ನೀರುಕೊಲ್ಲಿ ಗಣೇಶೋತ್ಸವ – ಲೋಗೋ ಬಿಡುಗಡೆ – ಹಲವು ಕಾರ್ಯಕ್ರಮಗಳ ಆಕರ್ಷಣೆ

ಮಡಿಕೇರಿ : ನೀರುಕೊಲ್ಲಿಯ ಸಾರ್ವಜನಿಕ ವಿಘ್ನೇಶ್ವರ ಮಿತ್ರ ಮಂಡಳಿ ವತಿಯಿಂದ ಈ ಬಾರಿ 36ನೇ ವರ್ಷದ ಗೌರಿ ಗಣೇಶೋತ್ಸವ ಆಚರಿಸಲಾಗುತ್ತಿದ್ದು, ಅದರ ಲೋಗೋವನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ನೀರುಕೊಲ್ಲಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಮಿತಿಯ ಪದಾಧಿಕಾರಿಗಳು ಲೋಗೋ ಬಿಡುಗಡೆ ಮಾಡಿದರು. 36ನೇ ವರ್ಷದ ಉತ್ಸವದ ಅಂಗವಾಗಿ 14ರಂದು ಮೂರ್ತಿ ಪ್ರತಿಷ್ಠಾಪನೆ, ಬಳಿಕ ಗ್ರಾಮದ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆ ಏರ್ಪಡಿಸಲಾಗಿದೆ. ಹಗ್ಗಜಗ್ಗಾಟ, ರಸ್ತೆ ಓಟ, ಸಂಗೀತ ಕುರ್ಚಿ, ನಿಂಬೆ ಚಮಚ ಓಟ, ಕಣ್ಣಿಗೆ ಬಟ್ಟೆ […]
ಕುಶಾಲನಗರದ ಪೂರ್ಣಶ್ರೀ ಫರ್ನಿಚರ್ಸ್ ಹೊಸ ರೂಪದಲ್ಲಿ – 20 ಸಾವಿರ ಚ.ಅಡಿ ವಿಸ್ತೀರ್ಣದ RAIZO ಶೋರೂಂ ಉದ್ಘಾಟನೆ

ಕುಶಾಲನಗರ : ಪಿಠೋಪಕರಣಗಳ ತಯಾರಿ ಮತ್ತು ಮಾರಾಟ ಕ್ಷೇತ್ರದಲ್ಲಿ ಮೂರು ದಶಕದಿಂದ ಜನರ ವಿಶ್ವಾಸ ಗಳಿಸಿರುವ ಕುಶಾಲನಗರದ ಪೂರ್ಣಶ್ರೀ ಫರ್ನಿಚರ್ಸ್‌ನ ಅತ್ಯಾಧುನಿಕ ಪೀಠೋಪಕರಣಗಳುಳ್ಳ ಮಳಿಗೆ RAIZO ಇದೀಗ ಗ್ರಾಹಕರ ಸೇವೆಗೆ ತೆರೆದುಕೊಂಡಿದೆ. ರವೀಂದ್ರ ರೈ ಮಾಲೀಕತ್ವದ ನೂತನ ಮಳಿಗೆಯನ್ನು ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಳಿಗೆಯೊಳಗೆ ಪ್ರವೇಶಿಸಿದಾಗ ವಿದೇಶದ ಮಾಲ್‌ಗೆ ಹೋದ ಅನುಭವ ಆಗುತ್ತದೆ. ಗುಣಮಟ್ಟದ ಉತ್ಪನ್ನಗಳಿಗೆ ಹೊರ ಜಿಲ್ಲೆಗೆ ಹೋಗಿ ಖರೀದಿಸುವ ಬದಲು, ಜಿಲ್ಲೆಯಲ್ಲೇ ಸಿಗುವ ಮಳಿಗೆಗಳಿಂದ ಖರೀದಿಸಿದರೆ ಹಣಕಾಸಿನ […]
ಕಸ್ತೂರಿ ರಂಗನ್ ವರದಿ ಅಂತಿಮ ಕರಡು ಅಧಿಸೂಚನೆ – ಆತಂಕ ಬೇಡ ಎಂದ ಸಂಸದ ಯದುವೀರ್

ಮಡಿಕೇರಿ : ಕಸ್ತೂರಿ ರಂಗನ್ ವರದಿ ವಿಚಾರವಾಗಿ ಜನ ಆತಂಕಕ್ಕೀಡಾಗಬೇಕಾದ ಅಗತ್ಯವಿಲ್ಲ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದರು. ಮಡಿಕೇರಿಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ವಿಚಾರವಾಗಿ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಲಾಗುತ್ತಿದೆ. ಕೊಡಗಿನ ಜನ ಪ್ರಕೃತಿಯನ್ನು ರಕ್ಷಿಸುವ, ಗೌರವಿಸುವ ಗುಣ ಹೊಂದಿದ್ದಾರೆ. ಜನವಸತಿ ಹಾಗೂ ಕೃಷಿ ಪ್ರದೇಶವನ್ನು ವರದಿ ವ್ಯಾಪ್ತಿಗೆ ಸೇರಿಸಬಾರದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಈ ವಿಚಾರದಲ್ಲಿ ಕಾರ್ಯನಿರ್ವಹಣೆ ಮಾಡಬೇಕೆಂದು ಅಭಿಪ್ರಾಯಪಟ್ಟರು. ಕಸ್ತೂರಿ ರಂಗನ್ ವರದಿ ಯಥಾವತ್ ಅನುಷ್ಠಾನ ಅಸಾಧ್ಯ. […]