RCB ಫ್ಯಾನ್ಸ್ ಗಮನಕ್ಕೆ: ಬೆಂಗಳೂರಿನಲ್ಲಿ ವಿಜಯಯಾತ್ರೆ… ಸಮಯ, ಎಲ್ಲಿಂದ-ಎಲ್ಲಿಗೆ?

Royal Challengers Bangalore

Share this post :

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸೀಸನ್-18ರ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಟ್ರೋಫಿಗೆ ಮುತ್ತಿಟ್ಟಿದೆ. ಇಂದು ರಾಜಧಾನಿ ಬೆಂಗಳೂರಿನಲ್ಲಿ (Bengaluru) ಆರ್‌ಸಿಬಿ ವಿಜಯಯಾತ್ರೆ ನಡೆಯಲಿದೆ. ಟ್ರೋಫಿ ಜೊತೆ ತಂಡದ ಆಟಗಾರರು ಮೆರವಣಿಗೆಯಲ್ಲಿ ಭಾಗಿಯಾಗಲಿದ್ದಾರೆ. ಅಹಮದಾಬಾದ್​ನಿಂದ ಆರ್​ಸಿಬಿ ತಂಡವು ವಿಶೇಷ ವಿಮಾನದ ಮೂಲಕ ಇಂದು ಮಧ್ಯಾಹ್ನ 1.30ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದು, ಆ ಬಳಿಕ ವಿಜಯಯಾತ್ರೆಗೆ ಸಿದ್ಧತೆಯನ್ನು ನಡೆಸಲಿದೆ.

ಸಂಜೆ 3.30 ಕ್ಕೆ ಬೆಂಗಳೂರಿನ ವಿಧಾನಸೌಧದಿಂದ ಆರ್​​ಸಿಬಿ ತಂಡದ ವಿಜಯಯಾತ್ರೆ ಆರಂಭವಾಗಲಿದ್ದು, ಎಂ. ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ಈ ಪರೇಡ್ ನಡೆಯಲಿದೆ. ವರದಿಗಳ ಪ್ರಕಾರ, ವಿಜಯಯಾತ್ರೆ ವೇಳೆ 2024 ರಲ್ಲಿ ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಆರ್​ಸಿಬಿ ಮಹಿಳಾ ತಂಡವನ್ನು ಸಹ ಕರೆತರುವ ಸಾಧ್ಯತೆಯಿದೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಎರಡು ಟ್ರೋಫಿಗಳೊಂದಿಗೆ ವಿಜಯಯಾತ್ರೆ ನಡೆಸಬಹುದು. ಇನ್ನು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್​ಸಿಬಿ ತಂಡದ ವಿಜಯೋತ್ಸವ ನಡೆಯಲಿದೆಯಾ ಎಂಬುದರ ಬಗ್ಗೆ ಖಚಿತ ಮಾಹಿತಿ ಹೊರಬಿದ್ದಿಲ್ಲ.

ಆರ್‌ಸಿಬಿ ತಂಡ ಕೋಟ್ಯಾಂತರ ಅಭಿಮಾನಿಗಳ 18 ವರ್ಷಗಳ ಕನಸು ನನಸು ಮಾಡಿರುವುದಕ್ಕೆ ಅರ್ಧ ದಿನದ ಸಂಬಳ ಹೋದರೂ ಪರವಾಗಿಲ್ಲ, ಇವತ್ತು ಅರ್ಧ ದಿನವಷ್ಟೆ ಕೆಲಸ ಮಾಡೋದು, ಇನ್ನೂ ಅರ್ಧದಿನವನ್ನು ಆರ್ಸಿಬಿ ಜೊತೆ ಸೇರಿ ಸೆಲಬ್ರೇಟ್ ಮಾಡ್ತೇವೆ ಎಂದು ಫ್ಯಾನ್ಸ್ ಹೇಳಿಕೊಂಡಿದ್ದಾರೆ.