ಕುಶಾಲನಗರದ ಪೂರ್ಣಶ್ರೀ ಫರ್ನಿಚರ್ಸ್‌ ಹೊಸ ರೂಪದಲ್ಲಿ – 20 ಸಾವಿರ ಚ.ಅಡಿ ವಿಸ್ತೀರ್ಣದ RAIZO ಶೋರೂಂ ಉದ್ಘಾಟನೆ

Share this post :

ಕುಶಾಲನಗರ : ಪಿಠೋಪಕರಣಗಳ ತಯಾರಿ ಮತ್ತು ಮಾರಾಟ ಕ್ಷೇತ್ರದಲ್ಲಿ ಮೂರು ದಶಕದಿಂದ ಜನರ ವಿಶ್ವಾಸ ಗಳಿಸಿರುವ ಕುಶಾಲನಗರದ ಪೂರ್ಣಶ್ರೀ ಫರ್ನಿಚರ್ಸ್‌ನ ಅತ್ಯಾಧುನಿಕ ಪೀಠೋಪಕರಣಗಳುಳ್ಳ ಮಳಿಗೆ RAIZO ಇದೀಗ ಗ್ರಾಹಕರ ಸೇವೆಗೆ ತೆರೆದುಕೊಂಡಿದೆ.

ರವೀಂದ್ರ ರೈ ಮಾಲೀಕತ್ವದ ನೂತನ ಮಳಿಗೆಯನ್ನು ಶಾಸಕ ಡಾ. ಮಂತರ್‌ ಗೌಡ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಳಿಗೆಯೊಳಗೆ ಪ್ರವೇಶಿಸಿದಾಗ ವಿದೇಶದ ಮಾಲ್‌ಗೆ ಹೋದ ಅನುಭವ ಆಗುತ್ತದೆ. ಗುಣಮಟ್ಟದ ಉತ್ಪನ್ನಗಳಿಗೆ ಹೊರ ಜಿಲ್ಲೆಗೆ ಹೋಗಿ ಖರೀದಿಸುವ ಬದಲು, ಜಿಲ್ಲೆಯಲ್ಲೇ ಸಿಗುವ ಮಳಿಗೆಗಳಿಂದ ಖರೀದಿಸಿದರೆ ಹಣಕಾಸಿನ ಉಳಿತಾಯ ಆಗುತ್ತದೆ ಎಂದರು.
ಕೊಡಗಿನಲ್ಲಿ ಗುಣಮಟ್ಟದ ಉತ್ಪನ್ನಗಳಿಗೆ ಬೇಡಿಕೆ ಇದೆ. ನೂತನ ಮಳಿಗೆಯಲ್ಲಿ ಹಲವು ವಿದೇಶಿ ಉತ್ಪನ್ನಗಳು ಕೂಡಾ ಇದ್ದಾವೆ. ಜೊತೆಗೆ ಇವರದ್ದೇ ಆದ ಉತ್ಪನ್ನಗಳನ್ನೂ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಉತ್ತಮ ಸೇವೆ ಇವರಿಂದ ಗ್ರಾಹಕರಿಗೆ ಸಿಗಲಿ ಎಂದು ಆಶಿಸಿದರು.

ಮಾಲೀಕ ರವೀಂದ್ರ ರೈ ಮಾತನಾಡಿ, 30 ವರ್ಷದಿಂದ ಕೊಡಗಿನ ಜನ ನಮಗೆ ಪ್ರೋತ್ಸಾಹ ನೀಡಿದ್ದಾರೆ. ಮುಂದಿನ ದಿನದಲ್ಲಿ ನನ್ನ ಮಗ ಉದ್ಯಮವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದು, ಮುಂದೆಯೂ ಕೂಡಾ ಜನರ ಸಹಕಾರ ಬೇಕು ಎಂದರು.
ರೈಝೋ ಲೋಗೋವನ್ನು ಉದ್ಯಮಿ ಜಗದೀಶ್‌ ರೈ ಅನಾವರಣಗೊಳಿಸಿದರು. ಕುಶಾಲನಗರದಲ್ಲಿ ಉತ್ಕೃಷ್ಟ ಗುಣಮಟ್ಟದ ಪೀಠೋಪಕರಣ ಮಳಿಗೆ ಆರಂಭವಾಗಿರುವು ಖುಷಿಯ ವಿಚಾರ. ಜಿಲ್ಲೆ ಮಾತ್ರವಲ್ಲದೆ, ಹೊರ ಜಿಲ್ಲೆ, ಹೊರ ರಾಜ್ಯಗಳಲ್ಲೂ ಖ್ಯಾತಿ ಗಳಿಸಲಿ ಎಂದು ಆಶಿಸಿದರು.

20 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ನೂತನ ಮಳಿಗೆ ಇದ್ದು, ಹಲವು ಬಗೆಯ ಪೀಠೋಕರಣಗಳು ಇಲ್ಲಿವೆ. ಗೋದ್ರೇಜ್‌ ಶೋರೂಂ, ಸ್ಲೀಪ್‌ವೆಲ್‌ ಮ್ಯಾಟ್ರೆಸ್‌ ಸೇರಿ ಬೇರೆ ಬೇರೆ ಉತ್ಪನ್ನಗಳ ಪ್ರತ್ಯೇಕ ವಿಭಾಗ ಈ ಮಳಿಗೆಯೊಳಗೆ ಇದೆ. ಕುಶಾಲನಗರದ ಉದ್ಯಮಿಗಳು, ರವೀಂದ್ರ ರೈ ಅವರ ಆಪ್ತ ಬಳಗದವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

coorg buzz
WhatsApp Image 2026-08-11 at 16.11.22