ವಿರಾಜಪೇಟೆ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಾಂಸ್ಕೃತಿಕ ಮತ್ತು ಸಾಹಿತ್ಯ ಪರಿಷತ್ತು ರಾಜ್ಯ ಘಟಕ ಬೆಂಗಳೂರು ( ರಿ) ಇದರ ರಾಜ್ಯ ಮಟ್ಟದ ಪದಗ್ರಹಣ ಸಮಾರಂಭ ಧಾರವಾಡದ ವಿದ್ಯಾವರ್ಧಕ ಸಂಘ ಪಾಟೀಲ್ ಪುಟ್ಟಪ್ಪ ಭವನದಲ್ಲಿ ಜರುಗಿತು. ಸಮಾರಂಭದಲ್ಲಿ ಕೊಡಗು ಜಿಲ್ಲೆಯ ಉಪನಿರ್ದೆೇಶಕರ ಕಛೇರಿಯ ಸೂಪರಿಡೆಂಟ್ ಆಗಿ ಹಾಗೂ ಭರತನಾಟ್ಯ ಕಲಾವಿದರಾಗಿ ಸೇವೆ ಸಲ್ಲಿಸುತಿರುವ ಕಿರಣ್ ಎಸ್ ಕೆ ರವರಿಗೆ ಕಾಯಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಅಧ್ಯಕ್ಷರಾದ ರಮಾ , ಬಸವರಾಜು ಗುರಿಕಾರ್ , ಮೇಲ್ಮನೆ ಸಭಾಪತಿ ಬಸವರಾಜ್ ಹೊರಟ್ಟಿ, ರಾಜ್ಯ ಕಾರ್ಯದರ್ಶಿ ಪರ್ವಿನ್ ಬಾನು ಬೊಳ್ಳಣ್ಣವರ್ ಹಾಗೂ ರಾಜ್ಯದ ಎಲ್ಲ ಪದಾಧಿಕಾರಿಗಳು ಮತ್ತು ರಾಜ್ಯದ ಪ್ರತಿಯೊಂದು ಜಿಲ್ಲೆಯ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಹಾಜರಿದ್ದರು. ವೇದಿಕೆಯಲ್ಲಿ ಕಿರಣ್ ಎಸ್ ಕೆ ರವರಿಂದ ಭರತನಾಟ್ಯ ಪ್ರದರ್ಶನವು ಅತ್ಯಂತ ಅದ್ಭುತವಾಗಿ ಮೂಡಿ ಬಂದಿತು.
ಇದೇ ಸಂದರ್ಭದಲ್ಲಿ ಕರ್ನಾಟಕ ಸರ್ಕಾರಿ ನೌಕರರ ಸಾಂಸ್ಕೃತಿಕ ಮತ್ತು ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷರಾದ ಕಮಲಮ್ಮ ಕೆ. ಎನ್ ಹಾಗೂ ಪ್ರಧಾನ ಕಾರ್ಯದ ರ್ಶಿ ನೀಲಮ್ಮ ಕೆ.ಪಿ. ಹಾಗೂ ಸಹ ಕಾರ್ಯದರ್ಶಿ ಮಲ್ಲಿಕಾ ಟಿ ರವರಿಗೆ ನೇಮಕಾತಿ ಪ್ರಮಾಣ ಪ್ರಮಾಣ ಪತ್ರವನ್ನು ವಿತರಿಸಲಾಯಿತು.



