ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ರಸಪ್ರಶ್ನೆ ಸ್ಪರ್ಧೆ

Bharathi Pre-University College

ಮಡಿಕೇರಿ:-ಮರಗೋಡು ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ವತಿಯಿಂದ ಜಿಲ್ಲಾ ಮಟ್ಟದ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದ್ದು, ಮರಗೋಡು ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಕೂಡಿಗೆ ಸರ್ಕಾರಿ ಕಾಲೇಜಿನ ಮಾನಸ ಪಿ.ಜಿ. ಮತ್ತು ಮಾನಸ ಎ.ಪ್ರಥಮ ಸ್ಥಾನ ಪಡೆದು ರೂ.10 ಸಾವಿರ ನಗದು ಬಹುಮಾನ ಮತ್ತು ಆಕರ್ಷಕ ಪಾರಿತೋಷಕ ಪಡೆದರು. ನೆಲ್ಲಿಹುದಿಕೇರಿ ಕಾಲೇಜಿನ ಸಫಾ ಮತ್ತು ಯುಕ್ತ ದ್ವಿತೀಯ ಸ್ಥಾನ ಮತ್ತು ಚೆನ್ನಮ್ಮ ಮಾದಾಪುರ ಕಾಲೇಜಿನ ಸುಕನ್ಯ ಮತ್ತು ರಕ್ಷಾ […]

15 ದಿನದಲ್ಲೇ ಕಿತ್ತು ಹೋದ ಮಡಿಕೇರಿ-ಕತ್ತಲೆಕಾಡು ರಸ್ತೆಯ ತೇಪೆ..! – ವೈಜ್ಞಾನಿಕ ಕಾಮಗಾರಿ ನಡೆಸಲು ಜ.01ರ ಗಡುವು – ಬೃಹತ್‌ ಪ್ರತಿಭಟನೆ ಎಚ್ಚರಿಕೆ

ಮಡಿಕೇರಿ : ಜಿಲ್ಲೆಯ ವಿವಿಧೆಡೆ ಗುಂಡಿಬಿದ್ದ ರಸ್ತೆಗಳಿಗೆ ತೇಪೆ ಹಾಕಿ ಮುಚ್ಚುವ ಕಾಮಗಾರಿ ನಡೆಯುತ್ತಿದ್ದು, ಹಲವು ಕಡೆಗಳಲ್ಲಿ ಇದು ಕಾಟಾಚಾರಕ್ಕೆ ಎಂಬಂತಾಗಿದೆ. ಇದಕ್ಕೆ ಸಾಕ್ಷಿ ಮಡಿಕೇರಿಯಿಂದ ಕತ್ತಲೆಕಾಡುವರೆಗೆ ನಡೆದಿರುವ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ. ಎರಡು ವಾರದ ಹಿಂದೆ ಈ ಮಾರ್ಗದಲ್ಲಿ ಕಾಮಗಾರಿ ನಡೆದಿದ್ದು, 15 ದಿನ ಕಳೆಯುವಷ್ಟರಲ್ಲೇ ತೇಪೆ ಹಾಕಲಾಗಿದ್ದ ಡಾಂಬರು ಕಿತ್ತು ಹೋಗಿದೆ. ಜಲ್ಲಿಕಲ್ಲುಗಳೆಲ್ಲ ರಸ್ತೆ ಬದಿಯಲ್ಲಿ ಸಂಗ್ರಹವಾಗಿದ್ದು, ಮೊದಲಿದ್ದಂತೆ ಗುಂಡಿಗಳು ಮತ್ತೆ ನಿರ್ಮಾಣವಾಗಿದೆ. ತೀರಾ ಹದಗೆಟ್ಟಿದ್ದ ರಸ್ತೆಯಲ್ಲಿ ಅಲ್ಲಲ್ಲಿ ಕೆಲವು ಗುಂಡಿಗಳನ್ನು ಮುಚ್ಚಿ […]

ಕೊಡಗಿನ ಫಮೀರಾ ಅಹ್ಮದ್‌ಗೆ ಬಹುಭಾಷಾ ಕಂಟೆಂಟ್‌ ಕ್ರಿಯೇಟರ್‌ & ಇನ್ಫ್ಲೂಯೆನ್ಸರ್‌ ಪ್ರಶಸ್ತಿ

ಮಡಿಕೇರಿ : ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಕೊಡಗಿನ ಫಮೀರಾ ಅಹ್ಮದ್‌ ಅವರು ‘ಅತ್ಯುತ್ತಮ ಬಹುಭಾಷಾ ವಿಷಯ ರಚನೆಕಾರರು ಮತ್ತು ಡಿಜಿಟಲ್ ಪ್ರಭಾವಿ (ಇನ್ಫ್ಲೂವೆನ್ಸರ್) ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಒಮಾನಿನ್‌ ಸಲಾಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ. ಚೆರಿಯಪರಂಬುವಿನ ಪರವಂಡ ಅಹಮದ್ ಮತ್ತು ಝೈನಭ ದಂಪತಿಯ ಪುತ್ರಿಯಾಗಿರುವ ಇವರು ಇನ್ಫರ್ಮೇಶನ್ ಸೈನ್ಸ್ ಅಂಡ್ ಇಂಜಿನಿಯರಿಂಗ್‌ನಲ್ಲಿ ಬಿಇ ಪದವೀಧರೆಯಾಗಿದ್ದು, ಪ್ರಸ್ತುತ ಮಸ್ಕತ್‌ನಲ್ಲಿ ನೆಲೆಸಿದ್ದಾರೆ. ಈಕೆ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ನಿರ್ದೇಶಕರಾದ ಪರವಂಡ ಎ. ಸಿರಾಜ್ ಸಹೋದರಿ.

ಮಡಿಕೇರಿ ನಗರ ಸಭೆ ಸ್ಥಾಯಿ ಸಮಿತಿ ಚುನಾವಣೆ – ಬಿಜೆಪಿಯ ನಾಲ್ವರು ಅವಿರೋಧ ಆಯ್ಕೆ

ಮಡಿಕೇರಿ : ಮಡಿಕೇರಿ ನಗರಸಭೆ ಸ್ಥಾಯಿ ಸಮಿತಿಗೆ ಬಿಜೆಪಿಯ ನಾಲ್ವರು ಸದಸ್ಯರು ಅವಿರೋಧ ಆಯ್ಕೆಯಾಗಿದ್ದಾರೆ. ಎಸ್.ಸಿ ಸತೀಶ್, ಅರುಣ್ ಶೆಟ್ಟಿ, ಕೆ.ಎಂ ಅಪ್ಪಣ್ಣ, ಶಾರದಾ ನಾಗರಾಜ್ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದವರು. ನಗರಸಭೆ ಅಧ್ಯಕ್ಷೆ ಕಲಾವತಿ ಅಧ್ಯಕ್ಷತೆಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಈ ಆಯ್ಕೆ ಮಾಡಲಾಯಿತು. ತೆರಿಗೆ ನಿರ್ಧಾರ ಮತ್ತು ಹಣಕಾಸು ಸಮಿತಿಗೆ ಅರುಣ್ ಶೆಟ್ಟಿ, ಸಾರ್ವಜನಿಕ ಅರೋಗ್ಯ & ಶಿಕ್ಷಣ ಸಮಿತಿಗೆ ಎಸ್‌.ಸಿ. ಸತೀಶ್, ಪಟ್ಟಣ ಯೋಜನೆ ನಗರ ಅಭಿವೃದ್ಧಿ ಸಮಿತಿಗೆ ಅಪ್ಪಣ್ಣ, ಲೆಕ್ಕಪತ್ರ ಸಮಿತಿಗೆ […]

ಕೊಯನಾಡು ಗ್ರಾಮದಲ್ಲಿ ಜೇನು ಪೆಟ್ಟಿಗೆ ಹಾಗೂ ಹೊಲಿಗೆ ಯಂತ್ರ ಸೇರಿದಂತೆ ವಿವಿಧ ಸೌಲಭ್ಯ ವಿತರಿಸಿದ ಎ.ಎಸ್.ಪೊನ್ನಣ್ಣ

ತಾಲ್ಲೂಕಿನ ಕೊಯನಾಡು ವಲಯ ಅರಣ್ಯ ಕಚೇರಿ ಬಳಿ ನೂತನವಾಗಿ ನಿರ್ಮಿಸಿರುವ ಅಧಿಕಾರಿಗಳ ವಸತಿ ಗೃಹವನ್ನು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಸೋಮವಾರ ಉದ್ಘಾಟಿಸಿದರು. ಕೊಯನಾಡು ಬಳಿಯ ವಲಯ ಅರಣ್ಯಾಧಿಕಾರಿ ಕಚೇರಿ ಆವರಣದಲ್ಲಿ ಏರ್ಪಡಿಸಲಾಗಿದ್ದ ಸರಳ ಸಮಾರಂಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ವಸತಿ ಗೃಹ ಉದ್ಘಾಟಿಸಿ ಶಾಸಕರು ಮಾತನಾಡಿದರು. 30 ಜನ ಕೃಷಿಕರಿಗೆ ತಲಾ 2 ಜೇನು ಪೆಟ್ಟಿಗೆ, ಹಾಗೂ 6 ಜನ ಮಹಿಳೆಯರಿಗೆ ಹೊಲಿಗೆಯಂತ್ರ ಹಸ್ತಾಂತರಿಸಿದರು. ಜೊತೆಗೆ […]

ನಾಲ್ವರ ಹ*ತ್ಯೆಗೈದ ಅಪರಾಧಿಗೆ ಗಲ್ಲು ಶಿಕ್ಷೆ – ತನಿಖೆಯಲ್ಲಿ ಪಾಲ್ಗೊಂಡ ಅಧಿಕಾರಿ, ಸಿಬ್ಬಂದಿಗೆ ಬೆಳ್ಳಿ ಪದಕದ ಗೌರವ..!

ಮಡಿಕೇರಿ : ಮಾರ್ಚ್‌ನಲ್ಲಿ ಪೊನ್ನಂಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ನಾಲ್ವರ ಹ*ತ್ಯೆ ಪ್ರಕರಣ ಸಂಬಂಧ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ಪ್ರಕಟಿಸಿತ್ತು. ಈ ಪ್ರಕರಣದ ತನಿಖೆಯಲ್ಲಿ ಅತ್ಯುತ್ತಮ ಕಾರ್ಯನಿರ್ವಹಣೆ ತೋರಿದ ಅಧಿಕಾರಿ ಮತ್ತು ಸಿಬ್ಬಂದಿಗೆ ಬೆಳ್ಳಿ ಪದಕ ನೀಡಿ ಗೌರವಿಸಲಾಗಿದೆ. ಪೊಲೀಸ್‌ ಪರೇಡ್‌ ಮೈದಾನದಲ್ಲಿ ನಡೆದ ಕವಾಯತು ಕಾರ್ಯಕ್ರಮದಲ್ಲಿ ಜಿಲ್ಲಾ ಎಸ್ಪಿ ಕೆ. ರಾಮರಾಜನ್‌ ಅವರು ಬೆಳ್ಳಿ ಪದಕವಿರುವ ಪ್ರಶಂಸನಾ ಪತ್ರವನ್ನು ನೀಡಿ ಅಭಿನಂದಿಸಿದರು.

ನನ್ನ ಕಲ್ಪನೆಯ ಸ್ವಚ್ಚ ಕೊಡಗು ಪ್ರಬಂಧ ಸ್ಪರ್ಧೆ – ರುಶೀಲ್ ಎಂ. ಪ್ರಥಮ, ಎಂ.ಎಸ್. ಸಮನ್ವಿ ರಾವ್ ದ್ವಿತೀಯ, ಸನ್ನಿಧಿ ಆರ್. ತೃತೀಯ

ಮಡಿಕೇರಿ : ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್, ಕೊಡಗು ಜಿಲ್ಲಾ ಘಟಕವತಿಯಿಂದ ನಡೆದ ನನ್ನ ಕಲ್ಪನೆಯ ಸ್ವಚ್ಚ ಕೊಡಗು ವಿಷಯದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಮಡಿಕೇರಿ ಕೊಡಗು ವಿದ್ಯಾಲಯದ ರುಶೀಲ್ ಎಂ. ಪ್ರಥಮ, ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಎಂ.ಎಸ್. ಸಮನ್ವಿ ರಾವ್ ದ್ವಿತೀಯ, ವೀರಾಜಪೇಟೆ ತ್ರಿವೇಣಿ ಶಾಲೆಯ ಸನ್ನಿಧಿ ಆರ್. ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಪರಿಷತ್ ಜಿಲ್ಲಾಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ತಿಳಿಸಿದ್ದಾರೆ. ಸ್ಪರ್ಧೆಯಲ್ಲಿ ರುಶೀಲ್ ಎಂ. ಕೊಡಗು ವಿದ್ಯಾಲಯ […]

ಬನ್ನಿ ರಥ ಎಳೆಯೋಣ… ಆದಿಯೋಗಿ ಶಿವಾಂಗ ರಥಯಾತ್ರೆ ಡಿಸೆಂಬರ್‌ 22ಕ್ಕೆ ಮಡಿಕೇರಿ ಪ್ರವೇಶ

ಮಡಿಕೇರಿ : ಕೊಯಮತ್ತೂರಿನ ಈಶ ಫೌಂಡೇಷನ್‌ ವತಿಯಿಂದ ಹಮ್ಮಿಕೊಂಡಿರುವ ಆದಿಯೋಗಿ ಶಿವಾಂಗ ರಥಯಾತ್ರೆ ಡಿಸೆಂಬರ್‌ 22ರಂದು ಮಡಕೇರಿ ಪ್ರವೇಶಿಸಲಾಗಿದೆ. ಉಡುಪಿಯಿಂದ ಆರಂಭವಾಗಿರುವ ರಥಯಾತ್ರೆ ಡಿ.21ರಂದು ಸಂಪಾಜೆ ಮೂಲಕ ಕೊಡಗು ಪ್ರವೇಶಿಸಲಿದ್ದು, ಅಂದು ಮದೆನಾಡಿನಲ್ಲಿ ತಂಗಲಿದೆ. ಮಾರನೇ ದಿನ ಅಲ್ಲಿಂದ ಹೊರಟು ಸಂಜೆ ವೇಳೆಗೆ ಮಡಿಕೇರಿ ನಗರಕ್ಕೆ ಬರಲಿದೆ. ವಿಶೇಷ ವಿನ್ಯಾಸದ ಈ ರಥವನ್ನು ಭಕ್ತರು ನೆರವಿನಿಂದ ಎಳೆಯುತ್ತಾ ಸಾಗುವುದು ವಿಶೇಷ. ಮಡಿಕೇರಿಗೆ ಬರುವ ರಥ ಜನರಲ್‌ ತಿಮ್ಮಯ್ಯ ವೃತ್ತ, ಮಂಗೇರಿರ ಮುತ್ತಣ್ಣ ವೃತ್ತ, ಹಳೆ ಖಾಸಗಿ ಬಸ್‌ […]

ಬೇಟಿ ಬಚಾವೋ ಬೇಟಿ ಪಡಾವೋ: ಬಾಲ್ಯ ವಿವಾಹ ನಿಷೇಧದ ಕುರಿತು ಮಾಹಿತಿ ಕಾರ್ಯಗಾರ

workshop

ಮಡಿಕೇರಿ:- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಇವರ ಸಹಯೋಗದೊಂದಿಗೆ 2025-26 ನೇ ಸಾಲಿನ ಬೇಟಿ ಬಚಾವೋ ಬೇಟಿ ಪಡಾವೋ ಕಾಯಕ್ರಮದಡಿಯಲ್ಲಿ ಬಾಲ್ಯ ವಿವಾಹ ನಿಷೇಧದ ಕುರಿತು ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಶಾಲಾ ಮಕ್ಕಳಿಗೆ ಮಾಹಿತಿ ಕಾರ್ಯಗಾರವನ್ನು ಏರ್ಪಡಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಜಿಲ್ಲಾ ಮಹಿಳಾ ಸಬಲೀಕರಣ ಘಟಕದ […]

ನಾಳೆ ಕೊಡಗಿನ ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

electricity

ಸೋಮವಾರಪೇಟೆ ವಿದ್ಯುತ್ ವಿತರಣಾ ಉಪ ಕೇಂದ್ರದಿಂದ ಡಿಸೆಂಬರ್, 18 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಫೀಡರ್ ನಿರ್ವಾಹಣೆ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವುದರಿಂದ, ಬಿಳಿರೆಕೊಪ್ಪ, ಮಟ್ನಳ್ಳಿ, ಕಿಬ್ಬೆಟ್ಟ, ಅಯ್ಯಪ್ಪ ಕಾಲೋನಿ, ದೊಡ್ಡಹನಕೋಡು, ಗೆಜ್ಜೆಹನಕೋಡು, ಕಾಡುಮನೆ, ಚಿಕ್ಕತೊಳೂರು, ಕಾಗಡೀಕಟ್ಟೆ, ದೊಡ್ಡಮಳ್ತೆ, ಒಳಗುಂದ, ಸುಳಿಮಳ್ತೆ, ಹೊನ್ನಾವಳ್ಳಿ, ಕೂಗೆಕೋಡಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.