ದೈನಂದಿನ ಚಟುವಟಿಕೆಯಲ್ಲಿ ಒಂದು ಬೆಳಗ್ಗೆ ಎದ್ದ ತಕ್ಷಣ ಹಾಗೂ ರಾತ್ರಿ ಮಲಗುವ ಮುನ್ನ ಬ್ರಷ್ ಮಾಡುವುದು, ಆದ್ರೆ ಕೆಲವರು ಒಂದೇ ಬ್ರಷ್ನಲ್ಲಿ ಹಲ್ಲುಜ್ಜುವ ವರ್ಷವಾದ್ರು ಒಂದೇ ಬ್ರಷ್ನಲ್ಲಿ ಹಲ್ಲುಜ್ಜುತ್ತಾರೆ. ಇದರಿಂದ ಒಳ್ಳೆಯದಕ್ಕಿಂತ ಅಪಾಯವೇ ಜಾಸ್ತಿ ಹಲ್ಲುಜ್ಜುವ ಬ್ರಷ್ಗೆ ಅದರದೆ ಆದ ಟೈಮ್ ಇರುತ್ತೆ. ಇಂತಿಷ್ಟು ಸಮಯಗಳಿಗೊಮ್ಮೆ ಹಲ್ಲುಜ್ಜುವ ಬ್ರಷನ್ನು ಬದಲಾಯಿಸಲೇಬೇಕು .ಹಾಗದ್ರೆ ಬ್ರಷನ್ನು ಎಷ್ಟು ಸಮಯಕ್ಕೊಮ್ಮೆ ಬದಲಾಯಿಸಬೇಕು?
ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಟೂತ್ ಬ್ರಷ್ಗಳು (toothbrush) ಮುಖ್ಯ ಪಾತ್ರ ವಹಿಸುತ್ತವೆ. ಈಗಿನ ಕಾಲದಲ್ಲಿ ಎಲ್ಲಾರು ಟೂತ್ ಬ್ರಷ್ನ್ನೆ ಬಳಸುತ್ತಾರೆ. ಆದರೆ ಅಂದು ಬೇವಿನ ಕಡ್ಡಿಗಳಲ್ಲಿ ಹಲ್ಲುಜ್ಜುತ್ತಿದ್ದರು. ಅದು ಮಾತ್ರವಲ್ಲ ಸವೆದು ಹೋಗೋ ವರೆಗೂ ಅದೇ ಒಂದು ಬ್ರಷ್ನಲ್ಲಿಯೇ ಹಲ್ಲುಜ್ಜುತ್ತಾರೆ. ಆದ್ರೆ ಒಂದೇ ಬ್ರಷನ್ನು ಬಳಸುವುದು ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ. ಹಾಗಿದ್ರೆ ಒಂದೇ ಟೂತ್ ಬ್ರಷನ್ನು ದೀರ್ಘ ಕಾಲ ಬಳಸಿದ್ರೆ ಏನಾಗುತ್ತದೆ? ಹಲ್ಲುಜ್ಜುವ ಬ್ರಷನ್ನು ಎಷ್ಟು ಸಮಯಕ್ಕೊಮ್ಮೆ (how often you should change toothbrush) ಬದಲಾಯಿಸುತ್ತಿರಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಹಲ್ಲುಜ್ಜುವ ಬ್ರಷನ್ನು ಎಷ್ಟು ಸಮಯಕ್ಕೊಮ್ಮೆ ಬದಲಾಯಿಸುತ್ತಿರಬೇಕು?
ಬ್ರಷ್ ಎಷ್ಟೇ ಗುಣಮಟ್ಟದ್ದಾಗಿದ್ದರೂ 12 ರಿಂದ 16 ವಾರಗಳ ನಂತರ ಅಥವಾ ನಾಲ್ಕು ತಿಂಗಳಿಗೊಮ್ಮೆ ಆ ಬ್ರಷನ್ನು ಬದಲಾಯಿಸಲೇಬೇಕು. ಹೀಗೆ ಕಾಲ ಕಾಲಕ್ಕೆ ಬ್ರಷ್ ಬದಲಾಯಿಸದೇ ಹೋದರೆ, ಆರೋಗ್ಯ ಸಮಸ್ಯೆಗಳು ಕಾಡುತ್ತವೆ ಮಾತ್ತು ಇದರಿಂದ ಬ್ಯಾಕ್ಟೀರಿಯಾಗಳು ಹಲ್ಲುಜ್ಜುವ ಬ್ರಷ್ನಲ್ಲಿ ಸಂಗ್ರಹವಾಗಬಹುದು, ಹಾಗಾಗಿ ಆಗಾಗ್ಗೆ ಟೂತ್ ಬ್ರಷ್ ಬಳಸುವುದು ಉತ್ತಮ.