ಮೈಸೂರು ಸೇಂಟ್ ಜೋಸೆಫ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಿದ ವಿರಾಜಪೇಟೆಯ ಕಾವೇರಿ ಪದವಿ ಹಾಗೂ ಪದವಿ ಪೂರ್ವ ಪೈನಲ್ ಪಂದ್ಯ ಆಡುದರ ಮೂಲಕ ಒಂದೇ ವಿದ್ಯಾಸಂಸ್ಥೆಯ ಎ ಹಾಗೂ ಬಿ ತಂಡಗಳು ಪೈನಲ್ ಹಣಾಹಣಿಯಲ್ಲಿ ಆಡಿದ ಇತಿಹಾಸ ಸೃಷ್ಟಿ ಮಾಡಿದೆ.
ಒಟ್ಟು 16 ತಂಡಗಳು ಭಾಗವಹಿಸಿದ್ದ ರಾಜ್ಯ ಮಟ್ಟದ 5ಎ ಸೈಡ್ ಹಾಕಿ ಪಂದ್ಯಾವಳಿಯಲ್ಲಿ ವಿರಾಜಪೇಟೆ ಕಾವೇರಿ ಪದವಿ ಕಾಲೇಜು (Cauvery College) 4 -1 ಗೋಲುಗಳ ಅಂತರದಲ್ಲಿ ವಿರಾಜಪೇಟೆ ಪದವಿಪೂರ್ವ ಕಾಲೇಜನ್ನು ಸೋಲಿಸಿ ಗೆಲುವನ್ನು ಸಾಧಿಸಿತು. ಇದಕ್ಕೂ ಮೊದಲು ವಿರಾಜಪೇಟೆ ಕಾವೇರಿ ಪದವಿ ಕಾಲೇಜಿನ ತಂಡವು ಸೆಪಿಯೆಂಟ್ ಕಾಲೇಜಿನ ಬಿ. ತಂಡವನ್ನು 6 -2 , ಗೋಣಿಕೊಪ್ಪಲು ಕಾವೇರಿ ಕಾಲೇಜನ ಬಿ ತಂಡವನ್ನು 5 – 2 , ಸೆಂಟ್ ಜೋಸೆಫ್ ಕಾಲೇಜಿನ ಎ ತಂಡವನ್ನು 5 – 3 ಗೋಲುಗಳ ಅಂತರದಲ್ಲಿ ಸೋಲಿಸಿ ಫೈನಲ್ ಲಗ್ಗೆಯಿಟ್ಟಿತು.
ಇನ್ನೊಂದು ಕಡೆ ವಿರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜಿನ ತಂಡವು .ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಎ ತಂಡವನ್ನು 4 – 1 , ಸೆಪಿಯೆಂಟ್ ಕಾಲೇಜಿನ ಎ. ತಂಡವನ್ನು 5 – 4 , ಸೆಂಟ್ ಅಲೋಶಿಯಸ್ ಕಾಲೇಜನ್ನು 5- 2 ಗೋಲುಗಳ ಅಂತರದಲ್ಲಿ ಸೋಲಸಿ ಪೈನಲ್ ಪ್ರವೇಶಿಸಿತು. ಅಂತಿಮವಾಗಿ ವಿರಾಜಪೇಟೆ ಕಾವೇರಿ ಪದವಿ ಕಾಲೇಜು ಹಾಗೂ ಪದವಿಪೂರ್ವ ಕಾಲೇಜಿನ ನಡುವೆ ನಡೆದ ವಿರೋಚಿತ ಪಂದ್ಯದಲ್ಲಿ ಪದವಿ ಕಾಲೇಜಿನ ತಂಡವು 4 – 1 ಗೋಲಿನ ಅಂತರದಲ್ಲಿ ಕಾವೇರಿ ಪದವಿ ಪೂರ್ವ ಕಾಲೇಜಿನ ತಂಡವನ್ನು ಸೋಲಿಸುವ ಮೂಲಕ ಜಯ ಸಾಧಿಸಿ 15 000 ನಗದು ವಿನ್ನರ್ಸ್ ಟ್ರೋಫಿ ಹಾಗೂ ವೈಯಕ್ತಿಕ ಪಾರಿತೋಷಕವನ್ನು ಪಡೆದುಕೊಂಡರೆ, ದ್ವಿತೀಯ ಸ್ಥಾನ ಪಡೆದ ಕಾವೇರಿ ಪದವಿ ಪೂರ್ವ ಕಾಲೇಜಿನ ತಂಡ 10,000 ನಗದು ರನ್ನರ್ಸ್ ಟ್ರೋಫಿ ಹಾಗೂ ವೈಯಕ್ತಿಕ ಪಾರಿತೋಷಕ ಪಡೆದು ಕೊಂಡಿದೆ.
ಪಂದ್ಯಾಟದ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಕಾವೇರಿ ಪದವಿ ಕಾಲೇಜಿನ ತಕ್ಷಕ್ ಬಿದ್ದಪ್ಪ ಪಡೆದರೆ, ಉತ್ತಮ ಗೋಲು ಕೀಪರ್ ಪ್ರಶಸ್ತಿಯನ್ನು ಪದವಿಪೂರ್ವ ಕಾಲೇಜಿನ ಬಾಲ ಚಂದ್ರನ್ ಪಡೆದು ಕೊಂಡರು. ಪ್ರಥಮ ಹಾಗೂ ದ್ವಿತೀಯ ಬಹುಮಾನವನ್ನು ಪಡೆಯುವುದರ ಮೂಲಕ ಸಾಧನೆಯನ್ನು ಮಾಡಿದ ಕಾಲೇಜಿನ ಎರಡು ಹಾಕಿ ತಂಡದ ಕ್ರೀಡಾಪಟುಗಳನ್ನು ಹಾಗೂ ಅವರ ತರಬೇತುದಾರರಾದ ತಮ್ಮಯ್ಯ ರನ್ನು ಪದವಿ ಕಾಲೇಜಿನ ಪ್ರಾಂಶುಪಾಲರಾದ ಬೆನೆಡಿಕ್ಟ್ ಆರ್ ಸಲ್ದಾನ ಹಾಗೂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎನ್ ಎಂ ನಾಣಯ್ಯ ಕಾಲೇಜಿನ ಪರವಾಗಿ ಅಭಿನಂದಿಸಿದ್ದಾರೆ.