ವೀರಾಜಪೇಟೆಯಲ್ಲಿ ಹಿಂದು ಸಂಗಮ ಶೋಭಾಯಾತ್ರೆ ಹಾಗೂ ಸಭಾ ಕಾರ್ಯಕ್ರಮ ಫೆ.25ಕ್ಕೆ

ವರದಿ : ರಜಿತ ಕಾರ್ಯಪ್ಪ ವೀರಾಜಪೇಟೆ : ಹಿಂದೂ ಸಮಾಜದ ಸಂಘಟನೆ, ಸ್ವಾವಲಂಭಿ, ಸಂಸ್ಕಾರಯುಕ್ತ ಮತ್ತು ಸಾಮರಸ್ಯಯುಕ್ತ ಸಮಾಜವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಹಿಂದೂ ಸಮಾಜವೇ ಒಟ್ಟುಗೂಡಿ ಹಿಂದೂ ಸಂಗಮ ಕಾರ್ಯಕ್ರಮವನ್ನು ವಿರಾಜಪೇಟೆಯಲ್ಲಿ ಆಯೋಜಿಸುತ್ತಿದೆ ಎಂದು ಹಿಂದೂ ಸಂಗಮ ಆಯೋಜನಾ ಸಮಿತಿ ವಿರಾಜಪೇಟೆ ತಾಲೂಕು ಅಧ್ಯಕ್ಷ ಕುಪ್ಪಂಡ ರಾಜೀವ್ ಕಾರ್ಯಪ್ಪ ಹೇಳಿದರು. ಹಿಂದೂ ಸಂಗಮ ಶೋಭಾಯಾತ್ರೆ ಮತ್ತು ಸಭಾ ಕಾರ್ಯಕ್ರಮ ನಡೆಸುವ ಬಗ್ಗೆ ಕರೆಯಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿ, ವಿರಾಜಪೇಟೆ ನಗರದ ಹಿಂದೂ ಸಂಗಮ ಆಯೋಜನಾ ಸಮಿತಿ […]

Power Cut: ನಾಳೆ ಕೊಡಗಿನಲ್ಲಿ ಎಲ್ಲೆಲ್ಲಿ ಕರೆಂಟ್ ಇರಲ್ಲ?

electricity

ಫೆಬ್ರವರಿ, 22 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಶನಿವಾರಸಂತೆ ಶಾಖೆಯ ಶನಿವಾರಸಂತೆ ಪಟ್ಟಣ, ಅಪ್ಪ್ಡಶೆಟ್ಟಳ್ಳಿ, ಮಾದ್ರೆ, ಚಿಕ್ಕಕೊಳತ್ತೂರು, ದುಂಡಳ್ಳಿ, ಬೆಂಬಳೂರು, ಬಿಳಹ, ಹಂಡ್ಲಿ, ಕಿತ್ತೂರು, ಸಂಪಿಗೆದಳ, ಮಾದ್ರದಳ್ಳಿ, ಮಣಗಲಿ, ಗೌಡಳ್ಳಿ, ಬೀಟಿಕಟ್ಟೆ, ಶುಂಠಿ, ಶಾಂತ್ವೇರಿ, ಬಸವನಕೊಪ್ಪ, ಮುಳ್ಳೂರು, ಗೋಪಾಲಪುರ, ಜಾಗೇನಹಳ್ಳಿ, ನಿಡ್ತ, ಚೌಡೇನಹಳ್ಳಿ, ದೊಡ್ಡಳ್ಳಿ, ಹರೆಹೊಸೂರು, ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಬೆಸೂರು ಪಂಚಾಯಿತಿ, ನೀರುಗುಂದ, ನಿಲುವಾಗಿಲು, ದೊಡ್ಡಭಂಡಾರ, ಬ್ಯಾಡಗೊಟ್ಟ, ಕೊಡ್ಲಿಪೇಟೆ ಟೌನ್, ಅವರದಾಳು, ಬೆಂಬಳೂರು, ದೊಡ್ಡಕೊಡ್ಲಿ, ಕ್ಯಾತೆ, ದೊಡ್ಡಕುಂದಾ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ […]

ವೀರಾಜಪೇಟೆಯಲ್ಲಿ ಸಂಭ್ರಮದಿಂದ ಜರುಗಿದ ಗ್ರಾಮೀಣ ಕ್ರೀಡಾಕೂಟ

ವೀರಾಜಪೇಟೆ : ಕ್ರೀಡೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುವುದರಿಂದ ದೈಹಿಕ, ಮಾನಸಿಕವಾಗಿ ಸದೃಢರಾಗಲು ಸಾಧ್ಯ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕರು ಮುಖ್ಯ ಮಂತ್ರಿಗಳ ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಹೇಳಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು ಜಿಲ್ಲಾ ಜಾನಪದ ಪರಿಷತ್ ವಿರಾಜಪೇಟೆ ಘಟಕ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿರಾಜಪೇಟೆ ತಾಲೂಕು, ಪೊನ್ನಂಪೇಟೆ ಇವರ ಸಹಯೋಗದಲ್ಲಿ ನಗರದ ತಾಲೂಕು ಮೈದಾನದಲ್ಲಿ ಆಯೋಜಿಸಲಾಗಿದ್ದ ಗ್ರಾಮೀಣ ಕ್ರೀಡಾಕೂಟವನ್ನು ಕಂಜರ ಬಾರಿಸುವ ಹಾಗೂ ದೀಪ ಬೆಳಗುವ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ […]

ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ರಾಜ್ಯಮಟ್ಟದ 5 ಎ ಸೈಡ್ ರಿಂಕ್‌ಹಾಕಿ ಪಂದ್ಯಾಟ ಉದ್ಘಾಟನೆ

hockey tournament

ಕ್ರೀಡೆಯು ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯವನ್ನು ಹೆಚ್ಚಿಸಲು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಎಂದು ಹಿರಿಯ ಹಾಕಿ ಆಟಗಾರ ಹಾಗೂ ಹಾಕಿ ವೀಕ್ಷಕ ವಿವರಣೆಗಾರರಾದ ಮಾಳೇಟಿರ ಶ್ರೀನಿವಾಸ್ ಅಭಿಪ್ರಾಯ ವ್ಯಕ್ತಪಡಿಸಿದರು . ವಿರಾಜಪೇಟೆ ಕಾವೇರಿ ಕಾಲೇಜು ದೈಹಿಕ ಶಿಕ್ಷಣ ವಿಭಾಗದಿಂದ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಆಯೋಜಿಸಲಾಗಿದ್ದ 5 ಎ ಸೈಡ್ ರಿಂಗ್ ಹಾಕಿ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೊಡಗು ಜಿಲ್ಲೆಯು ಹಾಕಿ ತವರೆಂದು ಪ್ರಸಿದ್ಧಿಯನ್ನು ಪಡೆದಿದ್ದು ಹಾಕಿ ಕ್ರೀಡೆಗೆ ಇಲ್ಲಿ ವಿಶೇಷವಾದ ಸ್ಥಾನಮಾನವಿದೆ . ಕ್ರೀಡೆಯೂ ನಮ್ಮಲ್ಲಿ […]

ಕೊಡಗು ಗೌಡ ಸಮುದಾಯಕ್ಕೆ ಭೂಮಿ ಮಂಜೂರು: ಮುಖ್ಯಮಂತ್ರಿಗೆ ಶಾಸಕ ಪೊನ್ನಣ್ಣ ನೇತೃತ್ವದಲ್ಲಿ ಸನ್ಮಾನ

Kodagu Gowda

ಕೊಡಗು ಅರೆಭಾಷೆ ಗೌಡ ಸಮುದಾಯದ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಕ್ರೀಡಾ ಚಟುವಟಿಕೆಗಳ ಅಭಿವೃದ್ಧಿಗಾಗಿ ಮಡಿಕೇರಿ ತಾಲೂಕಿನ ಮದೆ ಗ್ರಾಮದ ಕಾಟಕೇರಿಯಲ್ಲಿ 6 ಎಕರೆ ಜಾಗವನ್ನು ಮಂಜೂರು ಮಾಡಿದ ಹಾಗೂ ಜಿಲ್ಲೆಯ ಸುದೀರ್ಘ ಕಾಲದ ‘ಜಮ್ಮಬಾಣೆ’ ಸಮಸ್ಯೆಯನ್ನು ನಿವಾರಿಸಿದ ರಾಜ್ಯ ಸರ್ಕಾರಕ್ಕೆ ಗೌರವ ಸಮರ್ಪಿಸಲಾಯಿತು. ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರ ನೇತೃತ್ವದಲ್ಲಿ, ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರನ್ನು ಕೊಡಗು ಗೌಡ ಸಮಾಜದ ವತಿಯಿಂದ […]

ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ರಾಜ್ಯಮಟ್ಟದ 5 ಎ ಸೈಡ್ ರಿಂಕ್‌ಹಾಕಿ ಪಂದ್ಯಾಟ

Cauvery College Virajpet

ರಾಜಪೇಟೆ ಕಾವೇರಿ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ವತಿಯಿಂದ ಕೊಡಗಿನ ಇತಿಹಾಸದಲ್ಲಿ ಮೊದಲ ಬಾರಿಗೆ ರಿಂಕ್ 5 ಎ ಸೈಡ್ ರಾಜ್ಯಮಟ್ಟದ ಅಂತರ ಕಾಲೇಜು ಹಾಕಿ ಪಂದ್ಯಾಟವನ್ನು ಆಯೋಜಿಸಲಾಗಿದೆ ಎಂದು ಕಾವೇರಿ ಕಾಲೇಜಿನ ಪ್ರಾಂಶುಪಾಲರಾದ ಬೆನೆಡಿಕ್ಟ್ ಆರ್ ಸಲ್ಡನ್ ಮಾಹಿತಿ ನೀಡಿದರು . ಕಾವೇರಿ ಕಾಲೇಜಿನ ಕೌಸ್ತುಬ ಸಭಾಭವನದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಪದವಿ ಮಟ್ಟದ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದಲ್ಲಿಯೆ ಮೊದಲ ಬಾರಿ ಅಂತರ ಕಾಲೇಜು 5 ಎ ಸೈಡ್ ರಿಂಕ್ ಹಾಕಿ ಪಂದ್ಯಾಟವನ್ನು […]

ಎಡಪಾಲ ಕೌಟುಂಬಿಕ ಕ್ರಿಕೆಟ್ ಕ್ರೀಡಾಕೂಟ-2026: ಕಿಕ್ಕರೆ ಚಾಂಪಿಯನ್

Edapala Family Cricket Tournament-2026

ನರಿಯಂದಡ ಗ್ರಾಮದ ಎಡಪಾಲದ ಕುಪ್ಪೋಡಂಡ ಕುಟುಂಬಸ್ಥರ ಆತಿಥ್ಯದಲ್ಲಿ ನಡೆದ 23ನೇ ವರ್ಷದ ಎಡಪಾಲ ಕೌಟುಂಬಿಕ ಕ್ರೀಡಾಕೂಟ ಇತ್ತೀಚಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಕ್ರೀಡಾಕೂಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕಿಕ್ಕರೆ ತಂಡ ಇದೇ ಮೊದಲ ಬಾರಿಗೆ ಚಾಂಪಿಯನ್ ಪಟ್ಟವನ್ನು ತನ್ನ ಮುಡಿಗೇರಿಸಿಕೊಂಡು ಸಂಭ್ರಮಿಸಿತು. ಫೈನಲ್ ನಲ್ಲಿ ತೀವ್ರ ಪೈಪೋಟಿ ನೀಡಿದ, ಕ್ರೀಡಾಕೂಟದ ಅತಿಥ್ಯ ವಹಿಸಿದ್ದ ಕುಪ್ಪೋಡಂಡ ತಂಡ ಕೊನೆಗೆ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು. ಕ್ರೀಡಾಕೂಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಎಡಪಾಲ ಗ್ರಾಮದ ಬದ್ರಿಯಾ ಫ್ರೆಂಡ್ಸ್ ತಂಡ ವಿನ್ನರ್ಸ್ ಪ್ರಶಸ್ತಿ ಪಡೆದರೆ, ಕಿಕ್ಕರೆ ತಂಡ […]

ಪುಲ್ವಾಮಾ ದಾಳಿಯ ಕಹಿ ನೆನಪು – ಮಡಿಕೇರಿಯಲ್ಲಿ ವಿಭಿನ್ನವಾಗಿ ಹುತಾತ್ಮ ಯೋಧರ ಸ್ಮರಣೆ

ಮಡಿಕೇರಿ : ಪುಲ್ವಾಮಾ ದಾಳಿಯ ಕಹಿ ನೆನಪನ್ನು ಮಡಿಕೇರಿಯಲ್ಲಿ ವಿಭಿನ್ನವಾಗಿ ಸ್ಮರಿಸಿ, ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲಾಯಿತು. ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರೀಶಾ ನಗರದ ಜನರಲ್‌ ತಿಮ್ಮಯ್ಯ ವೃತ್ತದ ಮೈಸೂರು ರಸ್ತೆಯ ಪ್ರಯಾಣಿಕರ ತಂಗುದಾಣಕ್ಕೆ ಬಣ್ಣ ಬಳಿದು ಚಂದಗಾಣಿಸಿದ್ದರು. ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರ ಭಾವಚಿತ್ರವನ್ನು ತಂಗುದಾಣದ ಆವರಣದಲ್ಲಿಟ್ಟು ದೀಪ ಬೆಳಗಿ, ಪುಷ್ಪಾರ್ಚನೆ ಮಾಡಿ ಪ್ರಮುಖರು ಹಾಗೂ ಸಾರ್ವಜನಿಕರು ನಮಿಸಿದರು. ಈ ಸಂದರ್ಭ ನಿವೃತ್ತ ಸೇನಾಧಿಕಾರಿ ಗೌಡಂಡ ತಿಮ್ಮಯ್ಯ, ನಿವೃತ್ತ ಯೋಧ ಲೋಕೇಶ್, ಸೈನಿಕ […]

ಶಿವರಾತ್ರಿ ಪ್ರಯುಕ್ತ ಮುತ್ತಪ್ಪ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಹೋಮ

ವೀರಾಜಪೇಟೆ : ವೀರಾಜಪೇಟೆಯ ಮುತ್ತಪ್ಪ ಮಲಯಾಳಿ ಸಮಾಜದ ವತಿಯಿಂದ ಮಹಾ ಶಿವರಾತ್ರಿಯ ಅಂಗವಾಗಿ ಮೀನುಪೇಟೆಯ ಚೈತನ್ಯ ಮಡಪ್ಪುರ ಶ್ರೀ ಮುತ್ತಪ್ಪ ದೇವಸ್ಥಾನದ ಆವರಣದಲ್ಲಿರುವ ಶ್ರೀ ಮುತ್ತಪ್ಪ ಕಲಾ ಮಂಟಪದಲ್ಲಿ ಮಹಾ ಮೃತ್ಯುಂಜಯ ಹೋಮ ಹಮ್ಮಿಕೊಳ್ಳಲಾಗಿದೆ. ಪೂಜೆಗೆ ಬರುವಾಗ ಎರಡು ಬಾಳೆ ಎಲೆ, ಹೂವು ಹಾಗೂ ದೀಪ ತರಬೇಕು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಮುತ್ತಪ್ಪ ಮಲಯಾಳಿ ಸಂಘದ ಅಧ್ಯಕ್ಷ ಸುಮೇಶ್ ಪಿ.ಜಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಪಯ್ಯವೂರು ಶಿವ ದೇವಾಲಯದಲ್ಲಿ ಊಟ್‌ ಮಹೋತ್ಸವ – ಬೊವ್ವೇರಿಯಂಡ, ಮುಂಡಿಯೋಳಂಡ ಕುಟುಂಬಸ್ಥರು ಭಾಗಿ

ವೀರಾಜಪೇಟೆ : ಕೊಡಗು ನಿವಾಸಿಗಳು ಮತ್ತು ಮಲಯಾಳಿಗಳು ಜಂಟಿಯಾಗಿ ಕೇರಳದ ಪಯ್ಯಾವೂರಿನ ಶಿವ ದೇವಾಲಯದಲ್ಲಿ ಆಚರಿಸುವ ಹದಿಮೂರು ದಿನಗಳ ಪಯ್ಯವೂರು ಶಿವ ದೇವಾಲಯದ ಊಟ್‍ಮಹೋತ್ಸವವು ಕೊಡಗಿನಿಂದ ಮುಂಡಿಯೋಳಂಡ ಹಾಗೂ ಬೋವ್ವೇರಿಯಂಡ ಕುಟುಂಬಸ್ಥರ ಎತ್ತು ಪೋರಾಟ್‍ನೊಂದಿಗೆ ತೆರಳಿ ಅಕ್ಕಿ ಅಳೆಯುವ ಶಾಸ್ತ್ರದೊಂದಿಗೆ ಪ್ರಾರಂಭವಾಯಿತು. ಪಟ್ಟಣದ ಪಳಸ್ಸಿ ಭಗವತಿ ದೇವಸ್ಥಾನದ ಆವರಣಕ್ಕೆ ಆಗಮಿಸಿದ ಕೊಡವರನ್ನು ಪಯ್ಯಾವೂರು ದೇವಸ್ವಂ ಕಾರ್ಯನಿರ್ವಾಹಕ ಅಧಿಕಾರಿ ಸಿ.ವಿ. ಅನೀಶ್, ವಿಶ್ವಸ್ಥ ಮಂಡಳಿ ಸದಸ್ಯ ಕೆ.ವಿ. ಉತ್ತಮರಾಜನ್, ಮತ್ತು ಆಚರಣೆ ಸಮಿತಿಯ ಪದಾಧಿಕಾರಿಗಳಾದ ಪಿ.ಸುಂದರನ್, ಫಲ್ಗುಣನ್ ಮೆಳೇದತ್, […]