ಮಡಿಕೇರಿ : ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ. ಪ್ರತಿಯೊಬ್ಬರ ಜೀವನದಲ್ಲೂ ಶಿಕ್ಷಕರು ಮಹತ್ತರವಾದ ಪಾತ್ರ ನಿರ್ವಹಿಸಿರುತ್ತಾರೆ. ಈ ಸಂದರ್ಭದಲ್ಲಿ ಅವರನ್ನು ಮತ್ತೊಮ್ಮೆ ನೆನಪು ಮಾಡಿಕೊಳ್ಳುವುದಕ್ಕೆ Coorg Buzz ಅವಕಾಶ ಕಲ್ಪಿಸುತ್ತಿದೆ.
ನಿಮ್ಮ ನೆಚ್ಚಿನ ಶಿಕ್ಷಕರ ಬಗ್ಗೆ ವಿಡಿಯೋ ಮಾಡಿ ನಮಗೆ ಕಳುಹಿಸಿ. ನಿಮ್ಮ ನೆಚ್ಚಿನ ಶಿಕ್ಷಕರು ಯಾರು, ಯಾಕಾಗಿ ಅವರಂದ್ರೆ ನಿಮಗೆ ಅಚ್ಚುಮೆಚ್ಚು ಎಂಬ ಬಗ್ಗೆ ವಿಡಿಯೋ ಮಾಡುವಾಗ ಮೊಬೈಲ್ ಅನ್ನು ಸರಿಯಾದ ರೀತಿಯಲ್ಲಿ ಸೆಟ್ ಮಾಡಿಕೊಳ್ಳಿ. ನಿಮಿಷದ ಒಳಗೆ ನಮಗೆ ವಿಡಿಯೋ ಮಾಡಿ ಕಳುಹಿಸಿ. ವಿಡಿಯೋ ಮಾಡುವಾಗ ಮೊಬೈಲ್ ಫ್ರೇಮ್ ಸರಿಯಾಗಿರುವಂತೆ ನೋಡಿಕೊಳ್ಳಿ. ಹೆಚ್ಚು ಶಬ್ಧದ ಅಡಚಣೆ ಇಲ್ಲದ ಜಾಗದಲ್ಲಿ ನಿಂತು ವಿಡಿಯೋ ಮಾಡಿ. ನಿಮ್ಮ ಹೆಸರು, ಊರು ಯಾವುದೆಂಬುದನ್ನು ಉಲ್ಲೇಖಿಸಿ.
ಸೆಪ್ಟೆಂಬರ್ 04ರ ಒಳಗೆ ಸಿಕ್ಕ ಉತ್ತಮ ಗುಣಮಟ್ಟದ ವಿಡಿಯೋಗಳನ್ನು ಪರಿಗಣಿಸಲಾಗುವುದು. ವಿಡಿಯೋವನ್ನು +91 8310707590 ಈ ನಂಬರ್‌ಗೆ ಕಳುಹಿಸಿ.



