ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್ಸಂಗ್ ಕಂಪನಿಯು ಯುಗಾದಿ ಹಬ್ಬ ಸಂಭ್ರಮದ ಸಲುವಾಗಿ ತನ್ನ ಪ್ರೀಮಿಯಂ ಎಐ ದೊಡ್ಡ ಸ್ಕ್ರೀನ್ ಟಿವಿಗಳಾದ ನಿಯೋ ಕ್ಯೂಎಲ್ಇಡಿ 8 ಕೆ, ನಿಯೋ ಕ್ಯೂಎಲ್ಇಡಿ 4 ಕೆ, ಓಎಲ್ಇಡಿ ಮತ್ತು ಕ್ರಿಸ್ಟಲ್ 4 ಕೆ ಯುಎಚ್ಡಿ ಟಿವಿ ಮಾಡೆಲ್ ಗಳ ಮೇಲೆ ವಿಶೇಷ ಆಫರ್ ಗಳನ್ನು ಘೋಷಿಸಿದೆ. ಮಾರ್ಚ್ 5 ರಿಂದ ಮಾರ್ಚ್ 31, 2025 ರವರೆಗೆ ನಡೆಯುವ ಈ ಹಬ್ಬದ ಅಭಿಯಾನವು ಗ್ರಾಹಕರಿಗೆ ತಮ್ಮ ಮನೆಯ ಮನರಂಜನಾ ವ್ಯವಸ್ಥೆಯನ್ನು ಅಪ್ ಗ್ರೇಡ್ ಮಾಡಲು ನೆರವಾಗುವ ಸಲುವಾಗಿ ಅತ್ಯುತ್ತಮ ಆಫರ್ಗಳನ್ನು ನೀಡುತ್ತದೆ.
ಮನೆಯ ಮನರಂಜನಾ ವ್ಯವಸ್ಥೆಯನ್ನು ಅತ್ಯುನ್ನತಗೊಳಿಸುವ ಸ್ಯಾಮ್ಸಂಗ್ನ (Samsung) ಪ್ರೀಮಿಯಂ ಟಿವಿಗಳು ಎಐ ತಂತ್ರಜ್ಞಾನ ಬಳಸಿಕೊಂಡು ಅತ್ಯುತ್ತ ಚಿತ್ರ ಗುಣಮಟ್ಟ, ಆಕರ್ಷಕ ಧ್ವನಿ ವ್ಯವಸ್ಥೆ ಒದಗಿಸುತ್ತವೆ ಮತ್ತು ಸೊಗಸಾದ ವಿನ್ಯಾಸವನ್ನು ಹೊಂದಿವೆ. ಗ್ರಾಹಕರು ಈ ವೇಳೆಯಲ್ಲಿ ಆಯ್ದ ಖರೀದಿಗಳ ಮೇಲೆ ₹2,04,990 ಮೌಲ್ಯದ ವರೆಗಿನ ಉಚಿತ ಟಿವಿ ಅಥವಾ ₹90,990 ಮೌಲ್ಯದ ಉಚಿತ ಸೌಂಡ್ ಬಾರ್ ಅನ್ನು ಪಡೆಯಬಹುದು. ಜೊತೆಗೆ ಸ್ಯಾಮ್ಸಂಗ್ ಶೇ.20 ರವರೆಗೆ ಕ್ಯಾಶ್ಬ್ಯಾಕ್, ಶೂನ್ಯ ಮುಂಗಡ ಪಾವತಿ ಮತ್ತು ಕೇವಲ ₹2,990 ರಿಂದ ಪ್ರಾರಂಭವಾಗುವ 30 ತಿಂಗಳವರೆಗಿನ ಸುಲಭ ಇಎಂಐ ಆಯ್ಕೆಗಳನ್ನು ಕೂಡ ನೀಡುತ್ತಿದೆ.
ಯಾವುದೇ ಸ್ಯಾಮ್ಸಂಗ್ ಟಿವಿ ಖರೀದಿಸಿದಾಗ ಸ್ಯಾಮ್ಸಂಗ್ ಸೌಂಡ್ಬಾರ್ಗಳ ಮೇಲೆ ಶೇ.45 ರವರೆಗೆ ರಿಯಾಯಿತಿ ಲಭ್ಯವಿದ್ದು, ಇದು ಸಿನಿಮಾ ಮನರಂಜನಾ ವ್ಯವಸ್ಥೆಯನ್ನು ಅಪ್ಗ್ರೇಡ್ ಮಾಡಲು ಸೂಕ್ತ ಅವಕಾಶವಾಗಿದೆ. ಈ ಆಫರ್ಗಳು Samsung.com, ಪ್ರಮುಖ ಆನ್ಲೈನ್ ಪೋರ್ಟಲ್ಗಳು ಮತ್ತು ಭಾರತದಾದ್ಯಂತ ಇರುವ ಆಯ್ದ ಸ್ಯಾಮ್ಸಂಗ್ ರಿಟೇಲ್ ಮಳಿಗೆಗಳಲ್ಲಿ ಲಭ್ಯವಿರುತ್ತವೆ.
ಸ್ಯಾಮ್ಸಂಗ್ನ ಹೊಸ ಆಫರ್ಗಳನ್ನು ಮಾರ್ಚ್ ತಿಂಗಳಲ್ಲಿ ಎಐ ತಂತ್ರಜ್ಞಾನ ಹೊಂದಿರುವ ಅತ್ಯುತ್ತಮ ಟಿವಿಗಳನ್ನು ಸುಲಭವಾಗಿ ಲಭ್ಯವಾಗಿಸಲು ನೆರವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಪ್ರೀಮಿಯಂ ಟಿವಿ ಶ್ರೇಣಿಯು ಎಐ ಸಾಮರ್ಥ್ಯ, ನೈಜವಾದ ಬಣ್ಣ ನಿಖರತೆ ಮತ್ತು ಉತ್ತಮ ಧ್ವನಿ ಗುಣಮಟ್ಟದ ಜೊತೆಗೆ ಆಕರ್ಷಕ ದೃಶ್ಯಗಳನ್ನು ಒದಗಿಸುತ್ತದೆ. ಡಾಲ್ಬಿ ಅಟ್ಮಾಸ್ ಮತ್ತು ಕ್ಯೂ-ಸಿಂಫನಿ ವ್ಯವಸ್ಥೆಯನ್ನು ಹೊಂದಿರುವ ಈ ಸ್ಯಾಮ್ಸಂಗ್ ಟಿವಿಗಳು ಬಹುಆಯಾಮದ ಆಡಿಯೋ ಸೌಲಭ್ಯ ನೀಡುತ್ತವೆ.
ಪ್ರತೀ ದೃಶ್ಯ ವೀಕ್ಷಣೆಯನ್ನೂ ರೋಮಾಂಚಕವಾಗಿಸುತ್ತವೆ. ಸ್ಯಾಮ್ಸಂಗ್ ನಾಕ್ಸ್ ಭದ್ರತಾ ವ್ಯವಸ್ಥೆ ಇರುವುದರಿಂದ ಬಳಕೆದಾರರು ಸುರಕ್ಷಿತ ಸ್ಮಾರ್ಟ್ ಟಿವಿ ಅನುಭವವನ್ನು ಪಡೆಯಬಹುದು. ಎಐ ಮತ್ತು ಕ್ವಾಂಟಮ್ ಮ್ಯಾಟ್ರಿಕ್ಸ್ ತಂತ್ರಜ್ಞಾನ ಹೊಂದಿರುವ ಈ ಟಿವಿಗಳು ಉತ್ತಮ ಕಾಂಟ್ರಾಸ್ಟ್, ಸ್ಪಷ್ಟತೆ ಮತ್ತು ಬ್ರೈಟ್ ನೆಸ್ ಅನ್ನು ಒದಗಿಸುತ್ತವೆ ಮತ್ತು ಮನೆಯ ಲಿವಿಂಗ್ ರೂಮ್ ಅನ್ನು ಹೋಮ್ ಥಿಯೇಟರ್ ಆಗಿ ಪರಿವರ್ತಿಸುತ್ತವೆ.
ಸ್ಯಾಮ್ಸಂಗ್ನ ಹಬ್ಬದ ಅಭಿಯಾನವು ಹೊಸತನಕ್ಕೆ ಮತ್ತು ಗ್ರಾಹಕರ ಸಂತೋಷಕ್ಕೆ ಸಂಸ್ಥೆಯು ಬದ್ಧವಾಗಿರುವುದನ್ನು ತೋರಿಸುತ್ತದೆ. ಉತ್ತಮ ತಂತ್ರಜ್ಞಾನ, ವಿನ್ಯಾಸ ಮತ್ತು ಮೌಲ್ಯವನ್ನು ನೀಡುತ್ತದೆ. ಈ ಆಫರ್ಗಳು ನಿಯೋ ಕ್ಯೂಎಲ್ಇಡಿ 8ಕೆ, ನಿಯೋ ಕ್ಯೂಎಲ್ಇಡಿ 4ಕೆ , ಓಎಲ್ಇಡಿ ಮತ್ತು ಕ್ರಿಸ್ಟಲ್ 4ಕೆ ಯುಎಚ್ಡಿ ಟಿವಿ ಶ್ರೇಣಿಗಳ 55 ಇಂಚು ಮತ್ತು ಅದಕ್ಕಿಂತ ಹೆಚ್ಚಿನ ಗಾತ್ರದ ಟಿವಿಗಳ ಮೇಲೆ ಲಭ್ಯವಿರುತ್ತದೆ.
ಸ್ಯಾಮ್ಸಂಗ್ ಇಂಡಿಯಾದ ವಿಷುಯಲ್ ಡಿಸ್ಪ್ಲೇ ಬಿಸಿನೆಸ್ ಹಿರಿಯ ನಿರ್ದೇಶಕ ವಿಪ್ಲೇಶ್ ಡ್ಯಾಂಗ್ ಮಾತನಾಡಿ, ಸ್ಯಾಮ್ಸಂಗ್ನಲ್ಲಿ ನಾವು ಗ್ರಾಹಕರ ಟಿವಿ ವೀಕ್ಷಣಾ ಅನುಭವವನ್ನು ಉತ್ತಮಗೊಳಿಸಲು ಅತ್ಯಾಧುನಿಕ ತಂತ್ರಜ್ಞಾನ ಬಳಸುತ್ತೇವೆ. ಇದೀಗ ಆಕರ್ಷಕ ಆಫರ್ ಗಳನ್ನು ಒದಗಿಸುವ ಮೂಲಕ ಗ್ರಾಹಕರ ಮನೆಗಳಿಗೆ ಅತ್ಯುತ್ತಮ ತಂತ್ರಜ್ಞಾನವನ್ನು ತರಲು ಅನುವು ಮಾಡಿಕೊಡುತ್ತಿದ್ದೇವೆ. ನಮ್ಮ ಪ್ರೀಮಿಯಂ ಎಐ ಟಿವಿಗಳು ಮನರಂಜನಾ ವಿಭಾಗದಲ್ಲಿಯೇ ಸಂಚಲನ ಮೂಡಿಸಿವೆ ಎಂದರು.
ಈ ಟಿವಿಗಳು ಉತ್ತಮ ದೃಶ್ಯ ಗುಣಮಟ್ಟ, ಆಕರ್ಷಕ ಧ್ವನಿ ವ್ಯವಸ್ಥೆ ಮತ್ತು ಸುಗಮ ಸಂಪರ್ಕವನ್ನು ಒದಗಿಸುತ್ತವೆ. ಭಾರತವು ಈ ತಿಂಗಳಲ್ಲಿ ಹಬ್ಬಗಳನ್ನು ಸಂಭ್ರಮಿಸುತ್ತಿರುವ ಸಂದರ್ಭದಲ್ಲಿ ಸ್ಯಾಮ್ಸಂಗ್ನ ಎಐ ಟಿವಿಗಳ ಮೇಲೆ ವಿಶೇಷ ಆಫರ್ ಗಳನ್ನು ನೀಡಲು ನಾವು ಉತ್ಸುಕರಾಗಿದ್ದೇವೆ. ಈ ಆಕರ್ಷಕ ಆಫರ್ಗಳ ಮೂಲಕ ಅತ್ಯುತ್ತಮ ಗುಣಮಟ್ಟದ ಮನೆ ಮನರಂಜನಾ ವ್ಯವಸ್ಥೆಯನ್ನು ಎಲ್ಲರಿಗೂ ಸುಲಭವಾಗಿ ಒದಗಿಸಲಿದ್ದೇವೆ. ಈ ಮೂಲಕ ಗ್ರಾಹಕರು ತಮ್ಮ ವೀಕ್ಷಣಾ ಅನುಭವವನ್ನು ಉನ್ನತೀಕರಿಸಿ, ಪ್ರೀತಿಪಾತ್ರರೊಂದಿಗೆ ಸಂಭ್ರಮಿಸಲು ಅವಕಾಶ ಮಾಡಿಕೊಡುತ್ತೇವೆ ಎಂದು ಹೇಳಿದರು.