ರಾತ್ರಿ ನಿದ್ರೆಯಲ್ಲಿ ಪದೇಪದೇ ಎಚ್ಚರವಾಗುವುದನ್ನು ನಿರ್ಲಕ್ಷಿಸಬೇಡಿ !!

Health Tips

Share this post :

Coorg Buzz Health Tips : ಮನುಷ್ಯನಿಗೆ ನಿದ್ರೆ ( Sleep) ಬಹಳ ಮುಖ್ಯ. ರಾತ್ರಿ ಸರಿಯಾದ ಸಮಯದಲ್ಲಿ ನಿದ್ರಿಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆದರೆ ಕೆಲವರಿಗೆ ರಾತ್ರಿ ಆಗಾಗ್ಗೆ ಎಚ್ಚರವಾಗುವುದುಂಟು. ಹೀಗೆ ಎಚ್ಚರವಾಗುವುದು ಏಕೆಂದು ತಿಳಿದಿದೆಯಾ.? ಈ ರೀತಿ ಆಗುವುದಕ್ಕೆ ಹಲವಾರು ಕಾರಣಗಳಿದೆ. ಇದನ್ನು ನಿರ್ಲಕ್ಷಿಸಿದರೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗೆ (health problems )ಕಾರಣವಾಗಬಹುದು.

ಆಗಾಗ್ಗೆ ಎಚ್ಚರವಾಗುವುದಕ್ಕೆ ಕಾರಣ..?
ಪ್ರತಿನಿತ್ಯ ಸಮಯಕ್ಕೆ ಸರಿಯಾಗಿ ಮಲಗದಿರುವುದು, ಜೊತೆಗೆ ಮಲಗುವ ಮೊದಲು ಮೊಬೈಲ್, ಟಿವಿ, ಲ್ಯಾಪ್ಟಾಪ್‌ ಮುಂತಾದ ಎಲೆಕ್ಟ್ರಾನಿಕ್ (electronic ) ಸಾಧನಗಳ ಅತಿಯಾದ ಬಳಕೆ ಮಾಡುವುದು ಕೂಡ ನಮ್ಮ ನೆಮ್ಮದಿಯ ನಿದ್ದೆಯನ್ನು ಹಾಳುಮಾಡುತ್ತದೆ. ನಾವು ಸೇವನೆ ಮಾಡುವ ಕೆಲವು ಮಾತ್ರೆ, ಔಷಧಿಗಳು ( tablet ) ಕೂಡಾ ನಿದ್ದೆಗೆಡಿಸುತ್ತದೆ. ಅಸ್ತಮಾ, ಆಸಿಡ್ ರಿಫ್ಲಕ್ಸ್, ಆಗಾಗ ಕಂಡು ಬರುವ ಮೂತ್ರ ವಿಸರ್ಜನೆಯಂಥ ಆರೋಗ್ಯ ಸಮಸ್ಯೆ, ಮಹಿಳೆಯರಲ್ಲಿ ಮುಟ್ಟಿನ ಸಮಯದಲ್ಲಿ ಹಾರ್ಮೋನು ಬದಲಾವಣೆ ಕೂಡ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ.

ನಿದ್ರೆ ಸಮಸ್ಯೆ ಪರಿಹರಿಸಲು ಕೆಲವು ಪರಿಹಾರ ಕ್ರಮಗಳನ್ನು ನಾವು ಅನುಸರಿಸಬೇಕಾಗುತ್ತದೆ. ರಾತ್ರಿ ಪದೇ ಪದೇ ಎಚ್ಚರವಾಗಿ ನಿದ್ರೆ ಸರಿಯಾಗದಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ವೈದ್ಯರು ಪರೀಕ್ಷಿಸಿ ಅದಕ್ಕೆ ತಕ್ಕನಾದ ಪರಿಹಾರವನ್ನು ಸೂಚಿಸುತ್ತಾರೆ. ಜೊತೆಗೆ ಪ್ರತಿದಿನ ಒಂದೇ ಸಮಯಕ್ಕೆ ಮಲಗಿ ಮತ್ತು ಎದ್ದೇಳುವ ಅಭ್ಯಾಸವನ್ನು ರೂಢಿಸಿಕೊಳ್ಳುವುದು ನಮ್ಮ ಉತ್ತಮ ಆರೋಗ್ಯಕ್ಕೆ ಬಹಳ ಉಪಯೋಗಕಾರಿ. ಸಂಜೆ ಮತ್ತು ರಾತ್ರಿ ಸಮಯದಲ್ಲಿ ಕೆಫೀನ್ ಅಂಶವಿರುವ ಪಾನೀಯ ಸೇವಿಸುವುದರಿಂದ ದೂರವಿರುವುದು ಉತ್ತಮ.