ಬರವಣಿಗೆ ನೀಡುವ ಅಮೂಲ್ಯ ಸಾರವನ್ನು AI, ಗೂಗಲ್ ನೀಡಲಾರದು – ಮಾಳೇಟಿರ ಸೀತಮ್ಮ ವಿವೇಕ್ ಅಭಿಪ್ರಾಯ

ಮಡಿಕೇರಿ : ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ ಇಂದು ಪುಸ್ತಕ ಓದುವವರ ಸಂಖ್ಯೆ ಬಹಳ ವಿರಳವಾಗಿದೆ. ಆದರೆ ಬರವಣಿಗೆ ನೀಡುವ ಅಮೂಲ್ಯ ಸಾರವನ್ನು ಎಐ ಅಥವಾ ಗೂಗಲ್ ತಂತ್ರಜ್ಞಾನ ನೀಡಲು ಸಾಧ್ಯವಿಲ್ಲವೆಂದು ಸಾಹಿತಿ ಹಾಗೂ ಸಮಾಜ ಸೇವಕಿ ಮಾಳೇಟಿರ ಸೀತಮ್ಮ ವಿವೇಕ್ ಹೇಳಿದರು. ಪತ್ರಿಕಾ ಭವನದಲ್ಲಿ ನಡೆದ ಕೊಟ್ಟಂಗಡ ಕವಿತಾ ವಾಸುದೇವ ರಚಿತ, ಕೊಡವ ಮಕ್ಕಡ ಕೂಟದ 119ನೇ ಪುಸ್ತಕ ‘ಬಯಂದ ಬಾಳ್’ ಕೊಡವ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಯಾವುದೇ ನಿರೀಕ್ಷೆಗಳಿಲ್ಲದೆ ಸಾಹಿತ್ಯವನ್ನು ಸಮಾಜಕ್ಕೆ ನೀಡಬೇಕು. […]
ಅಮೃತ್-2 ಯೋಜನೆ ಅನುಷ್ಠಾನದಿಂದ ನಗರದಲ್ಲಿ ಭೂಕುಸಿತ ಭೀತಿ – ಕೆ.ಎಂ. ಗಣೇಶ್ ಆತಂಕ

ಮಡಿಕೇರಿ : ನಗರದಲ್ಲಿ ಅಮೃತ್-2 ಯೋಜನೆಯ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದೆ ಎಂದು ನಗರಸಭೆ ಮಾಜಿ ಸದಸ್ಯ ಕೆ.ಎಂ. ಗಣೇಶ್ ಆರೋಪಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ನಗರ ಪುನರುಜ್ಜೀವನ ಮತ್ತು ಜಲ ಸಂರಕ್ಷಣೆಗಾಗಿ ಅಮೃತ್ 2 ಯೋಜನೆ ಜಾರಿಗೆ ತಂದಿದೆ. ನಗರದ ಜನತೆಗೆ ಈ ಯೋಜನೆಯಿಂದ ಮೂರು ಕಾಸಿನ ಪ್ರಯೋಜನವಿಲ್ಲ. ರಸ್ತೆಗಳನ್ನು ಅಗೆದು ಹಾಳು ಮಾಡಲಾಗುತ್ತಿದೆ. ಬಯಲು ಸೀಮೆಯಾದರೆ ಸಮತಟ್ಟು ಪ್ರದೇಶವಾಗಿರುವುದರಿಂದ ಸಮಸ್ಯೆ ಉಂಟಾಗುವುದಿಲ್ಲ. ಆದರೆ ಮಡಿಕೇರಿ ಗುಡ್ಡಗಾಡು ಪ್ರದೇಶ. ಇಲ್ಲಿ ಕಾಮಗಾರಿಯಿಂದ ಭೂಕುಸಿತ ಸಂಭವವೂ ಹೆಚ್ಚಿದೆ […]
ಕೊಡಗು ಜಿಲ್ಲೆಯಲ್ಲಿ ನಿನ್ನೆ ದಾಖಲಾದ ಮಳೆಯ ವಿವರ ಇಲ್ಲಿದೆ ನೋಡಿ…

ಮಡಿಕೇರಿ : ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೫೩.೬೯ ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ ೪.೪೧ ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ ೨೯೯೮.೫೯ ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ ೨೯೫೩.೯೨ ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ ೩೮.೨೮ ಮಿ.ಮೀ. ಕಳೆದ ವರ್ಷ ಇದೇ ದಿನ ೯.೫೦ ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ ೪೪೪೬.೫೧ ಮಿ.ಮೀ, ಕಳೆದ ವರ್ಷ ಇದೇ […]
ರಕ್ಷಿತಾ ಶೆಟ್ಟಿಯನ್ನು ನಿಂದಿಸಿದ ಅಶ್ವಿನಿ ಗೌಡ ವಿರುದ್ಧ ದಾಖಲಾಯ್ತು ಕೇಸ್..! – ಇಲ್ಲಿದೆ ಮಾಹಿತಿ

ಬೆಂಗಳೂರು : ಬಿಗ್‌ಬಾಸ್ ಕನ್ನಡ ಸೀಸನ್ 12 ವಿವಿಧ ಕಾರಣಗಳಿಂದ ಸುದ್ದಿಯಾಗುತ್ತಲೇ ಇದೆ. ವಾರದ ಹಿಂದಷ್ಟೇ ಜಾಹ್ನವಿ, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ ನಡುವಿನ ಗಲಾಟೆಯ ವಿಚಾರಕ್ಕೆ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ರಾಜ್ಯಾದ್ಯಂತ ಬಿಗ್‌ಬಾಸ್ ವೀಕ್ಷಕರು ರಕ್ಷಿತಾ ವಿರುದ್ಧ ಮುಗಿಬಿದ್ದ ಜಾಹ್ನವಿ ಹಾಗೂ ಅಶ್ವಿನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದಾದ ನಂತರ ಕಿಚ್ಚನ ಪಂಚಾಯಿತಿಯಲ್ಲಿ ಸುದೀಪ್ ಕೂಡಾ ಆ ಇಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದರು. ಬಳಿಕ ರಕ್ಷಿತಾ ಬಳಿ ಅಶ್ವಿನಿ ಕ್ಷಮೆಯನ್ನೂ ಕೇಳಿದ್ದರು. ಇದೀಗ ಹೊಸ ವಿಷಯ ಏನೆಂದರೆ ರಕ್ಷಿತಾಳನ್ನು […]
ಕೆ.ಎಂ.ಎ. ವತಿಯಿಂದ ಮುಸ್ಕಾನ್ ಸೂಫಿಗೆ ಸನ್ಮಾನ

ಪೊನ್ನಂಪೇಟೆ: ಚೊಚ್ಚಲ ಕೃತಿಯ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದು ಸಾಧನೆಗೈದ ದುದ್ದಿಯಂಡ ಮುಸ್ಕಾನ್ ಸೂಫಿ ಅವರನ್ನು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಸನ್ಮಾನಿಸಲಾಯಿತು. ಕೊಡವ ಮುಸ್ಲಿಂ ಅಸೋಸಿಯೇಷನ್ ವತಿಯಿಂದ ಕೊಡವ ಮುಸ್ಲಿಂ ಶಿಕ್ಷಣ ನಿಧಿಯ ಸಹಯೋಗದಲ್ಲಿ ವಿರಾಜಪೇಟೆಯ ಸಂತ ಅನ್ನಮ್ಮ ಪ್ಯಾರಿಶ್ ಸಭಾಂಗಣದಲ್ಲಿ ಇತ್ತೀಚಿಗೆ ನಡೆದ ಕೆಎಂಎ ಪ್ರತಿಭಾ ಪುರಸ್ಕಾರ-2025 ವಿತರಣೆ ಮತ್ತು ಸನ್ಮಾನ ಸಮಾರಂಭದಲ್ಲಿ ಮುಸ್ಕಾನ್ ಸೂಫಿ ಅವರನ್ನು ಸಂಸ್ಥೆಯ ಪರವಾಗಿ ಸಾಂಪ್ರದಾಯಿಕ ಶೈಲಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಆರಂಭದಿಂದಲೇ ಇಂಗ್ಲೀಷ್ ಸಾಹಿತ್ಯದಲ್ಲಿ ಆಸಕ್ತಿ […]
ಹುಲಿತಾಳ : ಧಾರಾಕಾರ ಮಳೆಗೆ ಮನೆಯ ಗೋಡೆ ಕುಸಿದು ಹಾನಿ

ಮಡಿಕೇರಿ : ಕೊಡಗು ಜಿಲ್ಲೆಯ ವಿವಿಧೆಡೆ ನಿನ್ನೆ ಸಂಜೆ ಧಾರಾಕಾರ ಮಳೆಯಾಗಿದ್ದು, ಹಲವೆಡೆ ಸಣ್ಣ ಪುಟ್ಟ ಅನಾಹುತ ಸಂಭವಿಸಿದ ವರದಿಯಾಗಿದೆ. ಮಡಿಕೇರಿ ತಾಲೂಕಿನ ಹುಲಿತಾಳ ಗ್ರಾಮದಲ್ಲಿ ಮನೆಯೊಂದರ ಗೋಡೆ ಕುಸಿದ ಭಾಗಶಃ ಹಾನಿಯಾಗಿದೆ. ಇಲ್ಲಿನ ಎಚ್.ಟಿ. ಜಾನಕಿ ಎಂಬವರ ಮನೆಯ ಮುಂಭಾಗದ ಕೋಣೆಯ ಗೋಡೆ ರಾತ್ರಿ 8.30ರ ವೇಳೆಗೆ ಕುಸಿದಿದೆ. ಮನೆಯಲ್ಲಿ ಜನ ಇದ್ದರಾದರೂ, ಒಳ ಭಾಗದಲ್ಲಿದ್ದ ಕಾರಣ ಯಾರಿಗೂ ಸಮಸ್ಯೆಯಾಗಿಲ್ಲ. ಆದರೆ ಮನೆಯೊಳಗಿದ್ದ ವಸ್ತುಗಳು ಜಖಂಗೊಂಡಿದ್ದು, ಉಳಿದ ಕೋಣೆಗಳ ಗೋಡೆ ಬಿರುಕು ಬಿಟ್ಟಿದೆ. ಸ್ಥಳೀಯ ಪಂಚಾಯಿತಿಯವರು […]
ಕಾಂತೂರು ಮೂರ್ನಾಡು : ಜಲ್ ಜೀವನ್ ಮಿಷನ್ ಉದ್ಘಾಟನಾ ಕಾರ್ಯಕ್ರಮ ಮುಂದೂಡಿಕೆ

ಮಡಿಕೇರಿ : ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ವತಿಯಿಂದ ಅ.24ರಂದು ನಡೆಯಬೇಕಿದ್ದ ಜಲ್‌ಜೀವನ್ ಮಿಷನ್ ಉದ್ಘಾಟನಾ ಕಾರ್ಯಕ್ರಮವನ್ನು ಮುಂದೂಡಲಾಗಿದೆ. 24ರಂದು ಕಿಗ್ಗಾಲು ಗ್ರಾಮದಲ್ಲಿ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯ ಕಾರಣದಿಂದಾಗಿ ಕಾರ್ಯಕ್ರಮ ಮುಂದೂಡಲಾಗಿದ್ದು, ಮಳೆ ಕಡಿಮೆಯಾದ ಸಂದರ್ಭದಲ್ಲಿ ಕಾರ್ಯಕ್ರಮ ನಡೆಸಲಾಗುವುದು. ಆ ದಿನಾಂಕವನ್ನು ಮುಂದಿನ ದಿನದಲ್ಲಿ ತಿಳಿಸಲಾಗುವುದೆಂದು ಪಂಚಾಯಿತಿ ಪ್ರಕಟಣೆ ತಿಳಿಸಿದೆ.
ವಿಜಯ ವಿನಾಯಕ ದೇವಾಲಯ ವಾರ್ಷಿಕೋತ್ಸವ ಅ.23, 24ಕ್ಕೆ

ಮಡಿಕೇರಿ : ನಗರದ ಶ್ರೀ ವಿಜಯ ವಿನಾಯಕ ದೇವಾಲಯದ ೨೭ನೇ ವಾರ್ಷಿಕೋತ್ಸವ ಕಾರ್ಯಕ್ರಮ ಅಕ್ಟೋಬರ್ ೨೩ ಮತ್ತು ೨೪ ರಂದು ನಡೆಯಲಿದೆ. ೨೩ ರಂದು ಸಂಜೆಯಿಂದ ದೈವತಾ ಕಾರ್ಯಗಳು, ಅಕ್ಟೋಬರ್ ೨೪ ರಂದು ಮಧ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿ ನಂತರ ಅನ್ನದಾನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಕಾರ್ತಿಕ ಮಾಸ ಪ್ರಯುಕ್ತ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ

ಮಡಿಕೇರಿ : ನಗರದ ಶ್ರೀ ಓಂಕಾರೇಶ್ವರ ದೇವಾಲಯ ವತಿಯಿಂದ ಕಾರ್ತಿಕ ಮಾಸದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಹಾಗೂ ಉತ್ಸವಾದಿಗಳು ಶಾಸ್ತ್ರೋಕ್ತವಾಗಿ ನಡೆಯಲಿದೆ ಎಂದು ದೇವಾಲಯದ ಅಧ್ಯಕ್ಷ ಚುಮ್ಮಿ ದೇವಯ್ಯ ತಿಳಿಸಿದ್ದಾರೆ. ಅಕ್ಟೋಬರ್ ೨೨ ರಂದು ಸಂಜೆ ೬ ಗಂಟೆಗೆ ಗೋಪೂಜೆ ನಡೆಯಲಿದೆ. ಅಕ್ಟೋಬರ್ ೨೨ ರಿಂದ ನವೆಂಬರ್ ೨ ರವರೆಗೆ ೧೨ ದಿನಗಳ ಕಾಲ ಸಂಜೆ ೬.೩೦ ಗಂಟೆಯಿಂದ ತುಳಸಿ ಪೂಜೆ ನಡೆಯಲಿದ್ದು, ತುಳಸಿ ಪೂಜೆ ಮಾಡಿಸ ಬಯಸುವ ಭಕ್ತಾದಿಗಳು ೧೦೦ ಸೇವಾ ದರ ಪಾವತಿಸಿ, ಪ್ರಸಾದ […]
ಮಡಿಕೇರಿಯಲ್ಲಿ ‘ಪೊಲೀಸ್ ಸಂಸ್ಮರಣಾ ದಿನಾಚರಣೆ’ – ಹುತಾತ್ಮ ಪೊಲೀಸರಿಗೆ ಗಣ್ಯರ ಗೌರವ ನಮನ

ಮಡಿಕೇರಿ : ಜಿಲ್ಲಾ ಪೊಲೀಸ್ ಘಟಕ ವತಿಯಿಂದ ‘ಪೊಲೀಸ್ ಸಂಸ್ಮರಣಾ ದಿನಾಚರಣೆ’ಯು ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳವಾರ ನಡೆಯಿತು. ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಚ ಸಮರ್ಪಿಸಿ ಗಣ್ಯರು ಹಾಗೂ ಅತಿಥಿಗಳು ಗೌರವ ನಮನ ಸಲ್ಲಿಸಿದರು. ಪೊಲೀಸ್ ಹುತಾತ್ಮರ ದಿನದ ಕಾರ್ಯಕ್ರಮದಲ್ಲಿ ಪೆರೆಡ್ ಕಮಾಂಡರ್ ಆರ್.ಪಿ.ಗಣೇಶ್ ಅವರು ಗೌರವ ವಂದನೆ ಸಲ್ಲಿಸಿ, ಮುಖ್ಯ ಅತಿಥಿಗಳಿಂದ ಅನುಮತಿ ಪಡೆದರು. ಬಳಿಕ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ […]