ಮೂರ್ನಾಡು 66 ಕೆವಿ ವಿದ್ಯುತ್ ಉಪಕೇಂದ್ರ ನಿರ್ಮಾಣಗೊಳ್ಳಲಿರುವುದರಿಂದ ಹಾಲಿ 33 ಕೆವಿ ವಿದ್ಯುತ್ ಉಪಕೇಂದ್ರದ 11ಕೆವಿ ವಿದ್ಯುತ್ ಮಾರ್ಗಗಳ ಮರುಹೊಂದಾಣಿಕೆ ಕಾಮಗಾರಿ ನಿರ್ವಹಿಸಲಾಗುವುದು. ಆದ್ದರಿಂದ ಜೂನ್ 13 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ, ಮೂರ್ನಾಡು, ಮರಗೋಡು, ಹಾಕತ್ತೂರು, ಹೊಸ್ಕೇರಿ, ಹೊದ್ದೂರು, ನರಿಯಂದಡ, ನಾಪೋಕ್ಲು, ಕುಂಜಿಲ, ಎಮ್ಮೆಮಾಡು, ಬಲ್ಲಮಾವಟಿ ಹಾಗೂ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ (Power Cut) ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕೋರಿದೆ.
ಹಾಗೆಯೇ ಸುಂಟಿಕೊಪ್ಪ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ ಎಫ್1-ನಾಕೂರು, ಎಫ್4-ಮಾದಾಪುರ, ಎಫ್5-ಸುಂಟಿಕೊಪ್ಪ ಹಾಗೂ ಎಫ್6-ಹೊಸಕೋಟೆ ವಿದ್ಯುತ್ ಮಾರ್ಗದಲ್ಲಿ ವಿದ್ಯುತ್ ಅಭಿವೃದ್ದಿ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಜೂನ್, 13 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5.30 ಗಂಟೆಯವರೆಗೆ, ಸುಂಟಿಕೊಪ್ಪ ಟೌನ್, ಪನ್ಯಾ, ಹರದೂರು, ಬೆಟ್ಟಗೇರಿ, ಸಿಸಿಎಲ್ ನಾಕೂರು ಶಿರಂಗಾಲ, ಹೇರೂರು, ಅಂದಗೋವೆ, ಕೊಡಗರಹಳ್ಳಿ, ಹೊಸಕೋಟೆ, ಕಂಬಿಬಾಣೆ ಹಾಗೂ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.