ಅಂತರಾಷ್ಟ್ರೀಯ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ವಿರಾಜಪೇಟೆಯ ಪ್ರಜ್ವಲ್ ಸಾಧನೆ

Share this post :

ಬೆಂಗಳೂರು ಯೂನಿವರ್ಸಿಟಿಯಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ನೈಸರ್ಗಿಕ ದೇಹದಾರ್ಢ್ಯ ಸ್ಪರ್ಧೆಯಲ್ಲಿ ವಿರಾಜಪೇಟೆಯ ಸಂತ ಅನ್ನಮ್ಮ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಪ್ರಜ್ವಲ್ ವಿ. ಎಂ. ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. 13 ರಿಂದ 19 ವರ್ಷದೊಳಗಿನ ವಿಭಾಗದಲ್ಲಿ ಸ್ಪರ್ಧಿಸಿದ್ದ ಇವರು, ಪಿಯುಸಿ ಓದಿನ ನಡುವೆಯೂ ಕಠಿಣ ಪರಿಶ್ರಮದಿಂದ ಈ ಮೈಲಿಗಲ್ಲು ತಲುಪಿದ್ದಾರೆ. ಗಾಂಧಿನಗರದ ಪಿ. ಎ. ಮಂಜುನಾಥ್ ಹಾಗೂ ಉಪನ್ಯಾಸಕಿ ಅಶ್ವಿನಿ ದಂಪತಿಯ ಪುತ್ರನಾದ ಪ್ರಜ್ವಲ್‌ಗೆ ಜಿಮ್ ತರಬೇತುದಾರರಾದ ಲಕ್ಷ್ಮೀಶ್ ಮತ್ತು ರವಿ ಮಾರ್ಗದರ್ಶನ ನೀಡಿದ್ದರು. ವಿದ್ಯಾರ್ಥಿಯ ಈ ಅಪೂರ್ವ ಸಾಧನೆಯನ್ನು ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಮದಲೈ ಮುತ್ತು ಶ್ಲಾಘಿಸಿದ್ದು, ಈ ಯಶಸ್ಸು ಕಾಲೇಜಿಗೂ ಹಾಗೂ ಕೊಡಗು ಜಿಲ್ಲೆಗೂ ಹೆಮ್ಮೆ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

coorg buzz
WhatsApp Image 2026-08-11 at 16.11.22