ಮಡಿಕೇರಿ : ಕೊಡಗು ಜಿಲ್ಲಾ ಪೊಲೀಸ್ ಶ್ವಾನ ದಳಕ್ಕೆ ಶ್ವಾನವೊಂದನ್ನು ಉಡುಗೊರೆಯಾಗಿ ವ್ಯಕ್ತಿಯೊಬ್ಬರು ನೀಡಿದ್ದಾರೆ.
ಮಡಿಕೇರಿ ತಾಲೂಕಿನ ಪಾಲೂರು ನಿವಾಸಿ ಎ.ಯು. ಪೂವಯ್ಯ ಎಂಬವರು ಬೆಲ್ಜಿಯನ್ ಮಾಲಿನೋಯಿಸ್ ಎಂಬ ಶ್ವಾನವನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಜಿಲ್ಲಾ ಎಸ್ಪಿ ಕಚೇರಿಯಲ್ಲಿ ಎಸ್ಪಿ ಬಿಂದು ಮಣಿ ಅವರ ಮೂಲಕ ಶ್ವಾನ ದಳಕ್ಕೆ ಹಸ್ತಾಂತರಿಸಿದರು. ಘಟಕದಲ್ಲಿ ಅಪರಾಧ ಪತ್ತೆ, ಸ್ಫೋಟಕ, ಮಾದಕ ದ್ರವ್ಯ ಪತ್ತೆಯ ಸಮಯದಲ್ಲಿ ತರಬೇತು ಹೊಂದಿದ ಶ್ವಾನಗಳನ್ನು ಬಳಸಲಾಗುತ್ತಿದೆ. ಪೂವಯ್ಯ ಅವರ ಕೊಡುಗೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದು ಮಣಿ ಶ್ಲಾಘಿಸಿದ್ದಾರೆ.



