ಕಾವೇರಿ ಕಾಲೇಜಿನಲ್ಲಿ ‘ವಾಣಿಜ್ಯ ಶಾಸ್ತ್ರದ ಅಡಿಪಾಯ’ ಪುಸ್ತಕ ಬಿಡುಗಡೆ

Foundations of Commerce book

Share this post :

ಗೋಣಿಕೊಪ್ಪಲು: ಕಾವೇರಿ ಕಾಲೇಜಿನ ಸಹ ಪ್ರಾಧ್ಯಾಪಕಿ ಪುತ್ತಾಮನೆ ಪೂಜಾ ಶರಣು ಹಾಗೂ ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ವೇಣುಗೋಪಾಲ್ ಹೆಚ್.ಎಸ್. ಅವರು ಜಂಟಿಯಾಗಿ ರಚಿಸಿರುವ ‘ವಾಣಿಜ್ಯ ಶಾಸ್ತ್ರದ ಅಡಿಪಾಯ’ (ಕನ್ನಡ ಆವೃತ್ತಿ) ಮತ್ತು ‘Foundation of Commerce’ (ಆಂಗ್ಲ ಆವೃತ್ತಿ) ಎಂಬ ಎರಡು ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.

ಮಂಗಳೂರು ಮತ್ತು ಕೊಡಗು ವಿಶ್ವವಿದ್ಯಾಲಯಗಳ ನೂತನ ಪಠ್ಯಕ್ರಮವನ್ನು ಆಧರಿಸಿ ಈ ಪುಸ್ತಕಗಳನ್ನು ಸಿದ್ಧಪಡಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಪೂರಕ ಮಾಹಿತಿಯನ್ನು ಒದಗಿಸುವ ಉದ್ದೇಶ ಹೊಂದಿವೆ. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ.ಬಿ. ಕಾವೇರಿಯಪ್ಪ, ಪ್ರಾಂಶುಪಾಲೆ ಪ್ರೊ. ಎಂ.ಎಸ್. ಭಾರತಿ ಹಾಗೂ ಐ.ಕ್ಯೂ.ಎ.ಸಿ. (IQAC) ಸಂಚಾಲಕಿ ಡಾ. ನಯನ ತಮ್ಮಯ್ಯ ಅವರು ಪುಸ್ತಕಗಳನ್ನು ಅನಾವರಣಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಉಪನ್ಯಾಸಕ ವೃಂದದವರಾದ ಕಾವೇರಮ್ಮ, ನಿತ್ಯ, ಪೊನ್ನಮ್ಮ, ಪ್ರಕಾಶ್, ಸೀತಮ್ಮ ಹಾಗೂ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

coorg buzz
coorg buzz