ಸ್ನಾತಕೋತ್ತರ ಪದವಿಯಲ್ಲಿ ಅಜ್ಜಮಾಡ ಯಾನ ಬೋಪಣ್ಣಗೆ ಬೆಳ್ಳಿ ಪದಕ

Share this post :

ಸಾವಯವ ರಸಾಯನಶಾಸ್ತ್ರ ವಿಭಾಗದ ಸ್ನಾತಕೋತ್ತರ ಪದವಿಯಲ್ಲಿ (M.Sc. Organic Chemistry) ಅತ್ಯುನ್ನತ ಸಾಧನೆ ತೋರಿದ ಕೊಡಗಿನ ಪ್ರತಿಭೆ ಅಜ್ಜಮಾಡ ಯಾನ ಬೋಪಣ್ಣ ಅವರಿಗೆ ಬೆಳ್ಳಿ ಪದಕ (Silver Medal) ಲಭಿಸಿದೆ.

ಬೆಂಗಳೂರಿನ ಪ್ರತಿಷ್ಠಿತ ಸಂತ ಜೋಸೆಫ್ ವಿಶ್ವವಿದ್ಯಾಲಯದಲ್ಲಿ (St. Joseph’s University) ಉನ್ನತ ವ್ಯಾಸಂಗ ಪೂರ್ಣಗೊಳಿಸಿದ ಯಾನ ಬೋಪಣ್ಣ ಅವರು, ಇತ್ತೀಚೆಗೆ ನಡೆದ ವಿಶ್ವವಿದ್ಯಾಲಯದ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಈ ಗೌರವ ಪದಕವನ್ನು ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಚಿವರಾದ ಪ್ರಿಯಾಂಕ್ ಖರ್ಗೆ, ರಾಜ್ಯಸಭಾ ಸದಸ್ಯ ಮನ್ಸೂರ್ ಅಲಿ ಖಾನ್ ಹಾಗೂ ಫೇರ್‌ಫ್ಯಾಕ್ಸ್ ಫೈನಾನ್ಶಿಯಲ್ ಹೋಲ್ಡಿಂಗ್ಸ್ ಸಂಸ್ಥಾಪಕ ಪ್ರೇಮ್ ವಾತ್ಸಾ ಅವರ ಸಮ್ಮುಖದಲ್ಲಿ ಯಾನ ಬೋಪಣ್ಣ ಅವರ ಶೈಕ್ಷಣಿಕ ಸಾಧನೆಯನ್ನು ಶ್ಲಾಘಿಸಿ, ವಿಶ್ವವಿದ್ಯಾಲಯದ ವತಿಯಿಂದ ಸನ್ಮಾನಿಸಲಾಯಿತು.

ಸಾಧಕಿ ಯಾನ ಬೋಪಣ್ಣ ಅವರು ದಕ್ಷಿಣ ಕೊಡಗಿನ ಶ್ರೀಮಂಗಲ ಸಮೀಪದ ಕುರ್ಚಿ ಗ್ರಾಮದ ದಿವಂಗತ ಅಜ್ಜಮಾಡ ಬೋಪಣ್ಣ ಹಾಗೂ ಪ್ರೇಟಿ ದಂಪತಿಯ ಪುತ್ರಿಯಾಗಿದ್ದು, ಇವರ ಸಾಧನೆಗೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

coorg buzz
WhatsApp Image 2026-08-11 at 16.11.22