Coorg Buzz Correspondent Dubai : ಉದ್ಯೋಗ ಹಾಗೂ ವಿವಿಧ ಕಾರಣಗಳಿಂದ ದುಬೈನಲ್ಲಿ ನೆಲೆಸಿರುವ ಕೊಡಗಿನ ಯುವಕರಿಗಾಗಿ ದುಬೈ ಕೂರ್ಗ್ ಕ್ರಿಕೆಟ್ ಫೆಸ್ಟ್ ಸೀಸನ್ 02 ಆಯೋಜಿಸಲಾಗಿದೆ.
ಕೊಡಗಿನ ಯುವಕರ ತಂಡ ಕಳೆದ ಬಾರಿ ಸೀಸನ್ 01 ಅನ್ನು ಯಶಸ್ವಿಯಾಗಿ ಆಯೋಜಿಸಿತ್ತು. ಇದೀಗ ಎರಡನೇ ವರ್ಷದ ಟೂರ್ನಿಗಾಗಿ ವೇದಿಕೆ ಸಿದ್ಧ ಮಾಡಿಕೊಳ್ಳುತ್ತಿದೆ. ಈ ಬಾರಿ ಹತ್ತು ತಂಡಗಳಿಗೆ ಅವಕಾಶ ಕಲ್ಪಿಸಲಾಗಿದೆ. ಎರಡು ಗ್ರೂಪ್ಗಳಾಗಿ ಮಾಡಿ ಲೀಗ್ ಮಾದರಿಯಲ್ಲಿ ಪಂದ್ಯಾವಳಿ ನಡೆಸಲು ಉದ್ದೇಶಿಸಲಾಗಿದೆ. ಪ್ರತಿ ಪಂದ್ಯವು 05 ಓವರ್ಗೆ ಸೀಮಿತವಾಗಿರುತ್ತದೆ.
ತಂಡಗಳ ನೋಂದಣಿ ಪ್ರಕ್ರಿಯೆ ಜೂನ್ 25ರಿಂದ ಆರಂಭವಾಗಲಿದ್ದು, ಆಸಕ್ತರು ಜುಲೈ 20ರ ಒಳಗಾಗಿ ತಮ್ಮ ತಂಡಗಳ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶವಿದೆ. ಮೊದಲು ನೋಂದಣಿ ಮಾಡುವ ಹತ್ತು ತಂಡಗಳಿಗೆ ಮಾತ್ರ ಅವಕಾಶವಿರಲಿದೆ ಎಂದು ಆಯೋಜಕರು ಕೂರ್ಗ್ ಬಜ್ಹ್ಗೆ ಮಾಹಿತಿ ನೀಡಿದ್ದಾರೆ.
ಆಟಗಾರರ ಆಯ್ಕೆ ಪ್ರಕ್ರಿಯೆ ಬಿಡ್ಡಿಂಗ್ ಮೂಲಕ ನಡೆಯಲಿದೆ. ಆಸಕ್ತ ಆಟಗಾರರು ಆಯೋಜಕರಿಂದ ಅರ್ಜಿ ಪಡೆದು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಮೊದಲ ಬಹುಮಾನವಾಗಿ ಆಕರ್ಷಕ ಟ್ರೋಫಿ ಹಾಗೂ 4555dh ನಗದು, ದ್ವಿತೀಯ ಟ್ರೋಫಿ ಹಾಗೂ 2555dh ನಗದು, ತೃತೀಯ ಸ್ಥಾನ ಪಡೆದ ತಂಡಕ್ಕೆ ಟ್ರೋಫಿ ನೀಡಲಾಗುತ್ತದೆ. ವಿಜೇತ ತಂಡದ ಆಟಗಾರರಿಗೆ ತಲಾ 100dh, ರನ್ನರಪ್ ತಂಡದ ಆಟಗಾರರಿಗೆ 50dh ನಗದು ಬಹುಮಾನ ರೂಪದಲ್ಲಿ ಸಿಗಲಿದೆ.
ಹೆಚ್ಚಿನ ಮಾಹಿತಿಗಾಗಿ ನಿಶಾಬ್ +971 55 368 3937, ನೂರುದ್ದೀನ್ +971502238522 ಅವರನ್ನು ಸಂಪರ್ಕಿಸಬಹುದು.