International Yoga Day – 3 ಲಕ್ಷ ಜನರ ಸಮ್ಮುಖದಲ್ಲಿ ಪ್ರಧಾನಿ ಮೋದಿ

International yoga day

Share this post :

ಜೂನ್‌ 21 ರಂದು ನಡೆಯುವ  ಅಂತರರಾಷ್ಟ್ರೀಯ ಯೋಗ ದಿನಾಚರಣೆ  (International Yoga Day) ಪ್ರಯುಕ್ತ ಆಂಧ್ರ ಪ್ರದೇಶದಲ್ಲಿ ನಡೆಯುವ ಬೃಹತ್‌ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ( (P.M Narendra Modi ) ಅವರು ಭಾಗವಹಿಸಲಿದ್ದಾರೆ.

ಹಾಗೂ ಇದರ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಎ. ಚಂದ್ರಬಾಬು ನಾಯ್ಡು, ಇಲ್ಲಿ ಸುಮಾರು 3.19 ಲಕ್ಷ ಜನರು ಏಕಕಾಲದಲ್ಲಿ ಯೋಗ (ಮಾಡಬಹುದು ಹಾಗೂ ಆರ್.‌ ಕೆ ಬೀಚ್‌ ನಿಂದ ಭೋಗಪುರಂ ವರೆಗೆ 26 ಕಿ.ಮೀ ವ್ಯಾಪ್ತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.

ಬೆಳಗ್ಗೆ 6:30 ರಿಂದ 8 ರವರೆಗೆ ನಿಗದಿಯಾಗಿರುವ ಈ ಕಾರ್ಯಕ್ರಮದಲ್ಲಿ ಬುಡಕಟ್ಟು ಸಮುದಾಯಕ್ಕೆ ಸೇರಿದ  25,000 ವಿದ್ಯಾರ್ಥಿಗಳು 108 ನಿಮಿಷ ಸೂರ್ಯ ನಮಸ್ಕಾರ ಮಾಡಿದ ದಾಖಲೆ ಬರೆಯುವುದು ಇದರ ಉದ್ದೇಶ ಎಂದು ಹೇಳಿದ್ದಾರೆ.