ಕಂಡಿಮಕ್ಕಿಯಲ್ಲಿ ವಾರ್ಷಿಕ ತೆರೆ ಮಹೋತ್ಸವ

Kandimakki

ವಿರಾಜಪೇಟೆ: ಕೊಡಗಿನ ವಿರಾಜಪೇಟೆ ಸಮೀಪದ ಬಾಳುಗೋಡಿನಲ್ಲಿರುವ ಶ್ರೀ ಕಂಡಿಮಕ್ಕಿ ತ್ರಿಮೂರ್ತಿ ದೇವಸ್ಥಾನ ಒಂದು ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿದ್ದು ಮಾ.೨೭ ರಿಂದ ೨೯ ರವರೆಗೆ ವಾರ್ಷಿಕ ತೆರೆ ಮಹೋತ್ಸವ ನಡೆಯಲಿದೆ. ಈ ದೇವಾಲಯವು ಹಿಂದೂ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಶಿವನ ರೂಪದಲ್ಲಿ ಮೂರ್ತಿ ಸ್ವಾಮಿಯನ್ನು ಆರಾಧಿಸುವ ಪುಣ್ಯಕ್ಷೇತ್ರವಾಗಿದ್ದು, ನಂಬಿ ಬಂದವರ ಕಷ್ಟಗಳನ್ನು ದೂರಮಾಡುವ ದೈವವೆಂದು ಭಕ್ತರ ಅಪಾರ ನಂಬಿಕೆಯಿದೆ. ಇಲ್ಲಿನ ಪ್ರಧಾನ ದೇವತೆ ಶ್ರೀ ಕಂಡಿಮಕ್ಕಿ ತ್ರಿಮೂರ್ತಿ ಸ್ವಾಮಿ. ಇಲ್ಲಿ ನಡೆಯುವ ಕಂಡಿಮಕ್ಕಿ ತೆರೆ ಮಹೋತ್ಸವ (ಉತ್ಸವ) […]

ವಿರಾಜಪೇಟೆ ಖಾಸಗಿ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನ ಪಾರ್ಕಿಂಗ್‌ಗೆ ವಿರೋಧ

ವಿರಾಜಪೇಟೆ: ವಿರಾಜಪೇಟೆಯ ಖಾಸಗಿ ಬಸ್ಸು ನಿಲ್ದಾಣದಲ್ಲಿ (By stand) ಖಾಸಗಿ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ಖಾಸಗಿ ಬಸ್ಸುಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಖಾಸಗಿ ಬಸ್ಸು ಕಾರ್ಮಿಕರ ಸಂಘದ ಖಜಾಂಚಿ ದಿನೇಶ್ ನಾಯರ್ ಆರೋಪಿಸಿದರು. ಖಾಸಗಿ ಬಸ್ಸು ನಿಲ್ದಾಣದಲ್ಲಿ ವಾಹನಗಳ ಪಾರ್ಕಿಂಗ್‌ನಿಂದ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಮಾದ್ಯಮದವರಿಗೆ ಮಾಹಿತಿ ನೀಡಿದ ದಿನೇಶ್ ಅವರು, ದಿನನಿತ್ಯದ ಸಂಬಳಕ್ಕಾಗಿ ದುಡಿಯುವ ಕಾರ್ಮಿಕ ವರ್ಗದ ಬಸ್ಸು ಚಾಲಕ ಮತ್ತು ನಿರ್ವಾಹಕರು ಇಲ್ಲಿದ್ದಾರೆ. ಬಸ್ಸು ನಿಲ್ದಾಣದಲ್ಲಿ ಬಂದು ಅವರಿಗೆ ತಿನ್ನಲು ಕುಡಿಯಲು ಕೇವಲ ೫-೧೦ ನಿಮಿಷಗಳ […]

ಆಲೆಮಾಡ ತೋಕ್‌ ನಮ್ಮೆ ಲಾಂಛನ ಅನಾವರಣ : ಅಕ್ಟೋಬರ್‌ನಲ್ಲಿ ಕಾರ್ಯಕ್ರಮ

ಗೋಣಿಕೊಪ್ಪ : ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಆಲೆಮಾಡ ತೋಕ್ ನಮ್ಮೆ ಲಾಂಛನವನ್ನು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಭಾನುವಾರ ಅನಾವರಣಗೊಳಿಸಲಾಯಿತು. ಒಕ್ಕದ ಸದಸ್ಯರು ಪಾಲ್ಗೊಂಡು ಉತ್ಸಾಹ ತೋರಿದರು. ಕುಟುಂಬದ ಹಿರಿಯರಾದ ಆಲೆಮಾಡ ಕಾರ್ಯಪ್ಪ,‌ ಶಾಂತಿ ಕಾರ್ಯಪ್ಪ ದಂಪತಿ ಲಾಂಛನ ಅನಾವರಗೊಳಿಸಿ ಶುಭ‌ಕೋರಿದರು. ಆಲೆಮಾಡ ಒಕ್ಕ ಅಧ್ಯಕ್ಷ ಆಲೆಮಾಡ ಎನ್. ದೇವಯ್ಯ, ಆಲೆಮಾಡ ತೋಕ್ ನಮ್ಮೆ ಅಧ್ಯಕ್ಷ ಆಲೆಮಾಡ ಸೋಮಣ್ಣ ಉಪಸ್ಥಿತರಿದ್ದರು. ‌ಒಕ್ಕದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಯಾಗಿ ನಡೆಸಲು ಸಹಕಾರ ನೀಡುವ ಭರವಸೆ ನೀಡಿದರು. ಅಕ್ಟೋಬರ್ ತಿಂಗಳ […]

ಕರಡಿಗೋಡು ಬಸವೇಶ್ವರ ದೇವರ ವಾರ್ಷಿಕೋತ್ಸವ

ಸಿದ್ದಾಪುರ : ಕರಡಿಗೋಡು ಗ್ರಾಮದ ಕುಕ್ಕುನೂರು ಕುಟುಂಬದ ಶ್ರೀ ಬಸವೇಶ್ವರ ದೇವರ ವಾರ್ಷಿಕ ಉತ್ಸವ ಮಾರ್ಚ್ 29, 30, 31ರಂದು ನಡೆಯಲಿದೆ. 29ರ ಭಾನುವಾರ ಸಂಜೆ ಗೋ ಪೂಜೆ, ನಿತ್ಯ ಪೂಜೆಯ ನಂತರ 7:30 ಗಂಟೆಗೆ ಭಂಡಾರದ ಮನೆಯಿಂದ ದೇವರ ಭಂಡಾರವನ್ನು ದೇವಸ್ಥಾನಕ್ಕೆ ತರುವುದು. 30ರಂದು ಬೆಳಗ್ಗೆ 8-30 ಕ್ಕೆ ಗಣಪತಿ ಹೋಮ, 10:00 ಕ್ಕೆ ಕಲಶ ಪೂಜೆ, 11:00ಕ್ಕೆ ಗಂಗಾ ಸ್ನಾನ, ಕಾವೇರಿ ನದಿಯಿಂದ ಶ್ರೀ ಬಸವೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆ, ಮಧ್ಯಾಹ್ನ 12:30 ಕ್ಕೆ […]

ವಿರಾಜಪೇಟೆಯ ಆರ್ಜಿ ಗ್ರಾಮದ ಕಲ್ಲುಬಾಣೆಯ ಶ್ರೀ ಮುತ್ತಪ್ಪ ಸೇವಾ ಸಂಘದಿಂದ ಕಲಶ ಪೂಜೆ

ವಿರಾಜಪೇಟೆ: ವಿರಾಜಪೇಟೆಯ ಆರ್ಜಿ ಗ್ರಾಮದ ಕಲ್ಲುಬಾಣೆಯ ಶ್ರೀ ಮುತ್ತಪ್ಪ ಸೇವಾ ಸಂಘದ ವತಿಯಿಂದ ಕಲ್ಲುಬಾಣೆಯಲ್ಲಿ ೧೧ ನೇ ವರ್ಷದ ಕಳಶ ಮಹೋತ್ಸವ ೨ ದಿನಗಳ ಕಾಲ ಅತ್ಯಂತ ಶ್ರದ್ದಾ ಭಕ್ತಿಯಿಂದ ಯಶಸ್ವಿಯಾಗಿ ನಡೆಯಿತು. ಮೊದಲ ದಿನ ಕಳಸ ಪ್ರತಿಷ್ಠಾಪನೆ, ಶ್ರೀ ಮುತ್ತಪ್ಪ ದೇವರ ಪೈಂಗುತ್ತಿ ಸೇವೆ ನಡೆಯಿತು. ಬಳಿಕ ಸಂಜೆ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ನಡೆಯಿತು. ಕಳಸ ಮಹೋತ್ಸವದ ಅಂಗವಾಗಿ ವಿವಿಧ ಸಾಧಕರನ್ನು, ಗ್ರಾಮದ ಹಿರಿಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ […]