ಹೆಗ್ಗಳ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವಾತಂತ್ರೋತ್ಸವ ಸಂಭ್ರಮ

ವೀರಾಜಪೇಟೆ : ಹೆಗ್ಗಳ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವಾತಂತ್ರೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಧ್ವಜಾರೋಹಣವನ್ನು ಶಾಲೆಯ ಮುಖ್ಯ ಶಿಕ್ಷಕಿ ಕಮಲಮ್ಮ ನೆರವೇರಿಸಿದರು. ಧ್ವಜವಂದನೆಯನ್ನು ಕಾಫಿ ಬೆಳೆಗಾರರಾದ ಕೋಡಿರ ಟಿ. ಗಣಪತಿ ನೆರವೇರಿಸಿದರು. ಶಾಲೆಯ ಸಹ ಶಿಕ್ಷಕಿ ಕಮರುನ್ನಿಸ, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರುಗಳು, ಶಾಲೆಯ ಸಿಬ್ಬಂದಿ, ಪೋಷಕರು, ಸಾರ್ವಜನಿಕರು ಪಾಲ್ಗೊಂಡಿದ್ದರು. ಸ್ವಾತಂತ್ರ್ಯೋತ್ಸವ ಅಂಗವಾಗಿ ಪುಟಾಣಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಸ್ವಾತಂತ್ರ್ಯೋತ್ಸವ ಅಂಗವಾಗಿ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕಂಡಂಗಾಲದಲ್ಲಿ ಸ್ವಚ್ಛತಾ ಕಾರ್ಯಕ್ರಮ

ವಿರಾಜಪೇಟೆ :  79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕಂಡಂಗಾಲದ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ಬೇರಳಿನಾಡು ವತಿಯಿಂದ ಶುಕ್ರವಾರ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಂಡಂಗಾಲದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದ ನೇತೃತ್ವವನ್ನು ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೂಕಚಂಡ ಪ್ರಸನ್ನ ಸುಬ್ಬಯ್ಯ ವಹಿಸಿದ್ದರು. ಇದಕ್ಕೂ ಮೊದಲು ಶಾಲಾ ಆವರಣದಲ್ಲಿ ಧ್ವಜಾರೋಹಣ ನೆರವೇರಿತು. ಮೂಕಚಂಡ ಪ್ರಸನ್ನ ಸುಬ್ಬಯ್ಯ ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಧ್ಯಾಹ್ನದವರೆಗೆ ಶಾಲಾ ಆವರಣವನ್ನು ಸಂಸ್ಥೆಯ […]

ಗೋಣಿಕೊಪ್ಪ ಕಾಂಗ್ರೆಸ್‌ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಗೋಣಿಕೊಪ್ಪ : ಗೋಣಿಕೊಪ್ಪ ಕಾಂಗ್ರೆಸ್ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರರ ಭವನದಲ್ಲಿ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಕುಲ್ಲಚಂಡ ಪ್ರಮೋದ್ ಗಣಪತಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯರು ಹಾಗೂ ಸ್ವಾತಂತ್ರ್ಯ ಹೋರಾಟಗಾರ ಟ್ರಸ್ಟ್ ಸಂಚಾಲಕ ಅಜಿತ್ ಅಯ್ಯಪ್ಪ ಧ್ವಜಾರೋಹಣ ನೆರವೇರಿಸಿದರು. ಸಮೀರ್ ಮುಖ್ಯ ಭಾಷಣ ಮಾಡಿದರು. ಗೋಣಿಕೊಪ್ಪ ಕಾಂಗ್ರೆಸ್ ಉಪಾಧ್ಯಕ್ಷ ನಾಯಂಡಿರ ಶಿವಾಜಿ, ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಂಜುಳಾ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಂಶಿಫ್, ಪಂಚಾಯಿತಿ ಸದಸ್ಯರಾದ ಚೆಪ್ಪುಡಿರ ಧ್ಯಾನ್ ದೇವಯ್ಯ , ಗೋಣಿಕೊಪ್ಪಲು ಗ್ರಾಮ ಪಂಚಾಯತಿ […]

ಎಂ. ಬಾಡಗ 01 ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವ

ಮೂರ್ನಾಡು : ಎಂ ಬಾಡಗ 1 ಅಂಗನಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಧ್ವಜದೊಂದಿಗೆ ಫೋಟೋ ಕ್ಲಿಕ್‌ ಮಾಡಿ ಅಪ್ಲೋಡ್‌ ಮಾಡಿದರು. ಕೇಂದ್ರದ ವಿದ್ಯಾರ್ಥಿಗಳಿಗೆ ತಿರಂಗ್ ಬ್ಯಾಡ್ಜ್ ವಿತರಿಸಲಾಯಿತು. ಮಕ್ಕಳು ಹಾಗೂ ಕೇಂದ್ರದ ಸಿಬ್ಬಂದಿ ದೇಶಭಕ್ತಿ ಗೀತೆ ಹಾಡಿದರು. ದಿನದ ಸಂಭ್ರಮದ ಪ್ರಯುಕ್ತ ಸಿಹಿ ವಿತರಿಸಲಾಯಿತು.

ಅಂಗಾಂಗ ದಾನದ ನಾಯಕತ್ವದತ್ತ ಕರ್ನಾಟಕದ ಪಯಣ – ತಪ್ಪು ಕಲ್ಪನೆ ಬಿಟ್ಟು ಅಂಗಾಂಗ ದಾನದಲ್ಲಿ ಭಾಗಿಯಾಗಿ…

  ಲೇಖನ : ಡಾ. ಸುನೀಲ್‌ ಕಾರಂತ್‌, ಬೆಂಗಳೂರು ಅಂಗಾಂಗ ದಾನದ ಪ್ರತಿಜ್ಞೆ ಮಾಡುವಲ್ಲಿ ಕರ್ನಾಟಕವು ಈಗ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಇದು ಹೆಮ್ಮೆಯ ಸಂಗತಿಯಾಗಿದ್ದು, ಜೀವ ಉಳಿಸುವ ಈ ಕಾರ್ಯದ ಬಗ್ಗೆ ಜಾಗೃತಿ ನಿಧಾನವಾಗಿ ಬೆಳೆಯುತ್ತಿದೆ ಎಂಬುದನ್ನು ತೋರಿಸುತ್ತದೆ. ಆದರೆ, ಸಾಗಬೇಕಾದ ದಾರಿ ಇನ್ನೂ ಬಲು ದೂರವಿದೆ. ಪ್ರತಿದಿನ ನಮ್ಮ ಆಸ್ಪತ್ರೆಯಲ್ಲಿ ಹೃದಯ, ಯಕೃತ್ತು, ಮೂತ್ರಪಿಂಡ, ಶ್ವಾಸಕೋಶ ಅಥವಾ ಕರುಳು ಕಸಿಗಾಗಿ ರೋಗಿಗಳು ಹತಾಶೆಯಿಂದ ಕಾಯುತ್ತಿರುವುದನ್ನು ನಾವು ನೋಡುತ್ತೇವೆ. ಅವರಲ್ಲಿ ಅನೇಕರಿಗೆ ಬಹಳ ಸಮಯ ತಗಲುತ್ತದೆ. […]

ಮಡಿಕೇರಿ ಜಿಲ್ಲಾಸ್ಪತ್ರೆಗೆ ಹೆಚ್ಚುವರಿ ಕಟ್ಟಡ – ಆಗಸ್ಟ್‌ 15ಕ್ಕೆ ಗಣ್ಯರಿಂದ ಶಂಕುಸ್ಥಾಪನೆ – ಡಾ. ಮಂತರ್‌ ಗೌಡ ಮಾಹಿತಿ

ಮಡಿಕೇರಿ : ನಗರದಲ್ಲಿರುವ ಬೋಧಕ ಆಸ್ಪತ್ರೆಗೆ(ಜಿಲ್ಲಾಸ್ಪತ್ರೆ) ಹೆಚ್ಚುವರಿ ಕಟ್ಟಡ ಕಾಮಗಾರಿಗೆ ನಾಳೆ ಶಿಲಾನ್ಯಾಸ ನಡೆಯಲಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್‌ ಗೌಡ ತಿಳಿಸಿದ್ದಾರೆ. 41 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯ ಉಳಿಕೆ ಮತ್ತು ಹೆಚ್ಚುವರಿ(ಎರಡನೇ ಹಂತ) ಕಾಮಗಾರಿ ಆರಂಭಿಸಲಾಗುತ್ತಿದೆ. ಈ ಸಂದರ್ಭದಲ್ಲಿ ವಿವಿಧ ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವೈದ್ಯಕೀಯ ಶಿಕ್ಷಣ ಸಚಿವ ಸನ್ಮಾನ್ಯ ಡಾ. ಶರಣಪ್ರಕಾಶ ಪಾಟೀಲ, ಕೊಡಗು ಜಿಲ್ಲಾ ಉಸ್ತುವಾರಿ […]

ಕಳೆದ 24 ಗಂಟೆ ಅವಧಿಯಲ್ಲಿ ಕೊಡಗು ಜಿಲ್ಲೆಯ ಮಳೆ ವಿವರ

Kodagu rain

ಮಡಿಕೇರಿ:- ಕೊಡಗು ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 17.47 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 39.92 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 2235.59 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 2383.19 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 32.28 ಮಿ.ಮೀ. ಕಳೆದ ವರ್ಷ ಇದೇ ದಿನ 76.40 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 3372.82 ಮಿ.ಮೀ, ಕಳೆದ ವರ್ಷ ಇದೇ […]

ಡಿಜೆ ಬಗ್ಗೆ ಜಾಗೃತಿ ಮೂಡಿಸಲು ಗಣೇಶೋತ್ಸವ ಸಮಿತಿ ಸದಸ್ಯರ ಸಭೆ ಕರೆ ಜಿಲ್ಲಾ ಪೊಲೀಸ್..!‌

ಮಡಿಕೇರಿ : ಗೌರಿ ಗಣೇಶೋತ್ಸವ ಆಚರಣೆ ಸಂದರ್ಭ ಡಿಜೆ ಬಳಕೆಗೆ ಸರ್ಕಾರ ನಿರ್ಬಂಧ ಹೇರಿದೆ. ಈ ಸಂಬಂಧ ಪರ ವಿರೋಧ ಹೇಳಿಕೆಗಳು ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಜಿಲ್ಲಾ ಪೊಲೀಸ್‌ ವತಿಯಿಂದ ಗಣೇಶೋತ್ಸವ ಸಮಿತಿ ಸದಸ್ಯರ ಸಭೆಯನ್ನು ಕರೆದಿದೆ. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಜಿಲ್ಲಾ ಎಸ್ಪಿ ಕೆ. ರಾಮರಾಜನ್‌, ಡಿಜೆ ಒತ್ತಡದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಗಣೇಶ ಸಮಿತಿ ಸದಸ್ಯರೊಂದಿಗೆ ಸಭೆ ಆಯೋಜಿಸುತ್ತಿದ್ದೇವೆ. ಡೆಸಿಬಲ್‌ ಮೀಟರ್‌ ಮೂಲಕ ಪ್ರಾತಕ್ಷಿಕೆ ನೀಡಲಾಗುವುದು. ಈ ಸಂದರ್ಭ ಇಎನ್‌ಟಿ ವೈದ್ಯರು […]

ರಾಷ್ಟ್ರೀಯ ಜೂನಿಯರ್‌ ಹಾಕಿ – ಕರ್ನಾಟಕ ತಂಡದಲ್ಲಿ ಕೊಡಗಿನ 11 ಮಂದಿ ಆಟಗಾರರು..!

ಮಡಿಕೇರಿ : ಹಾಕಿ ಇಂಡಿಯಾ ವತಿಯಿಂದ ಪಂಜಾಬ್‌ನಲ್ಲಿ ನಡೆಯಲಿರುವ ಹಾಕಿ ಇಂಡಿಯಾ ಜೂನಿಯರ್‌ ಮೆನ್ಸ್‌ ನ್ಯಾಷನಲ್‌ ಚಾಂಪಿಯನ್‌ಶಿಪ್‌ 2025 ಹಾಕಿ ಟೂರ್ನಿಗೆ ರಾಜ್ರ ತಂಡ ಪ್ರಕಟವಾಗಿದ್ದು, ಕೊಡಗಿನ 11 ಮಂದಿ ಆಟಗಾರರು ಅವಕಾಶ ಗಿಟ್ಟಿಸಿದ್ದಾರೆ. ನಾಯಕರಾಗಿ ಕೊಡಗಿನ ಬಿ.ಎಸ್.‌ ಧ್ರುವ, ಆಟಗಾರರಾಗಿ ಬಿದ್ದಾಟಂಡ ಬೋಪಣ್ಣ, ಕುಲ್ಲೇಟಿರ ವಚನ್‌ ಕಾಳಪ್ಪ, ವಿಶ್ವನಾಥ್, ಹರ್ಷಿತ್‌ ಕುಮಾರ್‌, ಮಂಡೇಡ ಅಚ್ಚಯ್ಯ, ಬಲ್ಯಂಡ ಸಂಪನ್‌ ಗಣಪತಿ, ಚೋಯಮಾಡಂಡ ಆಕರ್ಷ್‌ ಬಿದ್ದಪ್ಪ, ಕೆ.ಆರ್.‌ ಪೂಜಿತ್‌, ಕೋಳೆರ ಹೃತಿಕ್‌ ಅಯ್ಯಪ್ಪ, ಚೋಕಿರ ಕುಶಾಲ್‌ ಬೋಪಯ್ಯ ತಂಡದಲ್ಲಿದ್ದಾರೆ. […]

ಯುವ ಒಕ್ಕೂಟ ವತಿಯಿಂದ ಭಾಗಮಂಡಲದಲ್ಲಿ ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟ ಆ.23ಕ್ಕೆ

ಮಡಿಕೇರಿ : ಕೊಡಗು ಜಿಲ್ಲಾ ಯುವ ಒಕ್ಕೂಟ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಆ.23 ರಂದು ಭಾಗಮಂಡಲದಲ್ಲಿ 33ನೇ ರಾಜ್ಯ ಮಟ್ಟದ ಕೆಸರುಗದ್ದೆ ಕ್ರೀಡಾಕೂಟ ನಡೆಯಲಿದೆ. ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ತಾಲ್ಲೂಕು ಯುವ ಒಕ್ಕೂಟ ಮತ್ತು ಅಯ್ಯಂಗೇರಿ ಶ್ರೀ ಕೃಷ್ಣ ಯುವಕ ಸಂಘದ ಸಂಯುಕ್ತಾಶ್ರಯದಲ್ಲಿ ಭಾಗಮಂಡಲ ಗ್ರಾಮದ ಬಳ್ಳಡ್ಕ ಅಪ್ಪಾಜಿ ಹಾಗೂ ಅನು ಅವರ ಗದ್ದೆಯಲ್ಲಿ ಬೆಳಗ್ಗೆ […]