ಭಾಗಮಂಡಲದಲ್ಲಿ ಆರೋಗ್ಯ ತಪಾಸಣಾ ಉಚಿತ ಶಿಬಿರ ಜೂನ್‌ 30ಕ್ಕೆ

Share this post :

ಭಾಗಮಂಡಲ : ಇಲ್ಲಿನ ಗಜಾನನ ಯುವಕ ಸಂಘ ವತಿಯಿಂದ ರೋಟರಿ ಮಡಿಕೇರಿ ವುಡ್ಸ್ ಸಹಯೋಗದೊಂದಿಗೆ ರಕ್ತದಾನ ಹಾಗೂ ಆರೋಗ್ಯ ತಪಾಸಣಾ ಉಚಿತ ಶಿಬಿರ ಹಮ್ಮಿಕೊಳ್ಳಲಾಗಿದೆ. ಜೂನ್ 30ರಂದು ಭಾಗಮಂಡಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಿಬಿರ ನಡೆಯಲಿದೆ.
ಶಿಬಿರದಲ್ಲಿ ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್ ತಪಾಸಣೆ, ಸ್ತ್ರೀರೋಗ, ಹೃದಯ ಸಂಬಂಧಿಸಿದ ಕಾಯಿಲೆಗಳ ತಪಾಸಣೆ ಮಾಡಲಾಗುವುದು. ಶಿಬಿರಕ್ಕೆ ಬರುವ ಮಂದಿಗೆ ಭಾಗಮಂಡಲ ಶ್ರೀ ಕಾವೇರಿ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಉಚಿತ ಸೇವೆ ಇರಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಶಿಬಿರದ ಬಗ್ಗೆ ಹೆಚ್ಚಿನ ಮಾಹಿತಿಗೆ ಗೌರೀಶ್‌ ರೈ(ಅಧ್ಯಕ್ಷರು) 91 8904665906, ಮನು(ಖಜಾಂಜಿ) +91 9019930101 ಇವರನ್ನು ಸಂಪರ್ಕಿಸಬಹುದು.