ಮಡಿಕೇರಿ ಜೂನಿಯರ್ ಕಾಲೇಜು ಆವರಣದಲ್ಲಿ ಸಡಗರದಿಂದ ಜರುಗಿದ ಮಕ್ಕಳ ಸಂತೆ

ಮಡಿಕೇರಿ : ಎತ್ತ ನೋಡಿದರೂ ವಿವಿಧ ಬಗೆಯ ಸೊಪ್ಪು, ತರಕಾರಿ, ಆಹಾರ ಧಾನ್ಯಗಳು, ಹಣ್ಣು ಹಂಪಲುಗಳು, ಪಾನಿಪೂರಿ, ಮಸಾಲೆ ಪುರಿ, ಚುರುಮುರಿ ಹೀಗೆ ಜೊತೆಗೆ ಚಿಕನ್ ಬಿರಿಯಾನಿಯು ಸಹ ಇದ್ದುದ್ದು ಬುಧವಾರ ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ನಡೆದ ಮಕ್ಕಳ ಸಂತೆಯಲ್ಲಿ ಕಂಡು ಬಂದ ದೃಶ್ಯಗಳು. ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ, ಸರ್ಕಾರಿ ಪಿ.ಎಂ.ಶ್ರೀ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಬುಧವಾರ ನಡೆದ ಮಕ್ಕಳ ಸಂತೆಯಲ್ಲಿ ಕೇಳಿ ಬಂದವು. 70 ಕ್ಕೂ ಹೆಚ್ಚು […]
ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ – ಜಿಲ್ಲಾಧಿಕಾರಿ ಹೇಳಿದ್ದೇನು..?

ಮಡಿಕೇರಿ : ಇದೇ ತಿಂಗಳ 28 ರಿಂದ ಮಾರ್ಚ್ 17 ರವರೆಗೆ ಮಡಿಕೇರಿ, ನಾಪೋಕ್ಲು, ಪೊನ್ನಂಪೇಟೆ, ಸೋಮವಾರಪೇಟೆ, ವಿರಾಜಪೇಟೆ, ಸುಂಟಿಕೊಪ್ಪ, ಕುಶಾಲನಗರ, ಕೂಡಿಗೆ, ನೆಲ್ಲಿಹುದಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಚೇರಂಬಾಣೆ ಅರುಣ ಪದವಿ ಪೂರ್ವ ಕಾಲೇಜು, ಮೂರ್ನಾಡು ಪದವಿ ಪೂರ್ವ ಕಾಲೇಜು, ಶನಿವಾರಸಂತೆ ಪದವಿ ಪೂರ್ವ ಕಾಲೇಜು, ಕೊಡ್ಲಿಪೇಟೆ ಪದವಿ ಪೂರ್ವ ಕಾಲೇಜು, ಕುಶಾಲನಗರ ಕನ್ನಡ ಭಾರತಿ ಪದವಿ ಪೂರ್ವ ಕಾಲೇಜು, ವಿರಾಜಪೇಟೆ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜು, ಗೋಣಿಕೊಪ್ಪ ಕಾವೇರಿ ಪದವಿ ಪೂರ್ವ […]
ಕಡಗದಾಳುವಿನಲ್ಲಿ ಬೃಹತ್ ಹಿಂದು ಸಂಗಮ ಮಾರ್ಚ್ 01ಕ್ಕೆ

ಮಡಿಕೇರಿ : ಕಡಗದಾಳು ಮಂಡಲ ವತಿಯಿಂದ ಬೃಹತ್ ಹಿಂದು ಸಂಗಮ ಕಾರ್ಯಕ್ರಮ ಮಾರ್ಚ್ 01ರಂದು ಕಡಗದಾಳುವಿನಲ್ಲಿ ನಡೆಯಲಿದೆ. ಅಂದು ಬೆಳಗ್ಗೆ 10-30 ಗಂಟೆಗೆ ಕಡಗದಾಳು ಶಾಲೆ ಆವರಣ ಬಳಿಯಿಂದ ವೈಭವೋಪೇತ ಶೋಭಾಯಾತ್ರೆ ಆರಂಭವಾಗಲಿದೆ. ಕತ್ತಲೆಕಾಡು, ಕ್ಲೋಸ್‌ಬರ್ನ್, ಕಡಗದಾಳು, ನೀರುಕೊಲ್ಲಿ, ಇಬ್ನಿವಳವಾಡಿ, ಬೋಯಿಕೇರಿ ವ್ಯಾಪ್ತಿಯ ಹಿಂದುಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಗ್ರಾಮದ ಮುಖ್ಯ ಬೀದಿಯಲ್ಲಿ ವಿವಿಧ ಕಲಾ ತಂಡಗಳು, ಹಿಂದು ಧರ್ಮ, ಸಂಸ್ಕೃತಿಯನ್ನು ಬಿಂಬಿಸುವ ಕಲಾ ಪ್ರದರ್ಶನದೊಂದಿಗೆ ಮೆರವಣಿಗೆ ಸಾಗಲಿದೆ. ಬಳಿಕ ಶಾಲಾ ಮೈದಾನದಲ್ಲಿ ಹಿಂದು ಸಂಗಮ ಆಯೋಜನಾ ಸಮಿತಿ […]
ಕೇರಳ ರಾಜ್ಯದ ಹೆಸರು ಬದಲಾವಣೆಗೆ ಕೇಂದ್ರ ಸಂಪುಟದ ಅನುಮೋದನೆ: ಹೊಸ ಹೆಸರೇನು?

ಭಾರತದ ಸುಂದರ ರಾಜ್ಯ, ದೇವರ ಸ್ವಂತ ನಾಡು ಎಂದೇ ಖ್ಯಾತಿಯಾಗಿರುವ ಕೇರಳದ ಹೆಸರು ಬದಲಾವಣೆಗೆ ಹಸಿರು ನಿಶಾನೆ ತೋರಿತಿದೆ. ಕೇರಳ ಸರ್ಕಾರದ ದೀರ್ಘಕಾಲದ ಬೇಡಿಕೆಯಂತೆ ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಬದಲಾಯಿಸಲು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಮಂಗಳವಾರ (ಫೆಬ್ರವರಿ 24) ಅನುಮೋದನೆ ನೀಡಿದೆ. ಮಲಯಾಳಂ ಭಾಷೆಯಲ್ಲಿ ರಾಜ್ಯವನ್ನು ‘ಕೇರಳಂ’ ಎಂದೇ ಕರೆಯಲಾಗುತ್ತಿದ್ದು, ಇದೇ ಹೆಸರನ್ನು ಸಂವಿಧಾನದ ಎಂಟನೇ ಅನುಸೂಚಿಯ ಎಲ್ಲಾ ಭಾಷೆಗಳಲ್ಲಿ ಅಳವಡಿಸಲು 2023 ಮತ್ತು 2024ರಲ್ಲಿ ಕೇರಳ ವಿಧಾನಸಭೆಯು ಒಮ್ಮತದ ನಿರ್ಣಯ […]
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವಕ್ಕೆ ಅರ್ಜಿ ಆಹ್ವಾನ

ಮಡಿಕೇರಿ : ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ೨೦೨೬-೨೭ ನೇ ಸಾಲಿನ ಸದಸ್ಯತ್ವಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಪತ್ರಿಕಾಭವನದಿಂದ ಅರ್ಜಿಗಳನ್ನು ಪಡೆದುಕೊಂಡು ಮಾರ್ಚ್ ೩ ರೊಳಗೆ ತಮ್ಮ ಇತ್ತೀಚೆಗಿನ ಒಂದು ಭಾವಚಿತ್ರದೊಂದಿಗೆ ಸಲ್ಲಿಸಬೇಕಾಗಿದೆ. ನವೀಕರಣಕ್ಕೆ ರೂ ೬೦೦ ಹಾಗೂ ನೂತನ ಸದಸ್ಯರಿಗೆ ರೂ ೧೬೦೦ ಎಂದು ನಿಗದಿಪಡಿಸಲಾಗಿರುತ್ತದೆ. ಮಾರ್ಚ್ ೩ ರ ನಂತರ ಬರುವ ಯಾವುದೇ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಸದಸ್ಯತ್ವಕ್ಕೆ ಮಾನದಂಡಗಳು ೧. ರಾಜಕೀಯದಲ್ಲಿರುವವರಿಗೆ ಹಾಗೂ ಧಾರ್ಮಿಕ ಸಂಘಟನೆಗಳಲ್ಲಿರುವವರಿಗೆ ಪತ್ರಕರ್ತರ ಸಂಘದ ಸದಸ್ಯತ್ವ ನೀಡಲಾಗುವುದಿಲ್ಲ. ೨.ಸದಸ್ಯತ್ವಕ್ಕೆ ಅರ್ಜಿ […]
ಕುಟ್ಟ ಪೊಲೀಸ್ ಠಾಣಾ ಸಿಬ್ಬಂದಿ ಎ.ಟಿ.ಮಂಜುನಾಥ್ ಅವರ ಚೊಚ್ಚಲ ಕೃತಿ ಲೋಕಾರ್ಪಣೆ

ಕುಟ್ಟ ಪೊಲೀಸ್ ಠಾಣೆ ಸಿಬ್ಬಂದಿ ಎ.ಟಿ.ಮಂಜುನಾಥ್ ರಚಿತ ಚೊಚ್ಚಲ ಕೃತಿ “ಕಾಣದ ಕಾಡಲು” ಲೋಕಾರ್ಪಣೆ ಗೊಂಡಿದೆ. ಕೊಡಗು ಜಿಲ್ಲೆ, ಪೊನ್ನಂಪೇಟೆ ತಾಲ್ಲೂಕು ಹಾಗೂ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ಗೋಣಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಆವರಣದಲ್ಲಿ ನಡೆದ ದಿ.ಗಂಗಾಧರ್ ಶೆಟ್, ಸುಲೋಚನಾ ದತ್ತಿ ಮತ್ತು ದಿ.ಎನ್ ಮಹಾಬಲೇಶ್ವರ ಭಟ್ ದತ್ತಿ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್ ಕಾಣದ ಕಾಡಲು ಕಥಾ ಸಂಕಲನವನ್ನು ಬಿಡುಗಡೆಗೊಳಿಸಿ ಶುಭಹಾರೈಸಿದರು. ಈ ಸಂದರ್ಭ ಮಾತನಾಡಿದ ಕೃತಿಯ ಲೇಖಕ ಮಂಜುನಾಥ್, ಕೆಲಸದ […]
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ – ಗಾಯನ ಸ್ಪರ್ಧೆಯ ಪಲಿತಾಂಶ ಪ್ರಕಟ

ಮಡಿಕೇರಿ : ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾ ಘಟಕದ ವತಿಯಿಂದ ಜಿಲ್ಲೆಯ ಎಲ್ಲಾ ತಾಲೂಕು ವ್ಯಾಪ್ತಿಯಲ್ಲಿ ನಡೆದ ಗೀತಗಾಯನ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ. ವೀರಾಜಪೇಟೆ ತಾಲೂಕಿನಲ್ಲಿ ನಡೆದ ಪ್ರಾಥಮಿಕ ಶಾಲಾ ವಿಭಾಗದ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಟನಿಷ ಕೆ.ಕೆ. 7ನೇ ತರಗತಿ, ಎಸ್ ಎಂ ಎಸ್ ಅರಮೇರಿ ಪ್ರಥಮ, ಆಯಿಷಾ ನಜೀರ್ ಟಿ.ಎ. 1ನೇ ತರಗತಿ ವಿನಾಯಕ ಶಾಲೆ ದ್ವಿತೀಯ, ತ್ರಿಶಾಲ್ 6ನೇ ತರಗತಿ, ವಿನಾಯಕ ಶಾಲೆ ತೃತೀಯ ಸ್ಥಾನ. ಪೊನ್ನಂಪೇಟೆ ತಾಲೂಕು […]
ರಾಜ್ಯ ಮಟ್ಟದ 5ಎ ಸೈಡ್ ರಿಂಕ್ ಹಾಕಿ ಪಂದ್ಯಾಟ: ಕಾವೇರಿ ಕಾಲೇಜು ಗೋಣಿಕೊಪ್ಪಲು ಚಾಂಪಿಯನ್

ವಿರಾಜಪೇಟೆ ಕಾವೇರಿ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದಿಂದ ಆಯೋಜಿಸಲಾಗಿದ್ದ ಎರಡು ದಿನದ ರಾಜ್ಯ ಮಟ್ಟದ 5ಎ ಸೈಡ್ ರಿಂಗ್ ಹಾಕಿ ಪಂದ್ಯಾಟ ಸಮಾರೋಪ ಸಮಾರಂಭಕ್ಕೆ ಆಗಮಿಸಿ ಕ್ರೀಡಾಕೂಟವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ ಎಸ್ ಪೊನ್ನಣ್ಣ ಹಿಂದಿನ ಕಾಲದಿಂದ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕೊಡಗು ಜಿಲ್ಲೆಗೆ ವಿಶೇಷವಾದ ಸ್ಥಾನವಿದೆ. ಅದರಲ್ಲಿಯು ಸೇನೆ ಹಾಗೂ ಹಾಕಿ ಪಂದ್ಯಾಟಕ್ಕೆ ಕೊಡಗು ಜಿಲ್ಲೆಯ ಕೊಡುಗೆ ಅಪಾರ. ನಮ್ಮ ಪೂರ್ವಜರು ಎಲ್ಲಾ ಕ್ಷೇತ್ರಗಳನ್ನು […]
ಮೇಕೇರಿಯಲ್ಲಿ ನಿವೃತ್ತ ಕಾರ್ಯಕರ್ತೆಗೆ ಬೀಳ್ಕೊಡುಗೆ – ಸೀಮಂತ ಕಾರ್ಯಕ್ರಮ

ಮಡಿಕೇರಿ : 36 ವರ್ಷ ಕಾಲ ಬಿಳಿಗೇರಿ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ದೇವಕಿ ಅವರಿಗೆ ಬೀಳ್ಕೊಡುಗೆ ಸಮಾರಂಭ ಮೇಕೇರಿ ಅಂಗನವಾಡಿ ಕೇಂದ್ರದಲ್ಲಿ ನೆರವೇರಿತು. ಪೋಷಣ್ ಅಭಿಯಾನ ಯೋಜನೆ ಅಡಿ ಸಮುದಾಯ ಆಧಾರಿತ ಚಟುವಟಿಕೆಯಾದ ಸೀಮಂತ ಕಾರ್ಯಕ್ರಮವನ್ನು ಶ್ರೀಮತಿ ಭವ್ಯರವರಿಗೆ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರಸನ್ನ ಕುಮಾರ್ ಪಾಲ್ಗೊಂಡು ಶುಭ ಹಾರೈಸಿದರು. ಪೋಶನ್ ಟ್ರ್ಯಾಕರ್, ಭಾಗ್ಯಲಕ್ಷ್ಮಿ, ಮಾತೃ ವಂದನ, ಭೇಟಿ ಬಚಾವ್ ಭೇಟಿ ಪಡಾವೊ ಬಗ್ಗೆ […]
ನಾಣ್ಯ, ನೋಟುಗಳ ಸಂಗ್ರಹ ಹವ್ಯಾಸ ಬೆಳೆಸಿಕೊಳ್ಳಿ – ಡಿವೈಎಸ್ಪಿ ಎಸ್. ಮಹೇಶ್ ಕುಮಾರ್ ಕರೆ

ವೀರಾಜಪೇಟೆ : ನಾಣ್ಯ ನೋಟುಗಳ ಸಂಗ್ರಹದ ಹವ್ಯಾಸವನ್ನು ಇಂದಿನ ಪೀಳಿಗೆ ಬೆಳೆಸಿಕೊಳ್ಳಬೇಕು ಎಂದು ವಿರಾಜಪೇಟೆಯ ಡಿವೈಎಸ್‍ಪಿ ಎಸ್. ಮಹೇಶ್ ಕುಮಾರ್ ಹೇಳಿದರು. ಪಂಜರಪೇಟೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ಭಾರತದ 2600 ವರ್ಷ ಪುರಾತನ, ನಂತರದ ಇತಿಹಾಸ ಪುರಾತನ ಹಾಗೂ ವಿಶ್ವದ 196 ದೇಶಗಳ ವಿವಿಧ ಕಾಲಘಟ್ಟದ ನಾಣ್ಯ ನೋಟುಗಳ ಬೃಹತ್ ಪ್ರದರ್ಶನ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಗಾಟಿಸಿ ಮಾತನಾಡಿದ ಅವರು, ನಾಣ್ಯಗಳು ಮೌನವಾಗಿಯೇ ಗತಕಾಲದ ಇತಿಹಾಸವನ್ನು ತಿಳಿಸುತ್ತವೆ. ಈ ನಾಣ್ಯ ಪ್ರದರ್ಶನದಲ್ಲಿ […]