ಅಹಮದಾಬಾದ್‌ ವಿಮಾನ ದುರಂತ – ಮಂಗಳೂರು ಮೂಲದ ಸಹಾಯಕ ಪೈಲಟ್‌ ದುರ್ಮರಣ..!

Share this post :

ಗುಜರಾತ್ : ಅಹಮದಾಬಾದ್‌ನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಪ್ರಯಾಣಿಕರು ಹಾಗೂ ಸಿಬ್ಬಂದಿ ಸೇರಿ 200ಕ್ಕೂ ಅಧಿಕ ಮಂದಿ ದುರಂತ ಅಂತ್ಯ ಕಂಡಿದ್ದಾರೆ.  ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳಲು ಹೊರಟಿದ್ದ ವಿಮಾನ ಟೇಕಾಫ್‌ ಆದ ಕೆಲವೇ ನಿಮಿಷಗಳಲ್ಲಿ ನೆಲಕ್ಕೆ ಅಪ್ಪಳಿಸಿದೆ.
 ಈ ದುರಂತದಲ್ಲಿ ಕರ್ನಾಟಕ ಮೂಲದ ಸಹಾಯಕ ಪೈಲಟ್‌ ಕೂಡಾ ಕೊನೆಯುಸಿರೆಳೆದಿದ್ದಾರೆಂದು ತಿಳಿದುಬಂದಿದೆ. ಮಂಗಳೂರು ಮೂಲದ ಕ್ಲೈವ್ ಕುಂದರ್ ದುರಂತ ಅಂತ್ಯ ಕಂಡವರಾಗಿದ್ದಾರೆ.  ಈ ಘಟನೆಯಲ್ಲಿ ವಿದೇಶಿ ನಾಗರೀಕರು ಸೇರಿದಂತೆ ಬಹುತೇಕ ಎಲ್ಲರೂ ದುರಂತ ಅಂತ್ಯ ಕಂಡಿದ್ದಾರೆಂದು ಗುಜರಾತ್‌ನ ಮಾಧ್ಯಮಗಳು ವರದಿ ಮಾಡುತ್ತಿವೆ.