕ್‍ಪುರ

ಜಲಾಶ್ರಯ ಬಡಾವಣೆ, ಸರ್ಕಾರಿ ಆಸ್ಪತ್ರೆ, ಮಂಗಳಾದೇವಿ ನಗರ

ಅರಣ್ಯ ಭವನ, ಚೈನ್‍ಗೇಟ್, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ

ಇಂಡಸ್ಟ್ರಿಯಲ್ ಏರಿಯಾ, ಕಾವೇರಿ ಹಾಲ್, ಪೆನ್‍ಷನ್ ಲೇನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

coorg buzz
WhatsApp Image 2026-08-11 at 16.11.22