ಪತ್ರಕರ್ತರ ಜಿಲ್ಲಾ ಮಟ್ಟದ ಕೆಸರುಗದ್ದೆ ಕ್ರೀಡಾಕೂಟ : ನಾಟಿ ಬಾಯ್ಸ್, ಮಡ್ ಕಮಾಂಡೋಸ್ ತಂಡಕ್ಕೆ ಚಾಂಪಿಯನ್ ಪಟ್ಟ

ಮಡಿಕೇರಿ‌ : ಕೊಡಗು ಪ್ರೆಸ್ ಕ್ಲಬ್ ಹಾಗೂ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ತಾಳತ್‌ಮನೆಯ ಮಲ್ಲನ ಬೆಳ್ಯಪ್ಪ ಅವರ ಗದ್ದೆಯಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪತ್ರಕರ್ತರ ಕೆಸರುಗದ್ದೆ ಕ್ರೀಡಾಕೂಟದಲ್ಲಿ ನಾಟಿ ಬಾಯ್ಸ್‌ ಮತ್ತು ಮಡ್ ಕಮಾಂಡೋಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು. ಹ್ಯಾಂಡ್ ಬಾಲ್‌ನ ಫೈನಲ್ ಪಂದ್ಯದಲ್ಲಿ ಇಸ್ಮಾಯಿಲ್ ಕಂಡಕರೆ ನಾಯಕತ್ವದ ನಾಟಿ ಬಾಯ್ಸ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಆದರ್ಶ್ ನಾಯಕತ್ವದ ಯಂಗ್ ಸ್ಪೈಡರ್ಸ್ ದ್ವಿತೀಯ ಸ್ಥಾನ ಪಡೆಯಿತು. ಹಗ್ಗಜಗ್ಗಾಟ ಪಂದ್ಯದಲ್ಲಿ […]

ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಿಸಿದ ‘ಲಿಟಲ್ ಸ್ಕಾಲರ್ಸ್ ಅಕಾಡೆಮಿ’

ವಿರಾಜಪೇಟೆಯ ಮಗ್ಗುಲ ಗ್ರಾಮದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಲಿಟಲ್ ಸ್ಕಾಲರ್ಸ್ ಅಕಾಡೆಮಿಯು, ತನ್ನ ನೂತನ ‘ಎಲ್ ಎಸ್ ಎ ಕೇರ್’ ಘಟಕದ ‘ಪೀಪಲ್ ಹೌಸ್’ ವಿದ್ಯಾರ್ಥಿ ತಂಡದ ಸಹಯೋಗದೊಂದಿಗೆ ಹೆಗ್ಗಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಿಸಿತು. ಸಂಸ್ಥೆಯ ಮುಖ್ಯಸ್ಥೆ ಹಾಗೂ ಸಮಾಜ ಸೇವಕರಾದ ಪೂಜಾ ಸಜೇಶ್ ಅವರು ಪುಸ್ತಕಗಳನ್ನು ವಿತರಿಸಿ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಶುಭ ಹಾರೈಸಿದರು. ಅಲ್ಲದೆ, ಸಂಸ್ಥೆಯ ಮೂಲಕ ಇನ್ಮುಂದೆ ಪ್ರತಿ ತಿಂಗಳೂ ಇಂತಹ […]

ಕೊಡಗಿನ ಯುವ ನಾಯಕ ಪೊನ್ನಣ್ಣಗೆ ಸಚಿವ ಸ್ಥಾನ..? ನಿಯೋಗದ ಎದುರು ಸಿಎಂ ಡಿ.ಕೆ. ಶಿವಕುಮಾರ್ ಮಹತ್ವದ ಸುಳಿವು..!

ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ನಮ್ಮ ಆಸ್ತಿ, ಅವರು ನಮಗೆ ಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ನೇತೃತ್ವದ ಯುನೈಟೆಡ್ ಕೊಡವ ಆರ್ಗನೈಸೇಷನ್ (ಯುಕೊ) ನಿಯೋಗವನ್ನು ಭೇಟಿ ಮಾಡಿದ ಸಿಎಂ, ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡುವಂತೆ ಬಂದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರು. “ಪೊನ್ನಣ್ಣ ದಕ್ಷ ಹಾಗೂ ಪ್ರಾಮಾಣಿಕ ಯುವ ನಾಯಕ. ಅವರ ಮೇಲೆ ಭರವಸೆಯಿಟ್ಟು ಟಿಕೆಟ್ ನೀಡಿದ್ದೆವು. ವಾರದಲ್ಲಿ ಎರಡು ದಿನ ಕೊಡಗಿನಲ್ಲಿರಲು ಸೂಚಿಸಿದ್ದರೂ, ಅವರು […]

ತಂತ್ರವೇ ಯಶಸ್ಸಿನ ಮೂಲ, ಕೇವಲ ಕಲ್ಪನೆಗಳಿಂದ ಉದ್ಯಮ ಯಶಸ್ವಿಯಾಗುವುದಿಲ್ಲ: ವೇಣು ಶರ್ಮಾ

Alvas MBA

ಮೂಡುಬಿದಿರೆ: ಉದ್ಯಮದಲ್ಲಿ ಯಶಸ್ಸು ಸಾಧಿಸಲು ಕೇವಲ ಹೊಸ ಕಲ್ಪನೆಗಳನ್ನು ಹೊಂದಿರುವುದಷ್ಟೇ ಸಾಲದು; ಅವುಗಳನ್ನು ಕಾರ್ಯರೂಪಕ್ಕೆ ತರುವ ಸಮರ್ಥ ತಂತ್ರ, ದೃಢ ಪ್ರಕ್ರಿಯೆ, ನಿರಂತರ ಪ್ರಯತ್ನ ಮತ್ತು ಶಿಸ್ತು ಅಗತ್ಯ ಎಂದು ಖ್ಯಾತ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಹಾಗೂ ಮಾಸ್ಟರ್‌ಚೆಫ್ ಇಂಡಿಯಾ ಸೆಮಿಫೈನಲಿಸ್ಟ್ ವೇಣು ಶರ್ಮಾ ಅಭಿಪ್ರಾಯಪಟ್ಟರು.ಅವರು ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿಭಾಗ ಆಯೋಜಿಸಿದ್ದ ‘ಪರಿಣಾಮಕಾರಿ ಕಾರ್ಯತಂತ್ರ ರೂಪಿಸುವುವ ಬಗೆ’ ವಿಶೇಷ ತರಬೇತಿ ಕರ‍್ಯಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಸಾಧಿಸಲು ಹೊಸ ಕಲ್ಪನೆಗಳಿಗಿಂತ […]

ಡ್ರಗ್ಸ್ ಬೇಡ, ಕನಸುಗಳನ್ನು ಬೆನ್ನಟ್ಟಿ: ಬೆಂಗಳೂರಿನಲ್ಲಿ ಕೊಡಗು ಬ್ಯಾಡ್ಮಿಂಟನ್ ಟೂರ್ನಿ ಯಶಸ್ವಿ

ಬೆಂಗಳೂರು: ಯುವಜನರಲ್ಲಿ ಮಾದಕ ವ್ಯಸನದ ವಿರುದ್ಧ ಜಾಗೃತಿ ಮೂಡಿಸುವ ಮತ್ತು ಕ್ರೀಡೆಯ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ‘ಕೊಡಗು ಬ್ಯಾಡ್ಮಿಂಟನ್ ಟೂರ್ನಮೆಂಟ್’ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ‘ಸ್ಮ್ಯಾಶ್ ಡ್ರಗ್ಸ್, ನಾಟ್ ಡ್ರೀಮ್ಸ್’ (Smash Drugs, Not Dreams – ಮಾದಕ ದ್ರವ್ಯಗಳನ್ನು ತೊರೆದು, ಕನಸುಗಳನ್ನು ಬೆನ್ನಟ್ಟಿ) ಎಂಬ ಅರ್ಥಪೂರ್ಣ ಧ್ಯೇಯದೊಂದಿಗೆ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನ (HSR Layout) ಪ್ರಸಿದ್ಧ ‘ಗೇಮ್ ಥಿಯರಿ’ ಕ್ರೀಡಾಂಗಣದಲ್ಲಿ ಈ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ರೋಚಕ ಫೈನಲ್ ಪಂದ್ಯ: ಶೈಜೈ-ಮುಸ್ತಫಾ ಜೋಡಿಗೆ ಚಾಂಪಿಯನ್ […]

ಗೃಹ ಜ್ಯೋತಿ ಫಲಾನುಭವಿಗಳ ಗಮನಕ್ಕೆ: ಪರಿಶೀಲನೆ ಆರಂಭ, ದಾಖಲೆ ಕಡ್ಡಾಯ!

Gruha Jyothi

ರಾಜ್ಯ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಯ ಅರ್ಹ ಫಲಾನುಭವಿಗಳ ಪುನರ್ ಪರಿಶೀಲನಾ ಕಾರ್ಯ ಜುಲೈ 1 ರಿಂದ ಅಧಿಕೃತವಾಗಿ ಆರಂಭವಾಗಲಿದೆ. ಸಿಬ್ಬಂದಿ ನೇರವಾಗಿ ಗ್ರಾಹಕರ ಮನೆ-ಮನೆಗೆ ಭೇಟಿ ನೀಡಲಿದ್ದಾರೆ. ಕಳೆದ 2023ರ ಜುಲೈ ತಿಂಗಳಲ್ಲಿ ಜಾರಿಗೆ ಬಂದಿದ್ದ ಗೃಹ ಜ್ಯೋತಿ ಯೋಜನೆಯ ಅರ್ಹತೆಯನ್ನು ಮರು ಪರಿಶೀಲಿಸುವ ಉದ್ದೇಶದಿಂದ ಇಂಧನ ಇಲಾಖೆ ಈ ಮಹತ್ವದ ಕ್ರಮಕ್ಕೆ ಮುಂದಾಗಿದೆ. ಸ್ಥಳದಲ್ಲೇ ದಾಖಲೆ ಪರಿಶೀಲನೆ, ಆಪ್ ಮೂಲಕ ಮಾಹಿತಿ ಸಂಗ್ರಹ ಸೆಸ್ಕ್ ಮೀಟರ್ ರೀಡರ್‍ಗಳು ಹಾಗೂ […]

ಲಿಟಲ್ ಸ್ಕಾಲರ್ಸ್ ಅಕಾಡೆಮಿಯಲ್ಲಿ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ

ವಿರಾಜಪೇಟೆ: ಪಟ್ಟಣದ ಮಗ್ಗುಲದಲ್ಲಿರುವ ಲಿಟಲ್ ಸ್ಕಾಲರ್ಸ್ ಅಕಾಡೆಮಿಯು ಪಲ್ಸ್ ಪೋಲಿಯೋ ಅಭಿಯಾನದಲ್ಲಿ ಪಾಲ್ಗೊಂಡಿದ್ದು ಲಿಟಲ್ ಸ್ಕಾಲರ್ಸ್ ಅಕಾಡೆಮಿಯಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನವನ್ನು ಆಯೋಜಿಸಲಾಗಿತ್ತು. ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥೆ ಹಾಗೂ ಸಮಾಜ ಸೇವಕರಾದ ಪೂಜಾ ಸಜೇಶ್ ರವರು ಪಲ್ಸ್ ಪೋಲಿಯೋ ಲಸಿಕಾ ಅಭಿಯಾನಕ್ಕೆ ಚಾಲನೆಯನ್ನು ನೀಡಿದರು. ಬಳಿಕ ಅವರು ಮಾತನಾಡಿ ಸರ್ಕಾರವು ದೇಶಾದ್ಯಂತ ಪೋಲಿಯೋವನ್ನು ನಿರ್ಮೂಲನೆ ಮಾಡಿ ಪೋಲಿಯೋ ಮುಕ್ತ ಭಾರತವನ್ನು ನಿರ್ಮಿಸುವ ಉದ್ದೇಶವನ್ನು ಹೊಂದಿದೆ. ಸರ್ಕಾರ ಹಾಗೂ ಆರೋಗ್ಯ ಇಲಾಖೆಯ […]

ಕಳೆದ 24 ಗಂಟೆ ಅವಧಿಯಲ್ಲಿ ಕೊಡಗಿನಲ್ಲಿ ಸುರಿದ ಮಳೆ ಮಾಹಿತಿ ಇಲ್ಲಿದೆ

Kodagu Rain

ಕೊಡಗು ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 9.78 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 60.92 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 302.02 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1234.91 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 16.60 ಮಿ.ಮೀ. ಕಳೆದ ವರ್ಷ ಇದೇ ದಿನ 57.18 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 485.30 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ […]

ನಟಿ ಕೃಷಿ ತಾಪಂಡ ಮನೆಯಲ್ಲಿ ಉದ್ಯಮಿ ಆತ್ಮಹತ್ಯೆ

Krishi Thapanda

ಸ್ಯಾಂಡಲ್‌ವುಡ್ ನಟಿ ಕೃಷಿ ತಾಪಂಡ (Krishi Thapanda) ಅವರ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ (RR Nagar) ಅಪಾರ್ಟ್‌ಮೆಂಟ್‌ನಲ್ಲಿ ಅವರ ಆಪ್ತ ಗೆಳೆಯ, ಉದ್ಯಮಿ ವೈಶಾಖ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಾಕಿಂಗ್ ಘಟನೆಯೊಂದು ಬೆಳಕಿಗೆ ಬಂದಿದೆ. ಜೂನ್ 24ರಂದು ಕೃಷಿ ತಾಪಂಡ ಅವರ ಮನೆಗೆ ಬಂದಿದ್ದ ವೈಶಾಖ್, ಇಂದು (ಜೂನ್ 25) ಏಕಾಏಕಿ ಈ ತೀವ್ರ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಆರ್.ಆರ್. ನಗರ ಪೊಲೀಸರು ಭೇಟಿ ನೀಡಿ […]

ಅಂತರಾಷ್ಟ್ರೀಯ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ವಿರಾಜಪೇಟೆಯ ಪ್ರಜ್ವಲ್ ಸಾಧನೆ

ಬೆಂಗಳೂರು ಯೂನಿವರ್ಸಿಟಿಯಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ನೈಸರ್ಗಿಕ ದೇಹದಾರ್ಢ್ಯ ಸ್ಪರ್ಧೆಯಲ್ಲಿ ವಿರಾಜಪೇಟೆಯ ಸಂತ ಅನ್ನಮ್ಮ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಪ್ರಜ್ವಲ್ ವಿ. ಎಂ. ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. 13 ರಿಂದ 19 ವರ್ಷದೊಳಗಿನ ವಿಭಾಗದಲ್ಲಿ ಸ್ಪರ್ಧಿಸಿದ್ದ ಇವರು, ಪಿಯುಸಿ ಓದಿನ ನಡುವೆಯೂ ಕಠಿಣ ಪರಿಶ್ರಮದಿಂದ ಈ ಮೈಲಿಗಲ್ಲು ತಲುಪಿದ್ದಾರೆ. ಗಾಂಧಿನಗರದ ಪಿ. ಎ. ಮಂಜುನಾಥ್ ಹಾಗೂ ಉಪನ್ಯಾಸಕಿ ಅಶ್ವಿನಿ ದಂಪತಿಯ ಪುತ್ರನಾದ ಪ್ರಜ್ವಲ್‌ಗೆ ಜಿಮ್ ತರಬೇತುದಾರರಾದ ಲಕ್ಷ್ಮೀಶ್ ಮತ್ತು ರವಿ ಮಾರ್ಗದರ್ಶನ ನೀಡಿದ್ದರು. ವಿದ್ಯಾರ್ಥಿಯ […]