ಶನಿವಾರಸಂತೆ: ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸಾವು

shanivarasante

Share this post :

ಶನಿವಾರಸಂತೆ (Shanivarasante) ಹೋಬಳಿಯ ಚೌಡೇನಹಳ್ಳಿ ರಸ್ತೆ ಮಧ್ಯೆ ಕಾರು ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿದ್ದು, ಈ ಅಪಘಾತದಲ್ಲಿ ಓರ್ವ ಯುವಕ ಸಾವನ್ನಪ್ಪಿದೆ. ಶನಿವಾರಸಂತೆ ಬಳಿಯ ನಿತ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೌಡೇನ ಹಳ್ಳಿ ಗ್ರಾಮದ ಚಂದನ್ ( 25) ಮೃತ ದುರ್ದೈವಿ.

ಮೃತ ಚಂದನ್ ಹಾಗೂ ಆತನ ಸ್ನೇಹಿತ ಶನಿವಾರಸಂತೆಯಿಂದ ಚೌಡೇನಗಳ್ಳಿಗೆ ಬೈಕ್ ನಲ್ಲಿ ಸೋಮವಾರ ಸಂಜೆ ಹಿಂದಿರುಗುತ್ತಿದ್ದಾಗ ಅಪರಿಚಿತ ಕಾರು ಬಂದು ಡಿಕ್ಕಿ ಹೊಡೆದ್ದರಿಂದ ಈ ಅಪಘಾತ ಸಂಭವಿಸಿದೆ. ಎಂದು ವರದಿಯಾಗಿದೆ. ಈ ಪ್ರಕರಣದ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.