ಮೊದಲ ಬಾರಿ ಯೋಗ ಮಾಡ್ತಾ ಇದ್ದೀರಾ..? ಹಾಗಿದ್ರೆ ಈ ಬಗ್ಗೆ ಗಮನವಿರಲಿ..!

yoga practice

Share this post :

Coorg buzz health tips : ಯೋಗ (Yoga) ಮಾಡುವುದರಿಂದ ನಾವು ದೈಹಿಕ ಆರೋಗ್ಯ ಕಾಪಾಡಿಕೊಳ್ಳಬಹುದು. ಯೋಗವು ದೇಹ ಮತ್ತು ಮನಸನ್ನು ಶಾಂತಗೊಳಿಸಲು, ದೈಹಿಕ ಮಾನಸಿಕ ಸಮತೋಲನವನ್ನು ನಿರ್ವಹಿಸುತ್ತದೆ. ಆಧುನಿಕ ಯುಗದಲ್ಲಿ ಮನುಷ್ಯನಿಗೆ ಒತ್ತಡ ಹೆಚ್ಚಾಗಿದೆ. ಹೀಗಾಗಿ 20 ರಿಂದ 30 ನಿಮಿಷಗಳ ಕಾಲ ಯೋಗ ಮಾಡುವ ಮೂಲಕ ನೀವು ನಿಮ್ಮ ಜೀವನವನ್ನು ಉತ್ತಮಗೊಳಿಸಬಹುದು.

ಬೆಳಗ್ಗೆ ಎದ್ದು ಯೋಗಾಭ್ಯಾಸ (Yoga practice) ಮಾಡುವುದರಿಂದ ಹಲವಾರು ರೀತಿಯ ಕಾಯಿಲೆಗಳನ್ನು ತಪ್ಪಿಸಬಹುದು.

ಯೋಗ ಮಾಡುವಾಗ ನಾವು ಹಲವು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ನಿಮ್ಮ ದೇಹಕ್ಕೆ ಸರಿಹೊಂದುವಂತಹ ಬಟ್ಟೆ ಧರಿಸಿ. ಆದಷ್ಟು ಬಿಗಿಯಾಗದಂತೆ ನೋಡಿಕೊಳ್ಳಿ.

ನೀವು ಅನಾರೋಗ್ಯ ನಿವಾರಿಸಲು ಯೋಗ ಮಾಡುತ್ತಿದ್ದರೆ ವೈದ್ಯರ ಸಲಹೆಯಂತೆ ಸೂಕ್ತ ಭಂಗಿಯನ್ನು ಅಭ್ಯಾಸ ಮಾಡಿ.

ಯೋಗ ಅಭ್ಯಾಸ ಮಾಡುವಾಗ ಸರಿಯಾದ ಭಂಗಿಯಲ್ಲಿ ಮಾಡಬೇಕು. ಇಲ್ಲದಿದ್ದರೆ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಯೋಗವನ್ನು ಆದಷ್ಟು ಖಾಲಿ ಹೊಟ್ಟೆಯಲ್ಲೇ ಮಾಡಬೇಕು. ಅಥವಾ ಆಹಾರ ಸೇವಿಸಿದ ನಂತರ ಕನಿಷ್ಟ 3 ಗಂಟೆಯ ಅಂತರವಿರಬೇಕು.