ಗೋಣಿಕೊಪ್ಪ : ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಆಲೆಮಾಡ ತೋಕ್ ನಮ್ಮೆ ಲಾಂಛನವನ್ನು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಭಾನುವಾರ ಅನಾವರಣಗೊಳಿಸಲಾಯಿತು.
ಒಕ್ಕದ ಸದಸ್ಯರು ಪಾಲ್ಗೊಂಡು ಉತ್ಸಾಹ ತೋರಿದರು. ಕುಟುಂಬದ ಹಿರಿಯರಾದ ಆಲೆಮಾಡ ಕಾರ್ಯಪ್ಪ, ಶಾಂತಿ ಕಾರ್ಯಪ್ಪ ದಂಪತಿ ಲಾಂಛನ ಅನಾವರಗೊಳಿಸಿ ಶುಭಕೋರಿದರು.
ಆಲೆಮಾಡ ಒಕ್ಕ ಅಧ್ಯಕ್ಷ ಆಲೆಮಾಡ ಎನ್. ದೇವಯ್ಯ, ಆಲೆಮಾಡ ತೋಕ್ ನಮ್ಮೆ ಅಧ್ಯಕ್ಷ ಆಲೆಮಾಡ ಸೋಮಣ್ಣ ಉಪಸ್ಥಿತರಿದ್ದರು. ಒಕ್ಕದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಯಾಗಿ ನಡೆಸಲು ಸಹಕಾರ ನೀಡುವ ಭರವಸೆ ನೀಡಿದರು.
ಅಕ್ಟೋಬರ್ ತಿಂಗಳ 10 ಮತ್ತು 11 ರಂದು ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ನಮ್ಮೆ ಆಯೋಜಿಸಲು ನಿರ್ಧರಿಸಲಾಯಿತು.



