ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ (Heart attack) ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತದೆ. ಇದಕ್ಕೆ ಬೇರೆ ಬೇರೆ ಕಾರಣಗಳಿದೆ, ಹೃದಯಾಘಾತದಿಂದ ತಪ್ಪಿಸಿಕೊಳ್ಳಲು ಮಾತ್ರೆಯೊಂದೇ ಪರಿಹಾರವಲ್ಲ.ಇದು ಬಹುಮುಖ್ಯವಾದ ವಿಷಯ. ಇತ್ತೀಚೆಗೆ ಹೃದಯಾಘಾತದ ಪ್ರಕರಣಗಳು ಜಾಗತಿಕವಾಗಿ ಹೆಚ್ಚಾಗುತ್ತಿರುವುದು ನಿಜ. ಜೀವನಶೈಲಿ, ಆಹಾರ, ಮಾನಸಿಕ ಒತ್ತಡ ಮತ್ತು ಶಾರೀರಿಕ ಚಟುವಟಿಕೆಗಳ ಕೊರತೆ ಈ ಬೆಳವಣಿಗೆಗೆ ಕಾರಣವಾಗಿವೆ. ಈ ಹೃದಯಾಘಾತವನ್ನು ಆಹಾರದಿಂದಲ್ಲೇ ತಡೆಗಟ್ಟಬಹುದು ಎಂಬುದನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.
ಜಪಾನ್ನ 9Japan) ಟೋಕಿಯೊದಲ್ಲಿರುವ ಟೊಹೊ ವಿಶ್ವವಿದ್ಯಾಲಯದ (Toho University) ಹೊಸ ಸಂಶೋಧನೆಯ ಪ್ರಕಾರ, ಅಕ್ಕಿ, ಕಾಫಿ ಮತ್ತು ಪಾಲಕ್ನಂತಹ ಸಾಮಾನ್ಯ ಆಹಾರಗಳಲ್ಲಿ ಕಂಡುಬರುವ ಫೆರುಲಿಕ್ ಆಮ್ಲ ಎಂಬ ನೈಸರ್ಗಿಕ ಉತ್ಕರ್ಷಣ ನಿರೋಧಕ ಹೃದಯಕ್ಕೆ ಪ್ರಮುಖ ಔಷಧವಾಗಿದೆ ಎಂದು ಹೇಳಿದ್ದಾರೆ.
ದಿ ಸನ್ ವರದಿಯ ಪ್ರಕಾರ, ಡಾ. ಕೆಂಟೊ ಯೋಶಿಯೋಕಾ ಅವರ ನೇತೃತ್ವದಲ್ಲಿ ಮತ್ತು Journal of Cardiovascular Pharmacologyನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಎದೆ ನೋವು, ಹೃದಯಾಘಾತ ಮತ್ತು ಇತರ ಗಂಭೀರ ಹೃದಯ ಸಂಬಂಧಿ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಫೆರುಲಿಕ್ ಆಮ್ಲ ಪ್ರಮುಖ ಪಾತ್ರ ವಹಿಸಬಹುದು ಎಂದು ತಿಳಿಸಲಾಗಿದೆ.
ಈ ಸಂಶೋಧನೆಯಲ್ಲಿ ಮಾನವ ಹೃದಯದ ಶಾಖಾಹಾರದ ಮೂಲದ ರಚನೆಗೆ ಹತ್ತಿರವಾದ ಹಂದಿಯ ಅಪಧಮನಿ (artery) ನಾಳಗಳು ಬಳಸಿ ಅಧ್ಯಯನ ನಡೆಸಲಾಗಿದೆ. ಇದರ ಫಲಿತಾಂಶಗಳು ಸೂಚಿಸುತ್ತವೆ: ಫೆರುಲಿಕ್ ಆಮ್ಲವು ಹೃದಯದ ಅತಿಯಾದ ಸಂಕೋಚನವನ್ನು (constriction) ಕಡಿಮೆ ಮಾಡುತ್ತದೆ ಮತ್ತು ಹೃದಯದ ತೀವ್ರ ಒತ್ತಡದ ಪರಿಸ್ಥಿತಿಗಳನ್ನು ತಡೆಯಲು ಸಹಾಯ ಮಾಡುತ್ತದೆ.
ಈ ಆಮ್ಲದ ಪ್ರಭಾವದಿಂದ, ಹೃದಯಾಘಾತಕ್ಕೆ ಕಾರಣವಾಗುವ ಅಂಶಗಳನ್ನು ನಿಭಾಯಿಸಲು ಸಾಧ್ಯವಿದೆ. ಇದು ನೈಸರ್ಗಿಕವಾಗಿ ಸಸ್ಯಗಳಲ್ಲಿ ದೊರೆಯುತ್ತದೆ ಹಾಗೂ ಭವಿಷ್ಯದ ಹೃದಯ ಚಿಕಿತ್ಸೆಗಾಗಿ ಬಲವಾದ ಆಯ್ಕೆಯಾಗಬಹುದು ಎಂದು ಹೇಳಿದ್ದಾರೆ.
ಹೃದಯ ಸಮಸ್ಯೆಗಳಿರುವ ರೋಗಿಗಳಿಗೆ ಸಾಮಾನ್ಯವಾಗಿ ವಾಸೋಡಿಲೇಟರ್ ಔಷಧವಾದ ಡಿಲ್ಟಿಯಾಜೆಮ್ಗಿಂತ ಈ ಫೆರುಲಿಕ್ ಆಮ್ಲ ತುಂಬಾ ಉತ್ತಮ. ಫೆರುಲಿಕ್ ಆಮ್ಲವು ಸಸ್ಯ ಆಧಾರಿತ ಮತ್ತು ಸುರಕ್ಷಿತವೆಂದು ಹೇಳಲಾಗಿದೆ. ಇದು ಆರೋಗ್ಯಕರ ಆಹಾರ ಪದಾರ್ಥ, ಇದು ಭವಿಷ್ಯದ ಹೃದಯ ಔಷಧಿಗಳಿಗೆ ಅಡಿಪಾಯವಾಗಲಿದೆ ಎಂದು ಹೇಳಲಾಗಿದೆ ಎಂದು ಜರ್ನಲ್ ಆಫ್ ಕಾರ್ಡಿಯೋವಾಸ್ಕುಲರ್ ಫಾರ್ಮಾಕಾಲಜಿ ಡಾ. ಯೋಶಿಯೋಕಾ ತಿಳಿಸಿದ್ದಾರೆ.