ಜಿಲ್ಲಾಮಟ್ಟದ ಫುಟ್ಬಾಲ್‌ ಪಂದ್ಯಾವಳಿ – ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಪಿ.ಯು. ಕಾಲೇಜು ಬಾಲಕಿಯರ ತಂಡ ರನ್ನರಪ್‌

Share this post :

ಗೋಣಿಕೊಪ್ಪ : ಪೊನ್ನಂಪೇಟೆಯ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಪಿ.ಯು. ಕಾಲೇಜಿನ ಬಾಲಕಿಯರ ತಂಡ ಇತ್ತೀಚೆಗೆ ನಡೆದ ಜಿಲ್ಲಾಮಟ್ಟದ ಫುಟ್ಬಾಲ್‌ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಗಳಿಸಿದೆ.
ಅಮ್ಮತ್ತಿ ಸರ್ಕಾರಿ ಪ್ರೌಢಶಾಲೆಯ ಮೈದಾನದಲ್ಲಿ ನಡೆದ ತಾಲೂಕು ಮಟ್ಟದ ಪಂದ್ಯಾವಳಿಯಲ್ಲಿ ಗೆದ್ದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿತ್ತು. ಗೋಣಿಕೊಪ್ಪ ಕಾಪ್ಸ್‌ನಲ್ಲಿ ನಡೆದ ಜಿಲ್ಲಾಮಟ್ಟದ ಪಂದ್ಯಾವಳಿಯಲ್ಲಿ ರನ್ನರಪ್‌ ಆಗಿ ಹೊರಹೊಮ್ಮಿದೆ. ಶಾಲೆಯ ವಿದ್ಯಾರ್ಥಿನಿಯರಾದ ನಷ್ಮಾ ನೀಲಮ್ಮ, ನಿವೇದಾ ದೇಚಮ್ಮ, ಸಿಯಾ ಗಂಗಮ್ಮ, ಆಕೃತಿ ಬಿ.ಎಂ, ಪ್ರಜ್ಞಾ ಪೊನ್ನಮ್ಮ ಎಂ.ಬಿ, ಪೊನ್ನಮ್ಮ ಎ.ಎಸ್, ಸೃಜಲ್ ಬೋಜಮ್ಮ, ಮುತ್ತಮ್ಮ ಕೆ.ಎಂ, ಪ್ರಾಪ್ತಿ ಪೊನ್ನಮ್ಮ, ಸಿಂಚನ ಪೊನ್ನಮ್ಮ ಎಂ.ಸಿ., ನಕ್ಷಾ ದೇಚಮ್ಮ ಎಂ.ಕೆ, ಪ್ರೀತಲ್ ಕಾವೇರಮ್ಮ ಮತ್ತು ವಂಶಿ ಕಾವೇರಮ್ಮ ಇವರನ್ನು ಪ್ರಾಂಶುಪಾಲೆ ಡಾ.ರೋಹಿಣಿ ತಿಮ್ಮಯ್ಯ ಮತ್ತು ದೈಹಿಕ ಶಿಕ್ಷಣ ನಿರ್ದೇಶಕ ಹರೀಶ್ ಕುಮಾರ್ ಅಭಿನಂದಿಸಿದ್ದಾರೆ.

coorg buzz
coorg buzz