ನಾಳೆಯಿಂದ ವಾಹನ ಮಾಲೀಕರಿಗೆ ತೆರಿಗೆ ಶಾಕ್: ವಾಹನಗಳು ದುಬಾರಿ!

tax

Share this post :

ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ವಾಹನ ಖರೀದಿ ಕರ್ನಾಟಕದಲ್ಲಿ ಬಲು ದುಬಾರಿಯಾಗಿದೆ. ಅಲ್ಲದೇ ನಾಳೆಯಿಂದ ಅಂದರೆ ಮೇ ತಿಂಗಳ ಆರಂಭದಿಂದ ಲೈಫ್ ಟೈಮ್ ಟ್ಯಾಕ್ಸ್ (Tax) ಹೆಚ್ಚಾಗುತ್ತಿದೆ. ಸಣ್ಣ ಗೂಡ್ಸ್, ಟ್ಯಾಕ್ಸಿ, ಎಲೆಕ್ಟ್ರಿಕ್ ವಾಹನ ಸೇರಿದಂತೆ ಯಲ್ಲೋ ಬೋರ್ಡ್ ವಾಹನ ಖರೀದಿ ಕರ್ನಾಟಕದಲ್ಲಿ ಬಲು ದುಬಾರಿಯಾಗಿದೆ. ಮೇ.1 ರಿಂದ ಕರ್ನಾಟಕದಲ್ಲಿ ಯೆಲ್ಲೋ ಬೋರ್ಡ್ ವಾಹನಗಳಿಗೆ ಲೈಫ್ ಟೈಮ್ ಟ್ಯಾಕ್ಸ್ ಅಥವಾ ಜೀವಿತಾವಧಿ ತೆರಿಗೆ ಪಾವತಿಸಬೇಕು. ಹೊಸ ಆದೇಶ ನಾಳೆಯಿಂದಲೇ ಜಾರಿಯಾಗುತ್ತಿದೆ.

ಮೇ 1ರಿಂದ 10 ಲಕ್ಷ ರೂ. ಮೌಲ್ಯದೊಳಗಿನ ವಾಣಿಜ್ಯ ವಾಹನ ಖರೀದಿ ತೆರಿಗೆ ದುಬಾರಿಯಾಗಲಿದೆ. ಇನ್ಮುಂದೆ ವಾಣಿಜ್ಯ ವಾಹನ ಖರೀದಿ ವೇಳೆ ಶೇ.5ರಷ್ಟು ಜೀವಿತಾವಧಿ ತೆರಿಗೆ ಪಾವತಿಸಬೇಕಿದೆ. ತೆರಿಗೆ ನಾಳೆಯಿಂದಲೇ ಜಾರಿಗೆ ಬರಲಿದೆ. ಇಷ್ಟೇ ಅಲ್ಲ ಕಟ್ಟಡ ಸಾಮಾಗ್ರಿಗಳನ್ನು ಕೊಂಡೊಯ್ಯುವ ವಾಹನಗಳು, ವಾಣಿಜ್ಯ ಬಳಕೆ ವಾಹನಗಳು, ಎಲೆಕ್ಟ್ರಿಕ್ ಕಾರುಗಳಿಗೆ ದುಬಾರಿ ತೆರಿಗೆ ಪಾವತಿಸಬೇಕು.

ಹತ್ತು ಲಕ್ಷ ರೂಪಾಯಿ ಯೆಲ್ಲೋ ಬೋರ್ಡ್ ವಾಹನಗಳಿಗೆ ಪ್ರತಿ ಸೀಟ್‌ಗೆ 100 ರೂಪಾಯಿಯಂತೆ ಪ್ರತಿ ಮೂರು ತಿಂಗಳಿಗೊಮ್ಮೆ ತೆರಿಗೆ ಪಾವತಿ ಮಾಡಬೇಕು. 4 ಸೀಟರ್ ವಾಹನಕ್ಕೆ 400 ರೂಪಾಯಿ ಪಾವತಿ ಮಾಡಬೇಕಿತ್ತು. ಪರಿಷ್ಕೃತ ತೆರಿಗೆ ನೀತಿಯಲ್ಲಿ ಈ ನಿಯಮ ಬದಲಿಸಲಾಗಿದೆ. ಇದರ ಬದಲಾಗಿ 10 ಲಕ್ಷ ರೂಪಾಯಿ ಒಳಗಿನ ಯೆಲ್ಲೋ ಬೋರ್ಡ್ ವಾಹನಗಳಿಗೆ ಶೇಕಡಾ 5 ರಷ್ಟು ಲೈಫ್ ಟೈಮ್ ಟ್ಯಾಕ್ಸ್ ವಿಧಿಸಲಾಗಿದೆ. ಅಂದರೆ ನಾಳೆಯಿಂದ ಕರ್ನಾಟಕದಲ್ಲಿ ಯಾರಾದರೂ 10 ಲಕ್ಷ ರೂಪಾಯಿಯ ಯೆಲ್ಲೋ ಬೋರ್ಡ್ ವಾಹನ ಖರೀದಿ ಮಾಡಿದರೆ ಜೀವಿತಾವಧಿ ಟ್ಯಾಕ್ಸ್ ಎಂದು 50,000 ರೂಪಾಯಿ ತೆರಿಗೆ ಪಾವತಿಸಬೇಕು. ಹೀಗಾದಲ್ಲಿ ರಸ್ತೆ ತೆರಿಗೆ, ಇತರ ಎಲ್ಲಾ ತೆರಿಗೆ, ವಿಮೆ ಸೇರಿ ವಾಹನದ ಆನ್‌ರೋಡ್ ಬೆಲೆ ದುಪ್ಪಟ್ಟಾಗುತ್ತದೆ.

ನೋಂದಣಿಯಾಗುವ 25 ಲಕ್ಷಕ್ಕೂ ಹೆಚ್ಚು ಮೌಲ್ಯದ ಇವಿ-ಕ್ಯಾಬ್‌ಗಳಿಗೆ ಶೇ.10ರಷ್ಟು ಅಂದರೆ, ಎರಡೂವರೆ ಲಕ್ಷ ರೂ.ತೆರಿಗೆ ವಿಧಿಸಲಾಗುತ್ತದೆ. ಇದು ಜೀವತಾವಧಿ ತೆರಿಗೆಯಾಗಿದ್ದು, ಯೆಲ್ಲೋ ಬೋರ್ಡ್ ಹೊಂದಿರುವ ವಾಹನಗಳಿಗೆ ಅನ್ವಯವಾಗಲಿದೆ. ಈ ತಿದ್ದುಪಡಿ ವಿಧೇಯಕದ ಮೂಲಕ ವಾರ್ಷಿಕ 112.5 ಕೋಟಿ ರು.ಹೆಚ್ಚುವರಿ ಆದಾಯ ಹರಿದು ಬರುವ ಇದೆ ಎಂದು ಮೂಲಗಳು ತಿಳಿಸಿವೆ. ಹೊಸದಾಗಿ ರಸ್ತೆಗಿಳಿಯುವ ಹತ್ತು ಲಕ್ಷ ರೂ.ವರೆಗಿನ ಮೌಲ್ಯದ ಬಾಡಿಗೆ ಮೋಟಾರು ವಾಹನ (ಯೆಲ್ಲೋ ಬೋರ್ಡ್)ಗಳಿಗೆ ಶೇ.5ರಷ್ಟು ತೆರಿಗೆ ವಿಧಿಸಲಾಗುತ್ತದೆ. ಇದೇ ವೇಳೆ, ನಿರ್ಮಾಣ ವಲಯದ ಉಪಕರಣಗಳನ್ನು ಸಾಗಿಸುವ ವಾಹನಗಳಿಗೆ ಜೀವಿತಾವಧಿ ತೆರಿಗೆಯನ್ನು ಶೇ. 6ರಿಂದ ಶೇ.8ಕ್ಕೆ ಹೆಚ್ಚಿಸಲಾಗಿದೆ.

coorg buzz
WhatsApp Image 2026-08-11 at 16.11.22