ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ಅಪಪ್ರಚಾರ: ಸೈಬರ್ ಕ್ರೈಮ್ ಮೆಟ್ಟಿಲೇರಿದ ರಶ್ಮಿಕಾ – ವಿಜಯ್ ದೇವರಕೊಂಡ ಲೀಗಲ್ ಟೀಮ್

Rashmika Mandanna

ಚಿತ್ರರಂಗದ ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಸರಣಿ ಟ್ರೋಲ್ ಮತ್ತು ಅಪಪ್ರಚಾರಗಳ ವಿರುದ್ಧೀಗ ಕಾನೂನು ಸಮರ ಆರಂಭವಾಗಿದೆ. ‘ಕಾಫಿ ವಿತ್ ಕರಣ್’ ಕಾರ್ಯಕ್ರಮದ ಬಳಿಕ ಇಬ್ಬರ ವಿರುದ್ಧವೂ ಸಾಮಾಜಿಕ ಜಾಲತಾಣಗಳಲ್ಲಿ ಹರಡಿಸಲಾಗುತ್ತಿರುವ ನಕಲಿ ಸ್ಕ್ರೀನ್‌ಶಾಟ್‌ಗಳು, ಎಡಿಟ್ ಮಾಡಿದ ಫೋಟೋಗಳು ಹಾಗೂ ನಿಂದನಾತ್ಮಕ ಪೋಸ್ಟ್‌ಗಳನ್ನು ಗಂಭೀರವಾಗಿ ಪರಿಗಣಿಸಿರುವ ಅವರ ಕಾನೂನು ನೆರವು ತಂಡವು ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ಅಧಿಕೃತವಾಗಿ ದೂರು ನೀಡಿದೆ. ಚಿತ್ರನಟರ ವ್ಯಕ್ತಿತ್ವ ಹರಣ, […]

ರಾಮಾಯಣ ಪ್ರೀತಿ, ಮಾನವೀಯತೆ ಹಾಗೂ ಸಮರಸತೆಯ ಸಂದೇಶ ಸಾರುವ ಮಹಾಕಾವ್ಯ: ಪ್ರೊ. ನಂಜುಂಡಸ್ವಾಮಿ

Valmiki Jayanti

ಮಹರ್ಷಿ ವಾಲ್ಮೀಕಿಯವರು ರಚಿಸಿದ ‘ರಾಮಾಯಣ’ ಕೇವಲ ಒಂದು ಧಾರ್ಮಿಕ ಗ್ರಂಥವಲ್ಲ; ಅದು ಮಾನವ ಸಮಾಜಕ್ಕೆ ಪ್ರೀತಿ, ಕರುಣೆ, ಸೌಹಾರ್ದತೆ ಮತ್ತು ಸಮರಸತೆಯ ಅತ್ಯುನ್ನತ ಸಂದೇಶ ನೀಡುವ ಶ್ರೇಷ್ಠ ಮಹಾಕಾವ್ಯವಾಗಿದೆ ಎಂದು ಪಿರಿಯಾಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನಂಜುಂಡಸ್ವಾಮಿ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಗರದ ಗಾಂಧಿ ಭವನದಲ್ಲಿ ಆಯೋಜಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು. ವಾಲ್ಮೀಕಿಯವರು […]

ನ. 2-3ಕ್ಕೆ ಪತ್ರಕರ್ತರ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ – ಕೊಡಗು ಜಿಲ್ಲೆಯ ಆತಿಥ್ಯ – 23 ಜಿಲ್ಲಾ ತಂಡಗಳು ಭಾಗಿ

ಮಡಿಕೇರಿ : ಸದಾ ಸುದ್ದಿ ಬೆನ್ನತ್ತಿ ಓಡುವ, ದಿನವಿಡೀ ಅಕ್ಷರಗಳೊಂದಿಗೆ ಸೆಣಸಾಡುವ ಪತ್ರಕರ್ತರು ಇದೀಗ ತಮ್ಮ ಕೆಲಸ-ಕಾರ್ಯಗಳನ್ನು ಕೆಲಕಾಲ ಬದಿಗೊತ್ತಿ ಬ್ಯಾಟ್–ಬಾಲ್ ಹಿಡಿದು ಮೈದಾನಕ್ಕಿಳಿಯಲು ಸಜ್ಜಾಗಿದ್ದಾರೆ. ಕ್ರೀಡಾ ತವರು ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿ ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಹಬ್ಬಕ್ಕೆ ಸಜ್ಜಾಗಿದ್ದು, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಈ ಪ್ರತಿಷ್ಠಿತ ಪಂದ್ಯಾವಳಿಯ ಆತಿಥ್ಯ ವಹಿಸಿದೆ. ನ. 2 ಮತ್ತು 3ರಂದು ನಡೆಯಲಿರುವ ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಟೂರ್ನಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಪತ್ರಕರ್ತರ ತಂಡಗಳು ಪಾಲ್ಗೊಳ್ಳಲಿದ್ದು, […]