ಕೊಡಗು ಮಳೆ ಅಪ್‌ಡೇಟ್ಸ್: ಹಾರಂಗಿ ಜಲಾಶಯದ ನೀರಿನ ಮಟ್ಟ ವಿವರ

Kodagu Rain

Share this post :

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಸರಾಸರಿ 9.20 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 15.87 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು 1106.57 ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 2191.24 ಮಿ.ಮೀ. ದಾಖಲಾಗಿತ್ತು.

ತಾಲ್ಲೂಕುವಾರು ಮಳೆ ವಿವರ:
ಮಡಿಕೇರಿ ತಾಲ್ಲೂಕಿನಲ್ಲಿ ಸರಾಸರಿ 11.40 ಮಿ.ಮೀ (ವರ್ಷದ ಒಟ್ಟು: 1744.56 ಮಿ.ಮೀ), ವಿರಾಜಪೇಟೆಯಲ್ಲಿ 2.80 ಮಿ.ಮೀ (ಒಟ್ಟು: 1032.42 ಮಿ.ಮೀ), ಪೊನ್ನಂಪೇಟೆಯಲ್ಲಿ 10.60 ಮಿ.ಮೀ (ಒಟ್ಟು: 1051.66 ಮಿ.ಮೀ), ಸೋಮವಾರಪೇಟೆಯಲ್ಲಿ 16.50 ಮಿ.ಮೀ (ಒಟ್ಟು: 1218.48 ಮಿ.ಮೀ) ಹಾಗೂ ಕುಶಾಲನಗರ ತಾಲ್ಲೂಕಿನಲ್ಲಿ 4.70 ಮಿ.ಮೀ (ಒಟ್ಟು: 485.54 ಮಿ.ಮೀ) ಮಳೆಯಾಗಿದೆ.

ಹೋಬಳಿವಾರು ವಿವರ (ಮಿ.ಮೀ.ಗಳಲ್ಲಿ):
ಹುದಿಕೇರಿ 38.10, ಶಾಂತಳ್ಳಿ 26.40, ಸುಂಟಿಕೊಪ್ಪ 21, ಸಂಪಾಜೆ 14.90, ಮಡಿಕೇರಿ 14.20, ಭಾಗಮಂಡಲ 13.80, ಸೋಮವಾರಪೇಟೆ 13.50, ಶನಿವಾರಸಂತೆ 9.70, ಕೊಡ್ಲಿಪೇಟೆ 6.70, ಕುಶಾಲನಗರ 4.70, ಶ್ರೀಮಂಗಲ 4.60, ವಿರಾಜಪೇಟೆ 3.90, ನಾಪೋಕ್ಲು 3.60, ಅಮ್ಮತ್ತಿ 1.40, ಪೊನ್ನಂಪೇಟೆ 1.30 ಮತ್ತು ಬಾಳೆಲೆಯಲ್ಲಿ 0.30 ಮಿ.ಮೀ ಮಳೆ ದಾಖಲಾಗಿದೆ.

ಹಾರಂಗಿ ಜಲಾಶಯದ ಸ್ಥಿತಿಗತಿ:
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಇಂದಿನ ನೀರಿನ ಮಟ್ಟ 2,858.15 ಅಡಿಗಳಿಗೆ ತಲುಪಿದೆ. ಜಲಾಶಯಕ್ಕೆ ಪ್ರಸ್ತುತ 5,562 ಕ್ಯುಸೆಕ್ ನೀರಿನ ಒಳಹರಿವಿದ್ದು, ನದಿಗೆ 3,883 ಕ್ಯುಸೆಕ್ ಹಾಗೂ ನಾಲೆಗೆ 500 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಹಾರಂಗಿ ಆಣೆಕಟ್ಟು ಪ್ರದೇಶದಲ್ಲಿ 5.20 ಮಿ.ಮೀ ಮಳೆಯಾಗಿದೆ.

coorg buzz
coorg buzz